ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅತಿಥಿಗಳ ಆಗಮನವಾಯ್ತು. ಅತಿಥಿಗಳ ಅತಿರೇಕ, ಗಿಲ್ಲಿ ನಟನ ಕಾಮಿಡಿ ಮಧ್ಯೆ ಇಡೀ ವಾರ ಕಳೆದು ಹೋಯ್ತು. ಈ ವಾರ ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಗಿಲ್ಲಿ ನಟನಿಗೆ ಬುದ್ಧಿ ಹೇಳಿದ್ರಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಸನ್ 11 ಸ್ಪರ್ಧಿಗಳು ಬಂದಿದ್ದರು. ಈ ಮನೆ ರೆಸಾರ್ಟ್, ಈ ಸೀಸನ್ ಸ್ಪರ್ಧಿಗಳು ರೆಸಾರ್ಟ್ ವೇಟರ್ಸ್ ಆಗಿದ್ದರು. ಈ ವೇಳೆ ಅತಿಥಿಗಳ ವರ್ತನೆ ಅತಿರೇಕ ಆಗಿತ್ತು ಎನ್ನೊಂದು ಒಂದುಕಡೆಯಾದರೆ, ಗಿಲ್ಲಿ ನಟನ ಕಾಮಿಡಿ ಜಾಸ್ತಿ ಆಯ್ತು ಎಂಬ ಮಾತುಕತೆ ನಡೆದಿದೆ. ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ನಟನಿಗೆ ಕ್ಲಾಸ್ ತಗೊಳ್ತಾರೆ ಎಂದು ಎಲ್ಲರೂ ಅಂದುಕೊಂಡಿರುವಾಗ ಸುದೀಪ್ ಅವರು ಕೂಲ್ ಆಗಿ ನಡೆಸಿಕೊಟ್ಟರು.
ಬೇಸರ ತರಿಸಿದ ಗಿಲ್ಲಿ ನಟನ ಮಾತುಗಳು
ಆರಂಭದಲ್ಲಿ ಗಿಲ್ಲಿ ನಟ ಅವರು ಮ್ಯಾಕ್ಸ್ ಮಂಜುಗೆ ನಿಮ್ಮದು ಎರಡನೇ ಮದುವೆನಾ? ಮೂರನೇ ಮದುವೆನಾ? ಎಂದು ಪ್ರಶ್ನೆ ಮಾಡಿದರು. ಅದಾದ ಬಳಿಕ ಮಂಜು ಬ್ಯಾಚುಲರ್ ಪಾರ್ಟಿಗೆ ಬಿಟ್ಟಿ ಊಟ ಮಾಡೋಕೆ ಬಂದ್ರಾ ಎಂದು ಕೇಳಿದರು. ಇಲ್ಲಿಂದಲೇ ಸೀಸನ್ 11 ಸ್ಪರ್ಧಿಗಳ ಜೊತೆ ಗಿಲ್ಲಿ ನಟನ ಮನಸ್ತಾಪ, ಜಗಳ ಶುರುವಾಗಿತ್ತು.
ನೇರವಾಗಿ ಮಾತನಾಡಿದ ಕಾವ್ಯ ಶೈವ
ಮ್ಯಾನೇಜರ್ ಅಥವಾ ಕ್ಯಾಪ್ಟನ್ ಆಗಿರುವ ಅಭಿಷೇಕ್ ಅವರು ಇದನ್ನು ತಡೆಯಲಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಅವರು ಕೂಡ ಕ್ಲಾಸ್ ತಗೊಂಡರು. “ಗಿಲ್ಲಿ ನಟನನ್ನು ನಿಮಗೆ ಕಂಟ್ರೋಲ್ ಮಾಡೋಕೆ ಆಗಲಿಲ್ಲ ಅಂತ ಸೀನಿಯರ್ಸ್ ಹೇಳಿದ್ದರು. ಆಮೇಲೆ ಗಿಲ್ಲಿಯನ್ನು ಕಂಟ್ರೋಲ್ ಮಾಡೋಕೆ, ಡಾಮಿನೇಟ್ ಮಾಡೋಕೆ ಬಂದ ಹಾಗಿತ್ತು” ಎಂದು ಕಾವ್ಯ ಶೈವ ಹೇಳಿದ್ದರು. ಕಾವ್ಯ ಶೈವ ಮಾತನಾಡಿದ್ದು ಸರಿ ಇಲ್ಲ ಎಂದು ರಜತ್ ಅವರು ಹೇಳಿದ್ದಾರೆ.
ಬುದ್ಧಿ ಹೇಳಿದ ಕಿಚ್ಚ ಸುದೀಪ್
“ಹೋಟೆಲ್‌ನಲ್ಲಿ ಬಿಟ್ಟಿ ತಿನ್ನೋಕೆ ಬಂದಿದ್ದೀರಾ ಅಂದರೆ ಏನಾಗುತ್ತದೆ? ನಾಲ್ಕು ಜನರ ಮುಂದೆ ಈ ರೀತಿ ಹೇಳಿದ್ರೆ ಏನಾಗುತ್ತದೆ? ಎಂಗೇಜ್‌ಮೆಂಟ್ ಆದ್ಮೇಲೆ ಅವರು ಕೂಡ ನೋಡುತ್ತಿರುತ್ತದೆ. ಅತಿಥಿಗಳು ಅಂದ್ಮೇಲೆ ಅವರನ್ನು ನಿಮ್ಮನ್ನು ಕಿತ್ತು ಹಾಕೋದಿಲ್ಲ, ನಿಮ್ಮಿಂದ ಏನೂ ತಗೊಳಲ್ಲ. ನೀವು ಕ್ಷಮೆ ಕೇಳಿ ಮತ್ತೆ ಅದೇ ತಪ್ಪು ಮಾಡಿದರೆ ಏನಾಗುತ್ತದೆ?” ಎಂದು ಕಿಚ್ಚ ಸುದೀಪ್ ಅವರು ಬುದ್ಧಿ ಹೇಳುತ್ತಾರೆ.
ಆರು ತಿಂಗಳ ಹಿಂದೆ ಕಾಂಟ್ರ್ಯಾಕ್ಟ್
“ಮನಸ್ಸು ಪೂರ್ವಕವಾಗಿ ಮಾತಾಡ್ತೀರಿ, ನಗಸ್ತೀರಿ. ಕಾವ್ಯ ಹೇಳಿದಂತೆ ನಿಮ್ಮನ್ನು ಯಾಕೆ ನಾವು ಕಂಟ್ರೋಲ್ ಮಾಡಬೇಕು? ಆರು ತಿಂಗಳ ಹಿಂದೆ ಅಂದರೆ ಫೆಬ್ರವರಿಗೆ ನಿಮ್ಮ ಜೊತೆ ಕಾಂಟ್ರ್ಯಾಕ್ಟ್ ಮಾಡಿಕೊಳ್ತಾರೆ. ನೀವು ಒಳ್ಳೆಯ ಸ್ಪರ್ಧಿ ಎಂದು ಮೊದಲೇ ಕಾಂಟ್ರ್ಯಾಕ್ಟ್ ಮಾಡಿದ್ದರು” ಎಂದು ಗಿಲ್ಲಿ ನಟ ಅವರು ಕಿಚ್ಚ ಸುದೀಪ್‌ಗೆ ಹೇಳಿದ್ದರು.
ಪರ್ಸನಲ್ ವಿಷಯ ಬೇಡ
“ದೀಪಕ್ಕೆ ಎಣ್ಣೆ ಹಾಕಬೇಕು, ಚೆನ್ನಾಗಿ ಉರಿಯುತ್ತದೆ, ಆದರೆ ಎರಡು ಡ್ರಾಪ್ ನೀರು ಹಾಕಬಾರದು, ಹಾಕಿದರೆ ದೀಪ ಚಟಪಟ ಅಂತ ಉರಿಯುತ್ತದೆ. ಇಲ್ಲಿಯೂ ಆಗಿದ್ದು ಅದೇ, ಅದ್ಭುತವಾಗಿ ನಡೆಯುತ್ತಿದ್ದ ಟಾಸ್ಕ್ ಗಜಿಬಿಜಿಯಾಗಿ ನಡೆಯಿತು. ಇಡೀ ವಾರ ಕಂಪ್ಲೀಟ್ ಆಗಿ ಹಾಳಾಯ್ತು. ಹೊರಗಡೆ ವಿಚಾರ ಇಲ್ಲಿ ಬೇಡ, ಹುಡುಗಿ, ಮನೆ, ಅಪ್ಪ ಇಲ್ಲಿ ಬೇಡ, ಮುಂದೆ ಜೀವನವೂ ಇದೆ. ಕೆಲವು ಚಪ್ಪಾಳೆಗಳು ಪ್ರಶಂಸದೆಯಾದರೆ, ಇನ್ನೂ ಕೆಲವು ವ್ಯಂಗ್ಯ, ಇನ್ನೂ ಕೆಲವು ಹಾಳು ಮಾಡೋಕೆ ಇರುತ್ತವೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಾಲಿಗೆಯಿಂದ ಬೆಳೆದಿರಿ
“ಬೆಳೆದಿರೋದು ನಾಲಿಗೆಯಿಂದ, ಜನರನ್ನು ನಗಿಸುತ್ತಿರೋದು ನಾಲಿಗೆಯಿಂದಲೇ, ಜನರನ್ನು ಮೆಚ್ಚಿಸಿರೋದು ನಾಲಿಗೆಯಿಂದಲೇ, ಹಾಳಾಗೋದು ನಾಲಿಗೆಯಿಂದಲೇ. ನೀವು ಬಿಗ್ ಬಾಸ್ ಮನೆಗೆ ಬಂದಾಗ ಮಗು ಆಗ್ತೀರಿ, ನಿಮ್ಮನ್ನು ದಾರಿ ಮುಟ್ಟಿಸೋದು ನಮ್ಮ ಕರ್ತವ್ಯ. ಮಾಡಿದ್ದನ್ನೆಲ್ಲ ಸರಿ ಅಂದರೆ ತಪ್ಪಾಗುತ್ತದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಅತಿಥಿಗಳದ್ದು ಲಿಮಿಟ್ ಆಯ್ತು
“ಅತಿಥಿಗಳು ಚೆನ್ನಾಗಿ ಆಡಿದರು, ಆದರೆ ಪರ್ಸನಲ್ ಆಗಿ ತಗೊಂಡರು. ಅದಕ್ಕೆ ಲಿಮಿಟ್ ಬೇಕಿತ್ತು. ಮಂಜು ಅವರು ಪರ್ಸನಲ್ ಆಗಿ ದಾಟಿದ್ದು ಸರಿ ಇಲ್ಲ. ಅವರು ಮಾಡಿದರು ಅಂತ ನಾವು ಅದೇ ಮಿಸ್ಟೇಕ್ ಮಾಡಿದರೆ, ಆರಂಭದಲ್ಲಿ ಏನಾಯ್ತು ಎನ್ನೋದು ಮರೆತು ಹೋಗುತ್ತದೆ. ಆಗ ಇಬ್ಬರದ್ದು ಬ್ಯಾಲೆನ್ಸ್ ಆಯ್ತು ಎನಿಸೋ ಹಾಗಾಯ್ತು” ಎಂದು ಕಿಚ್ಚ ಸುದೀಪ್ ಅವರು ಅತಿಥಿಗಳಿಗೆ ಬುದ್ಧಿ ಹೇಳಿದರು.


