BBK 12: ಗಿಲ್ಲಿ ಜೊತೆ ಕಾಣಿಸಿಕೊಂಡಿದ್ದೇ ತಡ.. ಸೋಶಿಯಲ್ ಮೀಡಿಯಾ ಸ್ಟಾರ್ ಆದ ಮೋನಿಕಾ
BBK 12: ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಹೊಸ ಸೀರಿಯಲ್ ‘ಗೌರಿ ಕಲ್ಯಾಣ’ ತಂಡ ಭೇಟಿ ನೀಡಿತ್ತು. ಈ ತಂಡದಲ್ಲಿದ್ದ ನಟಿ ಸಹನಾ ಶೆಟ್ಟಿ, ಗಿಲ್ಲಿ ನಟನ ಜೊತೆ ಮಾತನಾಡಿದ್ದು, ಗಿಲ್ಲಿ ನಟ ನಟಿಯನ್ನು ಇಂಪ್ರೆಸ್ ಮಾಡಿದ ವಿಡೀಯೋಗಳು ಬಿಡುಗಡೆಯಾಗುತ್ತಿದ್ದರೆ ನಟಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಳೆದ ವಾರಾಂತ್ಯದಲ್ಲಿ ‘ಗೌರಿ ಕಲ್ಯಾಣ’ ತಂಡ ಹಾಜರಾಗಿತ್ತು, ಈ ವೇಳೆ ಸೀರಿಯಲ್ಲಿ ಮೋನಿಕಾ ಪಾತ್ರ ಮಾಡಲಿರುವ ನಟಿ ಸಹನಾ ಶೆಟ್ಟಿ ಜೊತೆ ಗಿಲ್ಲಿ ನಟ ಡೈಲಾಗ್ ಹೇಳಿದ್ದರು, ಜೊತೆಗೆ ಒಂದಷ್ಟು ತಮಾಷೆ, ತರಲೆ ಮಾತು ಕತೆ ಕೂಡ ನಡೆದಿತ್ತು. ಅದರಿಂದ ನಟಿ ಫುಲ್ ಫೇಮಸ್ ಆಗಿದ್ದಾರೆ.
ಗಿಲ್ಲಿನಟ
ಬಿಗ್ ಬಾಸ್ ನಿಂದಾಗಿ ಗಿಲ್ಲಿ ನಟನಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಗಿಲ್ಲಿನಟನ ತಮಾಷೆ, ಕಾಮಿಡಿ ಟೈಮಿಂಗ್ಸ್, ಮಾತು ಎಲ್ಲವನ್ನು ಜನರು ಇಷ್ಟಪಡುತ್ತಿದ್ದರು, ಹಾಗಾಗಿ ಗಿಲ್ಲಿ ಪರವಾಗಿ ಯಾರೇ ಹೇಳಿಕೆ ಕೊಟ್ಟರು ಅವರು ಫೇಮಸ್ ಆಗುವ ಮಟ್ಟಿಗೆ ಗಿಲ್ಲಿ ನಟ ಸದ್ದು ಮಾಡುತ್ತಿದ್ದಾರೆ.
ಮೋನಿಕಾನ ಇಂಪ್ರೆಸ್ ಮಾಡಿದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ನೀಡಿದ ಟಾಸ್ಕ್ ಒಂದರಲ್ಲಿ ‘ಗೌರಿ ಕಲ್ಯಾಣ’ ಧಾರಾವಾಹಿಯಲ್ಲಿ ಮೋನಿಕಾ ಪಾತ್ರವನ್ನು ಮಾಡುತ್ತಿರುವ ಸಹನಾ ಶೆಟ್ಟಿಯನ್ನು ಇಂಪ್ರೆಸ್ ಮಾಡಬೇಕು ಎಂದು ಗಿಲ್ಲಿಗೆ ಹೇಳಲಾಗಿತ್ತು. ಈ ಸಂದರ್ಭದಲ್ಲಿ ಮೋನಿಕಾಗೋಸ್ಕರ ಗಿಲ್ಲಿ ಒಂದು ಕವನ ಕೂಡ ಬರೆದಿದ್ದಾರೆ.
ಏನ್ ಕವನ ಹೇಳಿದ್ರು ಗಿಲ್ಲಿ
‘ಮೋನಿಕಾ, ಬೇಡ ನಿನನಗೆ ಆತಂಕ, ಜೊತೆಗೆ ಇರ್ತೀನಿ ಕೊನೆ ತನಕ’ ಎಂದು ಗಿಲ್ಲಿ ಹೇಳಿದಾಗ, ತಾಯಿ ಪಾತ್ರಧಾರಿ, ‘ನಾನು ಇಂಪ್ರೆಸ್ ಆಗಿಲ್ಲ’ ಎಂದರು. ಆಗ ಮೋನಿಕಾ ‘ನಾನು ಇಂಪ್ರೆಸ್ ಆದೆ ಅಮ್ಮ’ ಎಂದಿದ್ದಾರೆ. ಈ ವಿಡಿಯೋ ಸಖತ್ ಕ್ಯೂಟ್ ಆಗಿದ್ದು. ಟ್ರೋಲ್ ಪೇಜ್ಗಳಲ್ಲಿ ಈ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೋನಿಕಾ ಕ್ಯೂಟ್ ನೆಸ್ ಗೆ ಅಭಿಮಾನಿಗಳು ಮನಸೋತಿದ್ದಾರೆ.
ಒಂದೇ ನೈಟಲ್ಲಿ ಸ್ಟಾರ್ ಆದ ನಟಿ
ಗಿಲ್ಲಿ ಜೊತೆ ಕಾಣಿಸಿಕೊಂಡಿದ್ದೇ ತಡ ಗಿಲ್ಲಿ ಅಭಿಮಾನಿಗಳು ನಟಿಯ ಇನ್’ಸ್ಟಾಗ್ರಾಂ ಖಾತೆಯನ್ನು ಹುಡುಕಿ ಫಾಲೋ ಮಾಡುತ್ತಿದ್ದಾರೆ. ಆರಂಭದಲ್ಲಿ 98K ಇದ್ದ ಫಾಲೋವರ್ಸ್, ಇದೀಗ 109K ಆಗ್ಬಿಟ್ಟಿದ್ದಾರೆ, ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಹಾಗಾಗಿ ಒಂದೇ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ ಮೋನಿಕಾ.
ಯಾರು ಈ ಸಹನಾ ಶೆಟ್ಟಿ
ಸಹನಾ ಶೆಟ್ಟಿ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಾ ಬಂದಿದ್ದಾರೆ. ‘ನನ್ನರಸಿ ರಾಧೆ’ಯಲ್ಲಿ ನಾಯಕನ ತಂಗಿಯಾಗಿ, ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನಾ ಲವರ್ ಪಿಂಕಿಯಾಗಿ ಹಾಗೂ ಲಕ್ಷ್ಮೀ ನಿವಾಸದಲ್ಲಿ ಸಿದ್ಧೇ ಗೌಡ್ರನ್ನು ಮದುವೆಯಾಗುವ ಹುಡುಗಿಯಾಗಿ ಕಾಣಿಸಿಕೊಂಡಿದ್ದರು.
ಗಿಲ್ಲಿ ಬಾಯ್ಸ್ ಗೆ ಥ್ಯಾಂಕ್ಸ್ ಹೇಳಿದ ನಟಿ
ಇದೀಗ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸಹನಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಪೋಸ್ಟ್ ಮಾಡಿ, GILLI boysssssss, thank you all soooooooo much ಎಂದು ಬರೆದುಕೊಂಡಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಗಿಲ್ಲಿ, ಗಿಲ್ಲಿ ಅನ್ನೋದೆ ಕಾಣಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

