MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • TV Talk
  • Krishnavamshi Serial: ಹೀರೋ ಆದ ಯುಟ್ಯೂಬರ್‌ ರೋಹನ್;‌ ಭಾವನಾತ್ಮಕ ಪ್ರಪಂಚಕ್ಕೆ ಹೋಗೋದು ಗ್ಯಾರಂಟಿ

Krishnavamshi Serial: ಹೀರೋ ಆದ ಯುಟ್ಯೂಬರ್‌ ರೋಹನ್;‌ ಭಾವನಾತ್ಮಕ ಪ್ರಪಂಚಕ್ಕೆ ಹೋಗೋದು ಗ್ಯಾರಂಟಿ

Krishnavamshi Kannada Serial: ಉದಯ ಟಿವಿಯಲ್ಲಿ ‘ಕೃಷ್ಣವಂಶಿ’ ಧಾರಾವಾಹಿ ಪ್ರಸಾರ ಆಗಲಿದೆ. ರೋಹನ್ ಎ ಹಾಗೂ ಶಾರದಾ ಪುಂಡಿ ಈ ಧಾರಾವಾಹಿಯಲ್ಲಿ ಲೀಡ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

1 Min read
Author : Padmashree Bhat
| Updated : Feb 24 2026, 02:40 PM IST
Share this Photo Gallery
  • FB
  • TW
  • Linkdin
  • Whatsapp
14
  ‘ಕೃಷ್ಣವಂಶಿ’  ಧಾರಾವಾಹಿ
Image Credit : Asianet News

‘ಕೃಷ್ಣವಂಶಿ’ ಧಾರಾವಾಹಿ

ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಉದಯ ವಾಹಿನಿ ಇದೀಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
‘ಕೃಷ್ಣವಂಶಿ’ ಧಾರಾವಾಹಿ ಕಥೆ ಏನು?
Image Credit : Asianet News

‘ಕೃಷ್ಣವಂಶಿ’ ಧಾರಾವಾಹಿ ಕಥೆ ಏನು?

ಮಾರ್ಚ್ 2 ರಿಂದ ರಾತ್ರಿ 9:30 ಕ್ಕೆ ಪ್ರಸಾರ ಆರಂಭಿಸಲಿರುವ ʻಕೃಷ್ಣವಂಶಿʼ ಧಾರಾವಾಹಿ ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೇಮಕಥಾ ಹಂದರ ಹೊಂದಿದೆ. ಒಳ್ಳೆ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್‌ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಹಿನ್ನೆಲೆಯಾಗಿ ಬಿಟ್ಟಿರಲಾಗದ ತಂದೆಯ ಮಮತೆಯ ಕತೆ ಇದೆ. ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಜೀವಾಳ.

ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆಯೂ ಇದೆ. ಆದರೆ ವಂಶಿಯ ಕನಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ. ಅವಳು ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೇ ಬದುಕುವ ಕನಸು ಹೊತ್ತಿದ್ದಾಳೆ. ಅವಳ ಆಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಸಾಗಲು ಕಷ್ಟಪಡಬೇಕಿದೆ. ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶಿಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾ ಹಂದರ.

Related Articles

Related image1
ಇವ್ರೇ ನನ್ನ ವ್ಯಾಲೆಂಟೈನ್; ಲವ್‌ನಲ್ಲಿ ಬಿದ್ದು, ತೇಲಾಡ್ತಿರೋ ಕನ್ನಡದ ಧಾರಾವಾಹಿ ನಟ-ನಟಿಯರಿವರು!
Related image2
ಅತಿ ಶೀಘ್ರದಲ್ಲೇ ಅಂತ್ಯ ಆಗಲಿರೋ ಸಾಲು ಸಾಲು ಕನ್ನಡ ಧಾರಾವಾಹಿಗಳು! ಯಾವುವು? ಕ್ಲೈಮ್ಯಾಕ್ಸ್‌ನಲ್ಲಿ ಏನಾಗ್ತಿದೆ?
34
ರೋಹನ್‌ ನಟನೆ
Image Credit : Asianet News

ರೋಹನ್‌ ನಟನೆ

ನಾಯಕ ಕೃಷ್ಣನಾಗಿ ರೋಹನ್ ಎ ಹಾಗೂ ನಾಯಕಿ ವಂಶಿಯಾಗಿ ಶಾರದಾ ಪುಂಡಿ ಅಭಿನಯಿಸುತ್ತಿದ್ದು, ಗಿರಿಜಾ ಲೋಕೇಶ್, ಹನುಮಂತೇಗೌಡ, ಹಂಸ, ವಿಜಯ್, ರಜಿನಿ ಟಿ.ಡಿ., ಸಿದ್ದಾರ್ಥ ಮಾಧ್ಯಮಿಕ, ಸಿಂಧೂ ಪಿ., ಸಂದೀಪ್ ಎಸ್.ಆರ್., ಪುಷ್ಪ ಅನಿಲ್‌ ಕುಮಾರ್, ಸುಕೃತಾ ನಾಗ್ ಮತ್ತಿತರರ ತಾರಾಗಣವಿದೆ.

44
ಸೀರಿಯಲ್‌ನಲ್ಲಿರುವ ತಾರಾಬಳಗ
Image Credit : Asianet News

ಸೀರಿಯಲ್‌ನಲ್ಲಿರುವ ತಾರಾಬಳಗ

ಪರಿಣಿತ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ನಿರ್ಮಾಣ ಮಾಡುತ್ತಿರುವ ʻಕೃಷ್ಣವಂಶಿʼ ಧಾರಾವಾಹಿಗೆ ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನವಿದೆ. ತಪ್ಪದೇ ವೀಕ್ಷಿಸಿ, ಮಾರ್ಚ್ 2 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 9:30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ ‘ಕೃಷ್ಣವಂಶಿ’.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
 

Latest Videos
Recommended Stories
Recommended image1
ಲಂಗ-ದಾವಣಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಕಾವ್ಯ ಶೈವ ಇಷ್ಟೊಂದು ಸುಂದರವಾಗಿ ಕಾಣ್ತಾರಾ? ಫೋಟೋಸ್ ನೋಡಿ!
Recommended image2
Amruthadhaare: ಜೈದೇವನ ಕಣ್ಣಿಗೆ ಬಿದ್ದ ಬಡ್ಡಿ ಬಂಗಾರಮ್ಮ! ಭೂಮಿಕಾ ವಿರುದ್ಧ ಶುರುವಾಯ್ತು ಮಹಾತಂತ್ರ
Recommended image3
ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರಹೋಗೋದು ಇವರೇ? ಎಲಿಮಿನೇಷನ್‌ನಲ್ಲಿ ಹೊಸ ಟ್ವಿಸ್ಟ್‌!
Related Stories
Recommended image1
ಇವ್ರೇ ನನ್ನ ವ್ಯಾಲೆಂಟೈನ್; ಲವ್‌ನಲ್ಲಿ ಬಿದ್ದು, ತೇಲಾಡ್ತಿರೋ ಕನ್ನಡದ ಧಾರಾವಾಹಿ ನಟ-ನಟಿಯರಿವರು!
Recommended image2
ಅತಿ ಶೀಘ್ರದಲ್ಲೇ ಅಂತ್ಯ ಆಗಲಿರೋ ಸಾಲು ಸಾಲು ಕನ್ನಡ ಧಾರಾವಾಹಿಗಳು! ಯಾವುವು? ಕ್ಲೈಮ್ಯಾಕ್ಸ್‌ನಲ್ಲಿ ಏನಾಗ್ತಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved