ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ 'ಉಗ್ರಂ ಮಂಜು ಬ್ಯಾಚುಲರ್‌ ಪಾರ್ಟಿ' ಟಾಸ್ಕ್‌ನ ಅತಿಥಿಗಳಾಗಿ ಬಂದಿದ್ದ ಐವರ ಪೈಕಿ ಇಬ್ಬರು ವೈಲ್ಡ್‌ ಕಾರ್ಡ್‌ ಮೂಲಕ ಮನೆಯಲ್ಲೇ ಉಳಿಯಲಿದ್ದಾರೆ. ಈ ಮಹತ್ವದ ಟ್ವಿಸ್ಟ್ ಅನ್ನು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಬಹಿರಂಗಪಡಿಸಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಇಲ್ಲಿಯವರೆಗೂ ಒನ್‌ಮ್ಯಾನ್‌ ಶೋ ಆಗಿತ್ತು. ಗಿಲ್ಲಿ ಹೊರತಾಗಿ ಮನೆಯ ಉಳಿದವರ್ಯಾರು ಎಂಟರ್‌ಟೇನಿಂಗ್‌ ಅನ್ನೋ ಪದಕಕ್ಕೆ ಅರ್ಥವೇ ಇಲ್ಲದಂತೆ ಇದ್ದಿದ್ದರು. ಇದ್ದಿದ್ದರಲ್ಲಿ ಅಶ್ವಿನಿ ಅವರ ಆರ್ಭಟ ಜೋರಾಗಿ ಕೇಳುತ್ತಿತ್ತು. ಆದರೆ, ಸಾಲು ಸಾಲು ಬಿಗ್‌ಬಾಸ್‌ ನಿಯಮಗಳನ್ನು ಮೀರಿ ವೀಕೆಂಡ್‌ ಎಪಿಸೋಡ್‌ಗಳಲ್ಲಿ ಕಿಚ್ಚ ಸುದೀಪ್‌ ಅವರಿಂದ ಮಾತು ಕೇಳಿಸಿಕೊಳ್ಳೋದೇ ಆಗಿತ್ತು. ಆದರೆ, ಈ ವಾರ ಅಶ್ವಿನಿ ಫುಲ್‌ ಥಂಡಾ ಹೊಡೆದಿದ್ದಾರೆ. ಇದರ ನಡುವೆ ಬಿಗ್‌ಬಾಸ್‌ ಕೂಡ ಭರ್ಜರಿ ನಿರ್ಧಾರ ಮಾಡಿದ್ದು, ಕಳೆದ ಆವೃತ್ತಿಯ ಇಬ್ಬರು ಸ್ಪರ್ಧಿಗಳನ್ನು ಈ ಬಾರಿ ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆಯನ್ನು ಇನ್ನಷ್ಟು ಚಾರ್ಜ್‌ ಮಾಡಲು ಮುಂದಾಗಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಆವೃತ್ತಿಯ ಸ್ಪರ್ಧಿ ಉಗ್ರಂ ಮಂಜು ಅವರ ಬ್ಯಾಚುಲರ್‌ ಪಾರ್ಟಿ ಎನ್ನುವ ಕಾನ್ಸೆಪ್ಟ್‌ನಲ್ಲಿ ಬಿಗ್‌ ಮನೆಯನ್ನು ಬಿಬಿ ಪ್ಯಾಲೇಸ್‌ ಆಗಿ ಬದಲಾಯಿಸಲಾಗಿತ್ತು. ಉಗ್ರಂ ಮಂಜು ಅವರಲ್ಲದೆ, ರಜತ್‌, ಚೈತ್ರಾ ಕುಂದಾಪುರ, ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಈ ಮನೆಗೆ ಅತಿಥಿಗಳಾಗಿ ಬಂದಿದ್ದರು. ಅತಿಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮನೆಯ ಸದಸ್ಯರಿಗೆ ವಹಿಸಲಾಗಿದ್ದರೆ, ಮನೆಯ ಕ್ಯಾಪ್ಟನ್‌ ಅಭಿಷೇಕ್‌ ಪ್ಯಾಲೇಸ್‌ನ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು.

ಆದರೆ, ತನ್ನ ಮಾತು ಹಾಗೂ ವರ್ತನೆಗಳಿಂದಲೇ ಅತಿಥಿಗಳ ತಿಥಿ ಮಾಡಿದ್ದ ಗಿಲ್ಲಿಯನ್ನು ಮನೆಯ ಅತಿಥಿಗಳು ಕೂಡ ನೇರವಾಗಿ ಟಾರ್ಗೆಟ್‌ ಮಾಡಿದ್ದರು. ಗಿಲ್ಲಿ ಮಾತುಗಳು ಕೂಡ ಅಷ್ಟೇ ಖಾರವಾಗಿದ್ದವು. ಇದಕ್ಕೆ ಮನೆಯಲ್ಲಿರುವ ಸ್ಪರ್ಧಿಗಳೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ದಿನಗಳು ಕಳೆಯುತ್ತಿದ್ದ ಹಾಗೆ ಗಿಲ್ಲಿ ಕೂಡ ಸೈಲೆಂಟ್‌ ಆಗಿದ್ದರಿಂದ ಮನೆಯಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್‌ ಅಂಶಗಳೇ ಜಾಸ್ತಿಯಾಗಿ ಕಾಣುತ್ತಿದ್ದವು.

ಈಗ ಬಿಗ್‌ಬಾಸ್‌ ಮಹಾ ನಿರ್ಧಾರ ಮಾಡಿದ್ದು, ಅತಿಥಿಗಳಾಗಿ ಬಂದಿರುವ ಪೈಕಿ ಇಬ್ಬರನ್ನು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಯಲ್ಲೇ ಉಳಿಸಿಕೊಳ್ಳಲಾಗುತ್ತದೆ. ಮೂಲಗಳ ಪ್ರಕಾರ ರಜತ್‌ ಹಾಗೂ ಚೈತ್ರಾ ಕುಂದಾಪುರ ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನೂ ಕೆಲವರು ಈ ವಾರದ್ದು ಒಂದು ಲೆಕ್ಕ, ಇನ್ನು ಮುಂದಿನದು ಒಂದು ಲೆಕ್ಕ ಎಂದು ಕಾಮೆಂಟ್‌ ಮಾಡಿದ್ದಾರೆ. ಈ ವಾರ ಅವರು ಅತಿಥಿಗಳಾಗಿದ್ದರು. ಅತಿಥಿಗಳಾಗಿದ್ದಾಗಲೇ ಗಿಲ್ಲಿ ಅವರಿಗೆ ಇಷ್ಟು ಕ್ಲಾಟ್ಲೆ ನೀಡಿದ್ದಾನೆ. ಹಾಗೇನಾದರೂ ವೈಲ್ಡ್‌ ಕಾರ್ಡ್‌ ಮೂಲಕ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರ ಅವರ ಕಥೆ ಮುಗಿದ ಹಾಗೆ ಲೆಕ್ಕ ಎಂದಿದ್ದಾರೆ.

ಪ್ರೋಮೋದಲ್ಲಿ ಸುದೀಪ್‌ ಹೇಳಿದ್ದೇನು?

View post on Instagram

ಈ ಬಗ್ಗೆ ಕಲರ್ಸ್‌ ಕನ್ನಡ ಪ್ರೋಮೋ ಕೂಡ ರಿಲೀಸ್‌ ಮಾಡಿದೆ. 'ಈಗ ಗೆಸ್ಟ್‌ಗಳು ಮಾತ್ರ ಮನೆಯಿಂದ ಆಚೆ ಬರುವ ಸಮಯ. ಈ ಬಾರಿ ಒಂದು ಟ್ವಿಸ್ಟ್‌ ಅನ್ನೋ ರೀತಿಯಲ್ಲಿ ಕಳೆದ ಸೀಸನ್‌ನಿಂದ ಇಬ್ಬರನ್ನ ವೈಲ್ಡ್‌ ಕಾರ್ಡ್‌ ಕಂಟೆಸ್ಟೆಂಟ್‌ ಆಗಿ ಒಳಗೆ ಕಳಿಸುವ ನಿರ್ಧಾರ ಮಾಡಲಾಗಿದೆ. ಐವರ ಪೈಕಿ ಇಬ್ಬರು ಕಂಟೆಸ್ಟೆಂಟ್‌ಗಳಾಗಿ ಮನೆಯಲ್ಲೇ ಉಳಿದುಕೊಳ್ತಾರೆ..' ಎಂದು ಸುದೀಪ್‌ ಹೇಳಿರುವ ಪ್ರೋಮೋ ರಿಲೀಸ್‌ ಮಾಡಲಾಗಿದೆ.

ಅತಿಥಿಗಳ ವರ್ತನೆ ಬಗ್ಗೆಯೂ ಆಕ್ಷೇಪ

ಇನ್ನುಬಿಗ್‌ಬಾಸ್‌ ಮನೆಯಲ್ಲಿ ಅತಿಥಿಗಳು ಇದ್ದ ರೀತಿಯ ಬಗ್ಗೆಯೂ ವೀಕ್ಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಅದರಲ್ಲೂ ಉಗ್ರಂ ಮಂಜು ಹಾಗೂ ರಜತ್‌, ಮನೆಯವರನ್ನು ಕೆಲಸದಾಳುಗಳ ರೀತಿ ನೋಡುತ್ತಿದ್ದರು. ಗಿಲ್ಲಿ ವಿಚಾರದಲ್ಲಿ ಅದು ಇನ್ನೊಂದು ಮಟ್ಟಕ್ಕೂ ಹೋಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.