Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂರಜ್ ಹಾಗೂ ರಾಶಿಕಾ ಶೆಟ್ಟಿ ನಡುವೆ ದೊಡ್ಡ ಜಗಳವೇ ಆಗಿದೆ. ಇನ್ನು ಮುಖ ನೋಡಲ್ಲ, ಮಾತಾಡಲ್ಲ ಎಂದು ಹೇಳಿದ್ದ ರಾಶಿಕಾ ಶೆಟ್ಟಿ ಅವರು ಮತ್ತೆ ಸೂರಜ್ ಜೊತೆ ಆರಾಮಾಗಿ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೂರಜ್ ಅವರು ಮೈಕ್ ಹಾಕೋಕೆ ಮರೆತು ಮಾತನಾಡಿದ್ದರು. ಇದನ್ನು ಧನುಷ್ ಪ್ರಶ್ನೆ ಮಾಡಿದಾಗ, ಕ್ಯಾಪ್ಟನ್ ರಾಶಿಕಾ ಶೆಟ್ಟಿ ಅವರು “ಸ್ವಿಮ್ಮಿಂಗ್ ಪೂಲ್‌ಗೆ ಬಂದು ಬೀಳು” ಎಂದು ಹೇಳಿದ್ದಾರೆ.
ನಿಜಕ್ಕೂ ಏನು ನಡೆಯಿತು?
ಸೂರಜ್ ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೀಳೋದಿಲ್ಲ ಎಂದು ಹೇಳಿದ್ದಾರೆ. ಆಮೇಲೆ ಅಶ್ವಿನಿ ಅವರಿಗೆ “ಸೂರಜ್‌ಗೆ ತಿಂಡಿ ಕೊಡಬೇಡಿ” ಎಂದು ಹೇಳಿದ್ದಾರೆ. ಅದಾದ ಬಳಿಕ ರಜತ್ ಅವರ ಬಳಿ ಬಂದು ರಾಶಿಕಾ, “ಸೂರಜ್ ಸ್ವಿಮ್ಮಿಂಗ್ ಪೂಲ್‌ಗೆ ಬೀಳ್ತಿಲ್ಲ, ಅವನನ್ನು ಎತ್ತಿ ಹಾಕಿ, ತಿಂಡಿ ಕೊಡಬೇಡಿ ಎಂದು ಹೇಳಿದ್ದೀನಿ” ಎಂದು ಹೇಳಿದ್ದಾರೆ. ಕ್ಯಾಪ್ಟನ್ ರಾಶಿಕಾ ಅವರು ರಜತ್ ಬಳಿ ಯಾಕೆ ಸಲಹೆ ಕೇಳಿದರು ಎನ್ನೋದನ್ನು ಗಿಲ್ಲಿ ನಟ, ಕಾವ್ಯ ಶೈವ ಚರ್ಚೆ ಮಾಡಿದ್ದಾರೆ.
ರಾಶಿಕಾ ಶೆಟ್ಟಿ ಎಷ್ಟೇ ಹೇಳಿದರೂ ಕೂಡ ಸೂರಜ್ ಮಾತ್ರ ಕೇಳಲೇ ಇಲ್ಲ. ಆಮೇಲೆ ಸೂರಜ್ ಅವರ ಬಟ್ಟೆಗಳನ್ನೆಲ್ಲ ಎತ್ತಿಕೊಂಡು ಅದನ್ನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಾಕಿದ್ದಾರೆ. ಯಾರು ಎಷ್ಟೇ ಹೇಳಿದರೂ ಕೂಡ ರಾಶಿಕಾ ಮಾತ್ರ ಕೇಳಲೇ ಇಲ್ಲ.
ಬೆನ್ನಿನಲ್ಲಿ ರ್ಯಾಶಸ್ ಆಗಿದೆ, ಕೋಲ್ಡ್ ವಾಟರ್ ಬಳಸಬೇಡ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ರಘು ಅವರು ರಾಶಿಕಾಗೆ ಹೇಳಿದರು. ಆಗ ರಾಶಿಕಾ ಅವರು “ಅದನ್ನು ಮೊದಲೇ ಹೇಳಬೇಕು, ಅದನ್ನು ಬಿಟ್ಟು ನಾನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೀಳಲ್ಲ ಎಂದನು” ಎಂದಿದ್ದಾರೆ.
ರಾಶಿಕಾ ಶೆಟ್ಟಿ, ಸೂರಜ್ ನಡುವೆ ನಡೆದ ಜಗಳ
ಅದಾದ ಬಳಿಕ ರಾಶಿಕಾ ಅವರು ಗಾರ್ಡನ್ ಏರಿಯಾದಲ್ಲಿ ಕೂತು, “ನಾನು ಟಾಸ್ಕ್ ವಿನ್ ಆದಕೂಡಲೇ ವಿಶ್ ಮಾಡಿದರು, ಆಮೇಲೆ ಸೂರಜ್ ಅವರು ಕ್ಯಾಪ್ಟನ್ ಆಗಿದ್ದು ಇಷ್ಟ ಆಗಲಿಲ್ಲ ಎಂದರು. ಎಲ್ಲರ ಮುಖವಾಡ ಹೊರಬರುತ್ತದೆ. ಇಷ್ಟುದಿನ ಪಾಪಚ್ಚಿ, ನನಗೆ ಏನೂ ಗೊತ್ತಿಲ್ಲ ಎಂದಿದ್ದು ಸಾಕು” ಎಂದು ಹೇಳಿದ್ದಾರೆ.
“ನನಗೆ ಚೈತ್ರಾ ಕುಂದಾಪುರ ಉಸ್ತುವಾರಿ ಇಷ್ಟ ಆಗಲಿಲ್ಲ, ರಾಶಿಕಾ ಗೆದ್ದಿದ್ದು ಫೇರ್ ಅನಿಸಲಿಲ್ಲ, ಅದನ್ನು ನಾನು ಹೇಳಿದೆ” ಎಂದು ಸೂರಜ್ ಹೇಳಿದ್ದಾರೆ.
ರಾಶಿಕಾ ಶೆಟ್ಟಿ: ನನ್ನ ಜೊತೆಗೆ ಇದ್ದುಕೊಂಡು, ಬೇರೆಯವರ ಬಳಿ ಹೋಗಿ ನನ್ನ ಟಾಪಿಕ್ ಮಾತನಾಡಿದ್ದಾರೆ. ಇಂಥವರನ್ನು ಹೇಗೆ ನಂಬೋದು?
ಸೂರಜ್: ಒಬ್ಬರು ಇದ್ದಾಗ ಒಂದು ಥರ, ಇನ್ನೊಬ್ಬರು ಬಂದಾಗ ಹೇಗೆ ಆಡ್ತಿದ್ದಾರೆ ಎಂದು ಎಲ್ಲ ನೋಡ್ತಿದೀವಿ. ಕ್ಯಾಪ್ಟನ್ ಆದವರಿಗೆ ಸ್ವಂತ ಬುದ್ಧಿ ಬೇಕು. ಮುಂಚೆ ಒಬ್ಬರು ಬಂದಾಗ ಒಂದು ಥರ, ಈಗ ಒಬ್ಬರು ಬಂದಾಗ ಇನ್ನೊಂದು ಥರ ಆಡ್ತಿರೋದು ಇಡೀ ಮನೆಯವರು ನೋಡ್ತಿದ್ದಾರೆ.
ರಾಶಿಕಾ ಶೆಟ್ಟಿ; ನಿಮ್ಮದು ಮುಖವಾಡ
ಸೂರಜ್: ಇಷ್ಟುದಿನ ಮಾತಾಡಿಕೊಂಡು, ನನಗೆ ಈಗ ಮಾತಾಡೋಕೆ ಇಷ್ಟ ಇಲ್ಲ ಅಂದ್ರೆ
ರಾಶಿಕಾ: ನನಗೆ ಮಾತಾಡೋಕೆ ಇಷ್ಟ ಇಲ್ಲ. ಇಷ್ಟುದಿನ ಮಾತಾಡಿದ್ದು ತಪ್ಪು, ಅದನ್ನು ನಾನು ಹೇಳಿದೀನಿ
ನಿನಗೆ ಅಕ್ಕ ತಂಗಿ ಇದ್ದಾರೆ ಅಲ್ವಾ? ಒಬ್ಬರು ಬಂದಾಗ ಒಂದು ಥರ, ಇನ್ನೊಬ್ಬರು ಬಂದಾಗ ಇನ್ನೊಂದು ಥರ ಅಂತ ಮಾತಾಡ್ತಿದೀಯಾ. ಮೊನ್ನೆ ಅವರು ರೊಮ್ಯಾನ್ಸ್ ಎಂದು ಹೇಳಿದರು, ಬರೀ ಇದೇ ಆಗ್ತಿದೆ
ಸೂರಜ್ ಅವರು “ಇಷ್ಟುದಿನ ಮಾತಾಡಿದ್ರು, ಈಗ ಬೇರೆಯವರ ಜೊತೆ ಮಾತಾಡುತ್ತ, ನನ್ನ ಅವಾಯ್ಡ್ ಮಾಡಿದ್ದಾರೆ. ಅದನ್ನು ನಾನು ಪ್ರಶ್ನೆ ಮಾಡಿದೆ” ಎಂದಿದ್ದಾರೆ.
ಆಮೇಲೆ ರಘು, ರಜತ್, ರಕ್ಷಿತಾ ಶೆಟ್ಟಿ ಅವರು ಸೂರಜ್‌ಗೆ ಸಮಾಧಾನ ಮಾಡಿದ್ದು, ಅವಳ ಜೊತೆ ಮಾತಾಡು, ಬಗೆಹರಿಸಿಕೋ ಎಂದು ಹೇಳಿದ್ದಾರೆ. ಆಮೇಲೆ ಸೂರಜ್ ಅವರು ರಾಶಿಕಾಗೆ ಕ್ಷಮೆ ಕೇಳಿದ್ದು, ಸಮಾಧಾನ ಮಾಡಿದ್ದಾರೆ. ಇವರಿಬ್ಬರು ಏನೂ ಆಗಿಲ್ಲ ಎನ್ನೋ ಥರ ಆರಾಮಾಗಿ ಮಾತಾಡಿಕೊಂಡಿದ್ದಾರೆ.
ಅಷ್ಟು ಹೊತ್ತು ಜಗಳ ಆಡಿಕೊಂಡು, ಸಡನ್ ಆಗಿ ಇಬ್ಬರೂ ಆರಾಮಾಗಿ ನಕ್ಕಿದ್ದಾರೆ. ನನಗೆ ಇಷ್ಟ ಆಗಲಿಲ್ಲ ಅಂದ್ರೆ ನಾನು ಮಾತನಾಡೋದಿಲ್ಲ, ತಿರುಗಿ ನೋಡೋದಿಲ್ಲ ಎಂದು ಹೇಳಿ, ರಾಶಿಕಾ ಅವರು ಮತ್ತೆ ಸೂರಜ್ ಜೊತೆ ಮಾತನಾಡಲು ಆರಂಭಿಸಿದ್ದರು. ದೊಡ್ಮನೆಗೆ ಬಂದಾಗಿನಿಂದ ರಾಶಿಕಾ ಅವರು ಒಬ್ಬರಾದ ಮೇಲೆ ಒಬ್ಬರ ಜೊತೆ ಡಿಪೆಂಡೆಂಟ್ ಎಂದು ವೀಕ್ಷಕರು, ಸಹಸ್ಪರ್ಧಿಗಳು ಅಭಿಪ್ರಾಯಪಟ್ಟಿದ್ದಾರೆ.


