BBK 12 Episode Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರ ಕಿಚ್ಚ ಸುದೀಪ್‌ ಅವರು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎನ್ನುವ ಪ್ರಶ್ನೆ ಇದೆ. ಅತಿಥಿಗಳು ಬಂದಿದ್ದು, ಅವರ ವರ್ತನೆ ಅತಿರೇಕ ಆಗಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಸೀಸನ್‌ 11 ಸ್ಪರ್ಧಿಗಳು ಆಗಮಿಸಿದ್ದರು. ಬಿಗ್‌ ಬಾಸ್‌ ಮನೆ ರೆಸಾರ್ಟ್‌ ಆಗಿದ್ದು, ಬಂದ ಅತಿಥಿಗಳನ್ನು ಮನೆಯವರು ನೋಡಿಕೊಳ್ಳಬೇಕಿತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ. ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಏನು ಹೇಳ್ತಾರೆ?

ಕಿಚ್ಚನ ಪಂಚಾಯಿತಿಯಲ್ಲಿ ಏನಾಯ್ತು? ಪ್ರೋಮೋದಲ್ಲಿದ್ದೇನು?

ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಯಾವ ವಿಷಯದ ಬಗ್ಗೆ ಮಾತನಾಡಿದ್ದಾರೆ ಎನ್ನುವ ಪ್ರೋಮೋ ರಿಲೀಸ್‌ ಆಗಿದೆ. ಈ ವೇಳೆ ಕಿಚ್ಚ ಸುದೀಪ್‌ ಅವರು “ಮನೆಗೆ ಬಂದ ಅತಿಥಿಗಳು ಅತಿರೇಕ ಮಾಡಿದ್ರಾ? ಸಿಬ್ಬಂದಿಗಳು ಗೆದ್ದರಾ? ಹೆಡ್‌ ವೇಟರ್‌ ಆಗಿ ಎಡವಿದ್ರಾ? ಪ್ರಶ್ನೆ ಯಾರಿಗೆ? ಉತ್ತರ ಯಾರಿಗೆ? ಪಾಠ ಯಾರಿಗೆ?” ಎಂದು ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಗೆ‌ ಕಳೆದ ಸೀಸನ್‌ ಸ್ಪರ್ಧಿಗಳಾದ ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್‌, ಮ್ಯಾಕ್ಸ್‌ ಮಂಜು, ಮೋಕ್ಷಿತಾ ಪೈ ಬಂದಿದ್ದರು. ಆ ವೇಳೆ ರಜತ್‌, ತ್ರಿವಿಕ್ರಮ್‌, ಮ್ಯಾಕ್ಸ್‌ ಮಂಜು ಅವರು ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿದ ಹಾಗೆ ಇತ್ತು. ರೆಸಾರ್ಟ್‌ಗೆ ಬಂದವರು ಬಗೆ ಬಗೆಯ ಊಟ ತಿಂಡಿ ಮಾಡಿಸಿಕೊಂಡರು, ಹೆಡ್‌ ಮಸಾಜ್‌ ಮಾಡಿಸಿಕೊಂಡರು, ಕಾಲು ಒತ್ತಿಸಿಕೊಂಡರು. ಕೆಲವರು ಸೀನಿಯರ್‌ಗಳದ್ದು ಸರಿ ಅಂದರೆ, ಕೆಲವರು ಈ ಸೀಸನ್‌ ಸ್ಪರ್ಧಿಗಳು ಮಾಡಿದ್ದೇ ಸರಿ ಎಂದರು. ಹಾಗಾದರೆ ಈ ವಾರ ಯಾವೆಲ್ಲ ವಿಷಯದ ಬಗ್ಗೆ ಸುದೀಪ್‌ ಮಾತನಾಡಬೇಕಿದೆ.

ಚರ್ಚೆ ಮಾಡಲೇಬೇಕಾದ ಟಾಪಿಕ್‌ಗಳಿವು!

  • ಹಳೆಯ ಸೀಸನ್‌ ಸ್ಪರ್ಧಿಗಳು, ಈ ಬಾರಿಯ ಸ್ಪರ್ಧಿಗಳನ್ನು ಗುಲಾಮರ ಥರ ನಡೆಸಿಕೊಂಡರು ಎನ್ನೋದು ನಿಜವೇ?
  • ಕೆಲಸ ಮಾಡಲು ಮೈಗಳ್ಳ ಎಂದು ಪಟ್ಟ ಪಡೆದುಕೊಂಡಿರುವ ಗಿಲ್ಲಿ‌ ನಟ ಇನ್ನೂ ಬುದ್ಧಿ ಕಲಿತಿಲ್ಲವಾ?
  • ರಾಶಿಕಾ ಸುತ್ತ ಸುತ್ತುತ್ತ, ಮನೆಯಲ್ಲಿ ಕಾಣಿಸಿಕೊಳ್ಳದ ಸೂರಜ್ ಹೀಗೆ ಆಡಿದರೆ ಹೊರಗಡೆ ಬರೋದು ಪಕ್ಕಾ
  • ಅಶ್ವಿನಿ ಗೌಡ ಮಾತನಾಡಿಲ್ಲ ಅಂದರೆ ಗಿಲ್ಲಿ ನಟನಿಗೆ ಕಂಟೆಂಟ್‌ ಇಲ್ಲ. ಗಿಲ್ಲಿಯಿಂದ ರಘು ಕಾಣಿಸಿಕೊಳ್ಳುತ್ತಿದ್ದಾರಾ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಅವರ ಪ್ರಶ್ನೆಯೇ ತಪ್ಪು. ಅಶ್ವಿನಿಯಿಂದ ಗಿಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.
  • ಗಿಲ್ಲಿ ನಟ ಅವರ ಬಗ್ಗೆ ಧನುಷ್‌ ಗೌಡ ಮಾತನಾಡಿದ್ದರು. ಅಶ್ವಿನಿ ಹಾಗೂ ಗಿಲ್ಲಿ ನಟ ಮಧ್ಯೆ ವಿಷಯ ಬಂದಾಗ ಧನುಷ್‌ ಅವರು ಅಶ್ವಿನಿಗೆ ಬೆಂಬಲ ಕೊಡುತ್ತಿದ್ದರು. ಹೀಗಾಗಿ ಗಿಲ್ಲಿಯನ್ನು ಕಂಡ್ರೆ ಧನುಷ್ ಅವರಿಗೆ ಉರಿನಾ?

  • ಕಾಮಿಡಿ ಮಾಡುವಾಗ ಗಿಲ್ಲಿ ನಟ ಅವರು ಮ್ಯಾಕ್ಸ್‌ ಮಂಜುಗೆ ಮಲೇರಿಯಾ, ಎರಡನೇ ಮೂರನೇ ಮದುವೆನಾ ಎಂದು ಪ್ರಶ್ನೆ ಮಾಡಿದ್ದರು. ಬಿಟ್ಟಿ ಊಟ ತಿನ್ನೋಕೆ ಬಂದರು ಎಂದು ಗಿಲ್ಲಿ ಹೇಳಿದ್ದರು.
  • ಪ್ರತಿ ಶೋನಲ್ಲಿ ಗಿಲ್ಲಿ ನಟ ಅವರು ಒಂದೊಂದು ಹುಡುಗಿಯರನ್ನು ಬಳಸಿಕೊಂಡು ಮಾತಾಡ್ತಾರೆ, ಈ ಬಾರಿ ಕಾವ್ಯ ಇದ್ದಾರೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.
  • ಬಿಗ್‌ ಬಾಸ್‌ ಮನೆಗೆ ಸೀನಿಯರ್ಸ್‌ ಬಂದಾಗ ಅಶ್ವಿನಿ ಗೌಡ ಹಾಗೂ ಗಿಲ್ಲಿ ಒಂದಾದರು
  • ನನಗೆ ಬುದ್ಧಿ ಇಲ್ಲ ಎಂದು ಸೀನಿಯರ್ಸ್‌ ಹೇಳಬೇಕು ಎಂದಾಗ ಅಶ್ವಿನಿ ಗೌಡ ಅವರು ಆಗೋದಿಲ್ಲ ಎಂದರು. ಈ ಬಾರಿ ಅವರು ಅಹಂ ಬಿಟ್ಟಿಲ್ಲ.

  • ಕಲರ್ಸ್‌ ಕನ್ನಡದ ಸವಿರುಚಿ ಕಾರ್ಯಕ್ರಮದ ಬಗ್ಗೆ ಗಿಲ್ಲಿ ನಟ, ಕಾವ್ಯ ಶೈವ ಮಾತನಾಡಿದ್ದು ಸರಿನಾ?
  • ಎಲಿಮಿನೇಶನ್‌ ಟಾಸ್ಕ್‌ ವೇಳೆ, ಜಾಹ್ನವಿ ಅವರು ಗಿಲ್ಲಿ ನಟನನ್ನು ನಾಮಿನೇಟ್‌ ಮಾಡಿದರು ಎಂದು ರಕ್ಷಿತಾ ನಾಮಿನೇಟ್‌ ಮಾಡಿದರು.
  • ಹಣದ ವಿಚಾರಕ್ಕೋಸ್ಕರ ಜಾಹ್ನವಿ ಅವರು ಅಶ್ವಿನಿ ಗೌಡ ಜೊತೆ ಸ್ನೇಹದಿಂದ ಇದ್ದಾರೆ
  • ರಕ್ಷಿತಾ, ಜಾಹ್ನವಿ ಅವರ ಮುಂದೆ ಧ್ರುವಂತ್‌ ಅವರು ವಿಚಿತ್ರವಾಗಿ ವರ್ತನೆ ಮಾಡೋದು ಯಾಕೆ?
  • ಕ್ಯಾಪ್ಟನ್‌ ಆಗಿ ಅಭಿಷೇಕ್‌ ಚೆನ್ನಾಗಿ ಕೆಲಸ ಮಾಡಿದ್ದಾರಾ?