Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಕೂದಲು ಬಾಚೋದಿಲ್ಲ, ಹಲ್ಲುಜ್ಜಲ್ಲ, ಊಟಕ್ಕೆ ಸರಿಯಾಗಿ ಕೂರೋದಿಲ್ಲ ಎಂಬ ಆರೋಪ ಇದೆ. ಇತ್ತೀಚೆಗೆ ಇವರ ನಡೆ ನುಡಿ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವೀಕ್ಷಕರು ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ನೆಲಕ್ಕೆ ಕೂತು, ಕಾಲು ಚಾಚಿಕೊಂಡು ಊಟ ಮಾಡಿದ್ದಾರೆ. ಕೆಲವರು ಇದನ್ನು ದರಿದ್ರ ಎಂದರೆ, ಇನ್ನೂ ಕಲವರು ತಪ್ಪೇನಿಲ್ಲ ಎಂದಿದ್ದಾರೆ. ಅಂದಹಾಗೆ ಧ್ರುವಂತ್‌ ಅವರು, “ಹಲ್ಲುಜ್ಜಲ್ಲ” ಎಂದು ಹೇಳಿದ್ದರು.

ರಕ್ಷಿತಾ ಶೆಟ್ಟಿ ಅವರು ಅಸಂಬದ್ಧ ಮಾತನಾಡುತ್ತಾರೆ. ಆಟದ ವಿಚಾರ ಬಂದಾಗ ತಾರತಮ್ಯ ಮಾಡುತ್ತಾರೆ, ಕೂದಲು ಬಾಚಿಕೊಳ್ಳಲ್ಲ ಎಂಬ ಆರೋಪ ಇತ್ತು. ಈಗ ಸೀಕ್ರೆಟ್‌ ರೂಮ್‌ನಲ್ಲಿ ಕಾಲು ಚಾಚಿಕೊಂಡು ಊಟಕ್ಕೆ ಕೂತಿರೋದಕ್ಕೆ ಅನೇಕರು ಬೇಸರ ಹೊರಹಾಕಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗಿದೆ.

ಜನರು ಹೇಳಿದ್ದೇನು?

ಬೇರೆಯವರ ಥರ ಅರ್ಧಂಬರ್ಧ ಡ್ರೆಸ್ ಹಾಕುತ್ತಿಲ್ಲ. ಹಳೆಯ ಸಂಪ್ರದಾಯದ ಪ್ರಕಾರ ಕೆಳಗಡೆ ಊಟಕ್ಕೆ ಕುಳಿತುಕೊಳ್ಳುತ್ತಾಳೆ, ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸೌಂದರ್ಯವನ್ನು ನೋಡಿ. ಹೀಗೆ ಹೇಳಿದ ಧ್ರುವಂತ್ ಫೇಸ್ ವಾಶ್ ಮಾಡುತ್ತಾರಾ? ಒಂದು ಹೆಣ್ಣಿನ ಪರ್ಸನಲ್ ಬಗ್ಗೆ ಮಾತನಾಡುವುದೇ ತಪ್ಪು. ಇದು ಸರಿಯಲ್ಲ. ರಕ್ಷಿತಾ ಆದ್ದರಿಂದ ವಾದ ಮಾಡಲಿಲ್ಲ. ದಯವಿಟ್ಟು ಬಡ ಮಕ್ಕಳಿಗೆ ಅವಮಾನವನ್ನು ಮಾಡಬೇಡಿ.

90% ಹೆಣ್ಣು ಮಕ್ಕಳು ಮನೆಯಲ್ಲಿ ನಿಜ ರೂಪ ಇದೇ. ಆದರೆ ತಳುಕು ಬಳಕು ಹುಡುಗಿ ನೋಡಿ ಇಷ್ಟ ಪಟ್ಟ ಹುಡುಗರಿಗೆ, ಆಮೇಲೆ ನಿಜ ರೂಪ ನೋಡಿ ಮದುವೆ ಆದಮೇಲೆ ಅಯ್ಯೋ ಇವಳನ್ನು ಇಷ್ಟ ಪಟ್ಟಿದ್ದಾ ಅನಿಸುತ್ತದೆ.

ವೈದ್ಯರ ಸಲಹೆ ಅವಳಿಗೆ ಬೇಕಾಗಿದ್ದಿದ್ದರೆ ಅಪ್ಪ-ಅಮ್ಮನಿಗೆ ಮನೆ ಮಾಡಿಕೊಡುತ್ತಿರಲಿಲ್ಲ. ದಯವಿಟ್ಟು ಒಂದು ಹೆಣ್ಣು ಮಗಳ ಬಗ್ಗೆ ತುಂಬಾ ತಾತ್ಸಾರದಿಂದ ಮಾತನಾಡುವುದನ್ನು ಬಿಟ್ಟುಬಿಡಿ.

ಮೈ ತುಂಬ ಬಟ್ಟೆ, ಮೇಕಪ್ ಮಾಡದೇ, ತನ್ನ ಮನೆಯಲ್ಲಿ ಯಾವ ರೀತಿ ಇದ್ದಾಳೋ ಅದೇ ತರ ಸಿಂಪಲ್ ಆಗಿ ಇರೋದು ನಿಜವಾಗ್ಲೂ ತಪ್ಪುಅನ್ನೋ ನನ್ ಮಕ್ಕಳನ್ನು ಮೊದಲು ನಿಮ್ಮನ್ನು, ನಿಮ್ಮ ಹೆತ್ತ ಅಪ್ಪ ಅಮ್ಮನನ್ನು ಮಾನಸಿಕ ಆಸ್ಪತ್ರೆಗೆ ಹಾಕಿ.

ರಕ್ಷಿತಾ ಸರಿ ಇಲ್ಲ ಅಂತ ಕಾಮೆಂಟ್ ಮಾಡುವವರು ನೀವು, ನಿಮಗೆ ಆಗದೇ ಇರುವವರ ಜೊತೆ ಒಂದೆರಡು ದಿನ ಒಂಟಿಯಾಗಿ ಇದ್ದು ನೋಡಿ ಆಗ ಅರ್ಥ ಆಗ್ತದೆ. ಧ್ರುವಂತ್ ಜೊತೆ ಒಂಟಿಯಾಗಿರುವ ರಕ್ಷಿತಾ ಮನಸ್ಥಿತಿ ಯಾವ ರೀತಿ ಇದೆ ಎಂದು ನೋಡಿ. ನಾವು ನೋಡೋದು ಕೆಲವೇ ಗಂಟೆಗಳ ಬಿಗ್ ಬಾಸ್ ಶೋ ಆದರೆ ರಕ್ಷಿತಾ ದಿನವಿಡೀ ತನ್ನ ಶತ್ರುವಿನಂತೆ ಇರುವ ಧ್ರುವಂತ್ ಜೊತೆ ಒಂಟಿಯಾಗಿರಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರು ಸರಿಯಾಗಿ ಕೂತು ಊಟ ಮಾಡ್ತಿರ್ತಾರೆ? ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಒಬ್ಬಳೇ ಅಲ್ಲ ಎಲ್ಲರ ಕಿರುಚಾಟ ಜಗಳಗಳನ್ನು ನೋಡಿದ್ದೇವೆ. ಧ್ರುವಂತ್ ಹುಡುಗೀರ ತರ ಕೂದಲು ಬಿಟ್ಟುಕೊಂಡು ಇಡೀ ದಿನ ಕೈಯಲ್ಲಿ ಬಾಚೋದು ನಿಮ್ಗೆ ಇಷ್ಟ ಆಗ್ತದೆ ಹುಡುಗೀರ ತರ ನುಲಿಯೋದು ಇಷ್ಟ ಆಗ್ತದೆ. ರಕ್ಷಿತಾ ಮಾಡೋ ಸಣ್ಣ ಪುಟ್ಟ ತಪ್ಪುಗಳು ಕೂಡಾ ದೊಡ್ಡ ಅಪರಾಧವಾಗಿ ಕಾಣಿಸ್ತದೆ ಅಲ್ವಾ? ಧ್ರುವಂತ್ ನಗುವೇ ಒಂದು ರೀತಿ ವಿಚಿತ್ರ.

ಹಳ್ಳಿಯಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಹೇಗಿರ್ತಾರೆ ಹಾಗೆ ಇದ್ದಾಳೆ ರಕ್ಷಿತಾ, ಅವಳು ನಾಟಕ ಮಾಡ್ತಿಲ್ಲ, ಬಿಗ್ ಬಾಸ್ ಎಂಬ ಶೋಗೆ ಬಂದಿದ್ದೀನಿ, ನಾನು ಒಳ್ಳೊಳ್ಳೆ ಬಟ್ಟೆ ಹಾಕಬೇಕು, ತುಂಬಾ ಚೆನ್ನಾಗಿ ಮೇಕಪ್ ಮಾಡ್ಕೋಬೇಕು, ಇಂಗ್ಲಿಷ್ ಮಾತಾಡಬೇಕು, ಹೀಗೆಲ್ಲ ನಾಟಕ ಮಾಡೋದಕ್ಕೆ ಬಿಗ್ ಬಾಸ್ ಬಂದಿಲ್ಲ, ನಿಜವಾಗಲೂ ಆ ಹೆಣ್ಣು ಮಗಳು ನೋಡಿದರೆ ಖುಷಿಯಾಗುತ್ತದೆ. ತುಂಬಾ ಚೆನ್ನಾಗಿ ಬಿಗ್ ಬಾಸ್ ಶೋನಲ್ಲಿ ಆಟ ಆಡ್ತಿದ್ದಾಳೆ, ಅವಳಿಗೆ ಒಳ್ಳೆಯದಾಗಲಿ.

ನಮ್ ರೈತರು ಹೊಲದಲ್ಲಿ ಹೀಗೆಯೇ ಊಟ ಮಾಡೋದು.

ಮೊದಮೊದಲು ರಕ್ಷಿತಾ ತುಂಬಾ ಇಷ್ಟವಾಗುತ್ತಿದ್ದಳು. ಇವಾಗ ಅವಳ ನಡೆ-ನುಡಿಗಳು ಸರಿ ಇಲ್ಲ. ಯಾರ ಮಾತುಗಳನ್ನು ಅವಳು ಕೇಳಿಸಿಕೊಳ್ಳುವುದಿಲ್ಲ. ಅವಳ ವ್ಯಕ್ತಿತ್ವ ಆಚೆ ಬಂದಾಯ್ತು. ಅವಳು ಫ್ಯೆನಲ್‌ವರೆಗೆ ಬರಬಾರದು.

ಊಟ ಮಾಡಬೇಕಾದರೆ ಕಾಲು ಮುಂದೆ ಹೋಗಬಾರದು, ಒಳ್ಳೆ ಸಂಸ್ಕಾರ ಅಲ್ಲ

ನಮ್ಮ ಕಡೆ ಎಲ್ಲ ಊಟಕ್ಕೆ ಚಕ್ಲಮಕ್ಳ ಹಾಕಿ ಕೂತ್ಕೊಳ್ತೇವೆ ಕಾಲು ಊಟದ ತಟ್ಟೆಗಿಂತ ಮುಂದೆ ಹೋದ್ರೆ ದರಿದ್ರ ಅಂಥ ಬೈತಾರೆ. ಇದು ತಪ್ಪು. ಸರಿಯಾಗಿ ಕೂತ್ಕೊಂಡು ಊಟ ಮಾಡೋದು ಕಲಿಯಲಿ ಮೊದಲು. ಒಂದು ಚೂರು ಶಿಸ್ತು ಇಲ್ಲ, ತಲೆ ಕೇರ್ಕೊಂಡು ಇರುತ್ತಾಳೆ. ಸ್ವಲ್ಪ ಶಿಸ್ತು ಅಗತ್ಯ ಅಂಥ ಅನಿಸುತ್ತದೆ. ನನಗೆ ಮೊದಲು ಇಷ್ಟ ಆಗುತ್ತಿದ್ದಳು. ಈಗ ನೋಡಿದ್ರೆ ವಾಕರಿಕೆ, ನೆಗೆಟಿವಿಟಿ

ಬಿಗ್‌ ಬಾಸ್ ಮನೆಯೊಳಗೆ ಎಷ್ಟು ಜನ ನೀಟಾಗಿ ಕೂತು ಅನ್ನಕ್ಕೆ ಬೆಲೆ ಕೊಟ್ಟಿದ್ದಾರೆ, ಕಾಲ ಮೇಲೆ ಕಾಲು ಹಾಕಿಕೊಂಡು ಊಟ ಮಾಡ್ತಾರೆ ನೋಡಿದ್ದೀರಾ. ಇವಳು ನೆಲದ ಮೇಲೆ ಆದರೂ ಕೂತು ಊಟ ಮಾಡುತ್ತಿದ್ದಾಳೆ, ಅನ್ನಕ್ಕೆ ದರ್ಪ ತೋರಿಸಿಲ್ಲ.