ರೇಡಿಯೋ ಹಿಡಿದು ರೆಟ್ರೋಸ್ಟೈಲ್ನಲ್ಲಿ Bigg Boss ಜಾಹ್ನವಿ ಭರ್ಜರಿ ಫೋಟೋಶೂಟ್
ಬಿಗ್ಬಾಸ್ ಖ್ಯಾತಿಯ ಜಾಹ್ನವಿ ಇದೀಗ ರೆಟ್ರೋ ಶೈಲಿಯಲ್ಲಿ ರೇಡಿಯೋ ಜೊತೆ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ. ಬಿಗ್ಬಾಸ್ ಮನೆಯೊಳಗಿನ ಜಗಳ ಹಾಗೂ ವೈಯಕ್ತಿಕ ಜೀವನದ ಚರ್ಚೆಗಳ ನಂತರ, ಇದೀಗ ತಮ್ಮ ಡ್ರೆಸ್ ಸೆನ್ಸ್ ಹಾಗೂ ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಬಿಗ್ಬಾಸ್ ಜಾಹ್ನವಿ
ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ ಅವರು ಬಿಗ್ಬಾಸ್ 12ಕ್ಕೆ ಹೋಗಿ ಬಂದ ಮೇಲೆ ಬಿಗ್ಬಾಸ್ ಜಾಹ್ನವಿಯಾಗಿದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್ಗಳೂ ಬರುತ್ತಿವೆ.
ರೆಟ್ರೋಸ್ಟೈಲ್ನಲ್ಲಿ ಫೋಟೋಶೂಟ್
ಇದೀಗ ಜಾಹ್ನವಿ (Bigg Boss Jhanvi) ಅವರು 70-80ರ ದಶಕದ ಕಾಲದಲ್ಲಿ ಪ್ರತಿಯೊಂದು ಮನೆಯ ಧ್ವನಿಯಾಗಿದ್ದ ರೇಡಿಯೋ ಜೊತೆ ರೆಟ್ರೋಸ್ಟೈಲ್ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಗುವ ನಯನ... ಎನ್ನುವ ಹಾಡಿನ ಹಿನ್ನೆಲೆಯಲ್ಲಿ ಈ ಫೋಟೋಶೂಟ್ ನಡೆದಿದೆ.
ಫ್ಯಾನ್ಸ್ ಫಿದಾ
ರೇಡಿಯೋ ಹಿಡಿದುಕೊಂಡು ಈ ಫೋಟೋಶೂಟ್ ಅವರು ಮಾಡಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.
ಜಗಳದಿಂದ ಫೇಮಸ್
ಅಂದಹಾಗೆ ಜಾಹ್ನವಿ ಅವರು ಬಿಗ್ಬಾಸ್ನಲ್ಲಿ ಇದ್ದ ಸಂದರ್ಭದಲ್ಲಿ ಜಗಳದಿಂದಲೇ ಫೇಮಸ್ ಆಗಿದ್ದರು. ಅವರು ಮನೆಯೊಳಕ್ಕೆ ಇದ್ದಾಗ, ಹೊರಗಡೆಯಲ್ಲಿ ಅವರ ಮಾಜಿ ಪತಿ ನೀಡ್ತಿದ್ದ ಹೇಳಿಕೆಯಿಂದಾಗಿ ಇವರಿಬ್ಬರ ಡಿವೋರ್ಸ್ ವಿಷ್ಯ ವಿವಿಧ ರೂಪಗಳನ್ನು ಪಡೆದಿತ್ತು. ಇದೀಗ ಜಾಹ್ನವಿ ಅವರು ತಮಗೆ 2ನೇ ಮದುವೆಯ ಯೋಚನೆಯೇ ಇಲ್ಲ, ಮಗನೇ ಎಲ್ಲಾ ಎಂದು ಹೇಳಿದ್ದಾರೆ.
ಡ್ರೆಸ್ ಸೆನ್ಸ್
ಇದರ ಹೊರತಾಗಿಯೂ ಅವರು ಡ್ರೆಸ್ ಸೆನ್ಸ್ಗೆ ಸಕತ್ ಫೇಮಸ್ ಆಗಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಜಾನ್ವಿ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

