- Home
- Entertainment
- TV Talk
- ವೈವಾಹಿಕ ಜೀವನಕ್ಕೆ ಕಾಲಿಡಲಿರೋ 'ಶ್ರೀರಸ್ತು ಶುಭಮಸ್ತು ಧಾರಾವಾಹಿ' ನಟ ಶ್ರೀರಾಮ್; ಹುಡುಗಿ ಯಾರು?
ವೈವಾಹಿಕ ಜೀವನಕ್ಕೆ ಕಾಲಿಡಲಿರೋ 'ಶ್ರೀರಸ್ತು ಶುಭಮಸ್ತು ಧಾರಾವಾಹಿ' ನಟ ಶ್ರೀರಾಮ್; ಹುಡುಗಿ ಯಾರು?
Shrirasthu Shubhamasthu Kannada Serial: ‘ಶ್ರೀರಸ್ತು ಶುಭಮಸ್ತು’, ‘ಇಷ್ಟದೇವತೆ’ ಮುಂತಾದ ಧಾರಾವಾಹಿ ಖ್ಯಾತಿಯ ನಟ ಶ್ರೀರಾಮ್ ಅವರು ಇಂದು ಮದುವೆ ಆಗಲಿದ್ದಾರೆ. ಈಗಾಗಲೇ ಅವರು ಕನ್ನಡ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.

ಮೈಸೂರಿನಲ್ಲಿ ಮದುವೆ
ಹೌದು, ನಟ ಶ್ರೀರಾಮ್ ಅವರು ಬ್ಯಾಚುಲರ್ ಲೈಫ್‌ಗೆ ಇಂದು ಗುಡ್‌ಬೈ ಹೇಳಲಿದ್ದಾರೆ. ಇಂದು ಸಿಂಪಲ್ ಆಗಿ ದೇವಸ್ಥಾನದಲ್ಲಿ ಮದುವೆ ಆಗಲಿದ್ದಾರೆ.
ಹುಡುಗಿ ಯಾರು?
ಶ್ರೀರಾಮ್ ಅವರು ಸ್ಪೂರ್ತಿ ಗೌಡ ಅವರನ್ನು ಮದುವೆ ಆಗಲಿದ್ದಾರೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಸ್ಫೂರ್ತಿ ಕೆಲಸದ ಬಗ್ಗೆ ಶ್ರೀರಾಮ್ ಮಾತನಾಡಬೇಕಿದೆ.
ಸಿನಿಮಾಗಳಲ್ಲಿ ನಟನೆ
ಅಂದಹಾಗೆ ಶ್ರೀರಾಮ್ ಅವರು ‘ಗಜಾನನ & ಗ್ಯಾಂಗ್’, ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ನಟಿಸಿದ್ದರು. ಇದರ ಜೊತೆಗೆ ಇನ್ನೂ ಕೆಲ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.
ಶಿವರಾಜ್‌ಕುಮಾರ್‌ಗೂ ಆಹ್ವಾನ
ಶ್ರೀರಾಮ್ ಅವರು ನಟ ಕಿಚ್ಚ ಸುದೀಪ್, ಯಶ್, ಮೇಘನಾ ರಾಜ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.
ಅದ್ದೂರಿ ಆರತಕ್ಷತೆ
ನಾಳೆ ಆರತಕ್ಷತೆ ಅದ್ದೂರಿಯಾಗಿ ನಡೆಯಲಿದ್ದು, ಅಲ್ಲಿ ಗಣ್ಯರು ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಧಾರಾವಾಹಿಗಳ ಮೂಲಕ ಶ್ರೀರಾಮ್ ಅವರು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

