BBK 12 Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್‌ ಆಗಿದ್ದು, ಸರಿಯಾದ ನಿರ್ಧಾರಗಳನ್ನು ತಗೊಳ್ಳೋದಿಲ್ಲ, ಕಾವ್ಯ ಶೈವ ಅವರಿಗೆ ಫೇವರ್‌ ಆಗಿರುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಖಾಸಗಿ ಕಂಪೆನಿ HR ಬರೆದ ಬರೆಹ ಇಲ್ಲಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗಿಲ್ಲಿ ನಟನ ಆಟದ ಬಗ್ಗೆ ಖಾಸಗಿ ಕಂಪೆನಿಯೊಂದರ HR ಆಗಿರುವ ಸಂಕೇತ್‌ ದೇವನಹಳ್ಳಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಬರಹವಿದು. 

ಬಿಗ್ ಬಾಸ್ 12 ಫೈನಲ್ ಹತ್ತಿರ ಬರುತ್ತಿದ್ದಂತೆ ಒಂದು ಆಸಕ್ತಿಕರವಾದ ಸಂಗತಿ ಮತ್ತೆ ನಡೆಯುತ್ತಿದೆ. ಇತ್ತೀಚೆಗೆವರೆಗೆ “ಈ ಸೀಸನ್‌ನ ಮುಖ್ಯ ಎಂಟರ್ಟೈನರ್” ಎಂದು ಜನರ ಮೆಚ್ಚುಗೆ ಪಡೆದ ಗಿಲ್ಲಿ ಬಗ್ಗೆ, ಈಗ ಅಚಾನಕ್ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಮಾತುಗಳು ಹೆಚ್ಚಾಗಿವೆ. ಇದು ಕೇವಲ ಟ್ರೆಂಡ್ ಅಲ್ಲ. ಇದು ಪ್ರತಿ ಸೀಸನ್‌ನಲ್ಲಿ ಫೈನಲ್ ಹತ್ತಿರ ಬಂದಾಗ ಮರುಕಳಿಸುವ ಒಂದು ಮಾನವ ಸ್ವಭಾವದ ಪ್ಯಾಟರ್ನ್. 

𝗛𝗥 ದೃಷ್ಟಿಯಿಂದ ನೋಡಿದರೆ, ಇದಕ್ಕೆ ಕೆಲವು ಬಹಳ ಸ್ಪಷ್ಟ ಕಾರಣಗಳಿವೆ

1) ಒಬ್ಬನು ಹೊರಹೊಮ್ಮುತ್ತಿದ್ದಂತೆ ಗುಂಪಿಗೆ ಅಸೌಕರ್ಯ ಶುರುವಾಗುತ್ತದೆ

ಒಬ್ಬ ಸ್ಪರ್ಧಿ ಸ್ಪಷ್ಟವಾಗಿ ಜನಪ್ರಿಯನಾಗುತ್ತಾನೆ, ಅವನು ಸ್ಕ್ರೀನ್‌ ಅಲ್ಲಿ ಕಾಣೋದು ಹೆಚ್ಚಾಗುತ್ತೆ, ಜನರ ಗಮನ ಅವನತ್ತ ಹೋಗುತ್ತದೆ — ಅಂದಮೇಲೆ ಉಳಿದವರಿಗೆ ಅಸಹಜತೆ ಶುರುವಾಗುತ್ತದೆ.

HR ಭಾಷೆಯಲ್ಲಿ ಇದನ್ನು “Status Threat” ಎಂದು ಕರೆಯಬಹುದು.

ಅಂದರೆ, “ನನ್ನ ಸ್ಥಾನ ಕಳೆದುಕೊಳ್ಳುವ ಭೀತಿ.”

ಇದು ಕೆಲಸದ ಜಗತ್ತಲ್ಲೂ ನಡೆಯುತ್ತದೆ.

ಒಬ್ಬ ಟಾಪ್‌ ಪರ್ಫಾರ್ಮರ್ ಬೆಳಕಿಗೆ ಬಂದಾಗ, ಮೊದಲು ಮೆಚ್ಚುತ್ತಾರೆ… ಆದರೆ ನಂತರ ಅದೇ “ಒಳ್ಳೆಯವರು” ಅವನ ಬಗ್ಗೆ ಟೀಕೆ ಮಾಡಲು ಆರಂಭಿಸುತ್ತಾರೆ.

2) ಸ್ಟ್ರಾಂಗ್ ಪ್ಲೇಯರ್ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗುತ್ತದೆ

ಗಿಲ್ಲಿ ಮಾತ್ರವಲ್ಲ ಯಾರು ಮುಂಚೂಣಿಯಲ್ಲಿರ್ತಾರೋ, ಯಾರು ಹೆಚ್ಚು ಪ್ರಭಾವ ಬೀರುತ್ತಾರೋ, ಅವರ ಮೇಲೆ ಜನರ ನಿರೀಕ್ಷೆ ತುಂಬಾ ಹೆಚ್ಚಾಗುತ್ತದೆ. ಅವನು ಮೌನವಾಗಿದ್ದರೂ: “ಏನು ಡೌನ್ ಆಗಿದ್ದಾನೆ?” ಅವನು ಜೋರಾಗಿದ್ದರೂ: “ಓವರ್ ಆಗ್ತಾನೆ.”

HRನಲ್ಲಿ ಇದನ್ನು “Double Bind” ಅಂತ ಕರೀತಾರೆ.

ಅಂದರೆ ಯಾವ ಆಯ್ಕೆ ಮಾಡಿದರೂ ಟೀಕೆ ತಪ್ಪದ ಪರಿಸ್ಥಿತಿ. ಕೆಲಸದ ಜಗತ್ತಲ್ಲೂ ಇದೇ:

ಲೀಡರ್ ಆಗಿದ್ದರೆ “ಅತಿ ಕಠಿಣ” ಅಂತಾರೆ, ಸೌಮ್ಯವಾಗಿದ್ದರೆ “ಕಂಟ್ರೋಲ್ ಇಲ್ಲ” ಅಂತಾರೆ.

3) ಫೈನಲ್ ಹತ್ತಿರ ಬಂದಾಗ “Narrative War” ಶುರುವಾಗುತ್ತದೆ

ಫೈನಲ್ ಹತ್ತಿರ ಬಂದಾಗ ಆಟ ಟಾಸ್ಕ್ ಅಥವಾ ಪರ್ಫಾರ್ಮೆನ್ಸ್ ನಲ್ಲಿ ಇರೋದಿಲ್ಲ. ಅದು Perception (ಜನರಿಗೆ ಕಾಣಿಸುವ ಚಿತ್ರ) ಆಗಿಬಿಡುತ್ತದೆ. HRನಲ್ಲಿ ಇದನ್ನು “Perception Management” ಅಂತ ಕರೆಯುತ್ತೇವೆ. ಅಂದರೆ ಜನರ ಮನಸ್ಸಿನಲ್ಲಿ ಕಥೆ ಕಟ್ಟುವುದು.

ಹೇಗೆ?

ಒಂದು ಕ್ಲಿಪ್ ಕಟ್ ಮಾಡಿ ಬೇರೆ ಅರ್ಥ ಕೊಡುವುದು

ಒಂದು ತಪ್ಪನ್ನೇ ದೊಡ್ಡದಾಗಿ ತೋರಿಸುವುದು

ಒಟ್ಟಿನಲ್ಲಿ ಒಬ್ಬರ ಬಗ್ಗೆ ಒಂದು image create ಮಾಡುವುದು

ಕಾರ್ಪೊರೇಟ್‌ನಲ್ಲೂ ಇದೇ.

Promotion ಸಮಯದಲ್ಲಿ “performance” ಕ್ಕಿಂತ “narrative” ಹೆಚ್ಚು ಕೆಲಸ ಮಾಡುತ್ತದೆ.

4) ಗುಂಪಿನ ಒಗ್ಗಟ್ಟು ಉಳಿಸಲು ಒಬ್ಬರನ್ನು ಬಲಿ ಕೊಡುತ್ತಾರೆ

ಒಂದು ಗುಂಪಿನಲ್ಲಿ ಬಲವಾದ ವ್ಯಕ್ತಿ ಇದ್ದಾಗ, ಉಳಿದವರು ಒಟ್ಟಾಗಿ ಅವನ ವಿರುದ್ಧ ನಿಲ್ಲುವುದು ಸಾಮಾನ್ಯ.

Social Psychology ಯಲ್ಲಿ ಇದನ್ನು “Scapegoating” ಅಂತ ಕರೀತಾರೆ.

ಅಂದರೆ, “ಗುಂಪಿನ ಒಗ್ಗಟ್ಟು ಉಳಿಸಲು” ಒಬ್ಬರನ್ನು target ಮಾಡುವುದು.

ಯಾಕಂದ್ರೆ ಒಬ್ಬರನ್ನು target ಮಾಡಿದರೆ ಉಳಿದವರು ಒಂದಾಗಿ ಕಾಣುತ್ತಾರೆ.

ಇದು ಅವರಿಗೆ ತಾತ್ಕಾಲಿಕ ಶಕ್ತಿ ನೀಡುತ್ತದೆ.

5) ಗೆಲ್ಲುವವರನ್ನು ಕೆಳಗೆ ಇಳಿಸಿದರೆ, ತಮ್ಮ ಸೋಲಿಗೆ ಸಮಾಧಾನ ಸಿಗುತ್ತದೆ

ಒಬ್ಬ ಸ್ಪರ್ಧಿ ಗೆಲ್ಲುವ ಹಂತಕ್ಕೆ ಬಂದಾಗ, ಅವನನ್ನು ಕೆಳಗೆ ಇಳಿಸಿದರೆ ಉಳಿದವರಿಗೆ ಮನಸ್ಸಿನ ಸಮಾಧಾನ ಸಿಗುತ್ತದೆ:

“ಅವನು deserving ಅಲ್ಲ”

“ಅವನಿಗೆ luck ಇದೆ”

“ಅವನು overacting”

“ಇವನ ಪರ biased editing”

HRನಲ್ಲಿ ಇದನ್ನು “Self-Justification Bias” ಅಂತ ಕರೀತಾರೆ.

ಅಂದರೆ ತಮ್ಮ ಸೋಲಿಗೆ ಬೇರೆ ಕಾರಣ ತಂದುಕೊಂಡು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದು.

ಕೆಲಸದ ಜಗತ್ತಲ್ಲೂ ಇದೇ.

ನಮ್ಮ ಪ್ಲ್ಯಾನ್ ಕೆಲಸ ಆಗದೇ ಹೋದಾಗ “ಆ ವ್ಯಕ್ತಿಗೆ favoritism ಇದೆ” ಅಂತ ಹೇಳುವ tendency ಬರುತ್ತದೆ.

6) ಜನಪ್ರಿಯತೆಯ ಜೊತೆಗೆ “Visibility Cost” ಕೂಡ ಬರುತ್ತದೆ

ಗಿಲ್ಲಿ ಹೆಚ್ಚು ಕಾಣಿಸುತ್ತಾನೆ.

ಹೆಚ್ಚು ಮಾತಾಡುತ್ತಾನೆ.

ಹೆಚ್ಚು reactions ಕೊಡುತ್ತಾನೆ.

ಅಷ್ಟೇ ಸಾಕು — ಅವನ ತಪ್ಪುಗಳು ಕೂಡ ಹೆಚ್ಚು ಕಾಣಿಸುತ್ತವೆ.

HRನಲ್ಲಿ ಇದನ್ನು “Visibility Tax” ಅಂತ ಹೇಳಬಹುದು.

ಹೆಚ್ಚು visible ಇದ್ದಷ್ಟು scrutiny ಕೂಡ ಹೆಚ್ಚು.

ನಮ್ಮ ಕೆಲಸದ ಜಗತ್ತಲ್ಲೂ ಇದೇ:

ಅತಿ active employee ಮೇಲೆ complaints ಹೆಚ್ಚು ಬರುತ್ತವೆ.

Silent ಆಗಿ ಇರುವವರು ತಪ್ಪು ಮಾಡಿದರೂ ಅದು ಬಹುಶಃ ಕಾಣೋದಿಲ್ಲ.

ಹಾಗಾದರೆ ಇದು ಪ್ರತಿ ಸೀಸನ್‌ನಲ್ಲಿ ಏಕೆ ಮರುಕಳಿಸುತ್ತದೆ?

ಯಾಕಂದ್ರೆ ಇದು BB pattern ಅಲ್ಲ. ಇದು ಮಾನವ ಸ್ವಭಾವದ pattern.

ಯಾವಾಗಲೂ ಹೀಗೇ ಆಗುತ್ತದೆ

ಒಬ್ಬನು ಹೊರಹೊಮ್ಮುತ್ತಾನೆ

ಉಳಿದವರಿಗೆ threat ಅನ್ನಿಸುತ್ತದೆ

narrative shift ಆಗುತ್ತದೆ

clip-cut + criticism ಆರಂಭವಾಗುತ್ತದೆ

fan groups campaign ಮಾಡುತ್ತವೆ

ಗೆಲ್ಲುವವನ ಮೇಲೆ target ಇನ್ನಷ್ಟು ಗಟ್ಟಿಯಾಗುತ್ತದೆ