ಸಂದರ್ಶನದಲ್ಲಿ ಮಾತನಾಡಿದ ಮಾಳು, 'ಗಿಲ್ಲಿ ಕಪ್ ಗೆಲ್ಲುವ ಸಾಧ್ಯತೆ ಇದೆ.. ‘ನಮ್ಮ ಇಬ್ಬರ ಮಧ್ಯೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಇಬ್ಬರ ಹಾದಿ, ವ್ಯಕ್ತಿತ್ವ ಬೇರೆ. ಇಬ್ಬರ ಮಧ್ಯೆ ಹೋಲಿಕೆ ಸಾಧ್ಯವೇ ಇಲ್ಲ. ಗಿಲ್ಲಿಯೇನೂ ಕೆಟ್ಟವನಲ್ಲ. ಎಲ್ಲರನ್ನೂ ನಗಿಸುತ್ತಾನೆ..’ ಎಂದಿದ್ದಾರೆ. ಕಾರಣ ಇಲ್ಲಿದೆ ನೋಡಿ..

ಮಾಳು ಯೂ ಟರ್ನ್

ಬಿಗ್ ಬಾಸ್ ಕನ್ನಡ 12 ಶೋದಲ್ಲಿ 3 ತಿಂಗಳು ಇದ್ದ ಮಾಳು ನಿಪನಾಳ (Malu Nipanal) ಅವರು ಎಲಿಮಿನೇಟ್ ಆಗಿ ಹೊರ ಬಂದಿರೋದು ಗೊತ್ತೇ ಇದೆ. ಅವರೀಗ ತಮ್ಮ ಸ್ವಂತ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. ಇಲ್ಲಿ ಮುಗಿಸಿ ಅಲ್ಲಿಯೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅವರಿಗೆ ಈಗ ತಪ್ಪಿನ ಅರಿವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಕಾರಣ, ಈಗ ಅವರು ಆಡುತ್ತಿರುವ ಮಾತುಗಳು!

ಹೌದು, ಈ ಮೊದಲು ಯಾರು ಗೆದ್ದರೂ ಒಪ್ಪಿಕೊಳ್ಳಲ್ಲ ಎನ್ನುತ್ತಿದ್ದ ಅವರು ಈಗ, 'ಗಿಲ್ಲಿ ಕಪ್ ಗೆಲ್ಲಬಹುದು' ಎಂದು ಹೇಳಿದ್ದಾರೆ. ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಈ ಮೊದಲು ಮಾಳು ಆಡಿದ್ದ ಮಾತಿಗೆ ಕೋಪಗೊಂಡಿದ್ದ ಗಿಲ್ಲಿ ಫ್ಯಾನ್ಸ್‌ಗಳು, ಇದೀಗ ಮಾಳುವಿನಲ್ಲಿ ಆಗಿರೋ ಬದಲಾವಣೆಗೆ ಶಾಕ್ ಆಗಿ ಅಚ್ಚರಿ ಹಾಗೂ ಮೆಚ್ಚುಗೆ ಎರಡನ್ನೂ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಮಾಳುನಲ್ಲಿ ಈ ಪರಿ ಬದಲಾವಣೆ ಆಗಿದ್ಯಾಕೆ? ಮುಂದೆ ನೋಡಿ..

ಏನು ಬೇಕಿದ್ದರೂ ಆಗಬಹುದು ಎಂದಿದ್ದ ಮಾಳು

ಈ ಮೊದಲು ಕೆಲವು ಸಂದರ್ಶನಗಳಲ್ಲಿ ಮಾತನಾಡಿದ್ದ ಮಾಳು 'ಬಿಗ್ ಬಾಸ್‌ ಈ ಸೀಸನ್ ಯಾರೇ ಗೆದ್ದರೂ ನಾನು ಅದನ್ನು ಒಪ್ಪಿಕೊಳ್ಳೋದಿಲ್ಲ' ಎಂದು ಹೇಳಿದ್ದರು. 'ತಾನೇ ಕಪ್ ಗೆಲ್ಲುತ್ತೇನೆ' ಎಂಬ ನಂಬಿಕೆಯಲ್ಲಿ ಇದ್ದ ಮಾಳು ಅವರು, 'ಮನೆಯಲ್ಲಿರೋ ಯಾರಿಗೂ ಕಪ್ ಗೆಲ್ಲಲು ಅರ್ಹತೆ ಇಲ್ಲ' ಎಂದು ನೇರವಾಗಿ ಹೇಳಿದ್ದರು. ಅವರು ಮಾತು ಚರ್ಚೆಗೆ ಕಾರಣ ಆಗಿತ್ತು. ಪ್ರತಿ ಸಂದರ್ಶನದಲ್ಲಿ ಮಾತನಾಡುವಾಗ, 'ಕಪ್ ಯಾರು ಗೆಲ್ತಾರೆ' ಎಂದು ಕೇಳಿದಾಗ ಅವರು ಇದಕ್ಕೆ ಸೂಕ್ತ ಉತ್ತರ ನೀಡಿರಲಿಲ್ಲ. 'ಯಾರು ಗೆಲ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಏನು ಬೇಕಿದ್ದರೂ ಆಗಬಹುದು' ಎಂದಿದ್ದರು. ಆದರೀಗ ಮಾಳು 'ಯೂ ಟರ್ನ್ ಹೊಡೆದಿದ್ದಾರೆ'.. ಕಾರಣ?

ಮಾಳು ಅವರು ಬದಲಾಗಿದ್ದಾರೆ ಎನ್ನಬಹುದು. ಅಳೆದೂ ತೂಗಿ ಹೇಳಿದ್ದೋ ಏನೋ ಎಂಬಂತೆ 'ಗಿಲ್ಲಿ ಕಪ್ ಗೆಲ್ಲುವ ಸಾಧ್ಯತೆ ಇದೆ' ಎಂದಿದ್ದಾರೆ.

ಇಬ್ಬರ ಹಾದಿ, ವ್ಯಕ್ತಿತ್ವ ಬೇರೆ!

ಸಂದರ್ಶನದಲ್ಲಿ ಮಾತನಾಡಿದ ಮಾಳು, 'ನಮ್ಮ ಇಬ್ಬರ ಮಧ್ಯೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಇಬ್ಬರ ಹಾದಿ, ವ್ಯಕ್ತಿತ್ವ ಬೇರೆ. ಇಬ್ಬರ ಮಧ್ಯೆ ಹೋಲಿಕೆ ಸಾಧ್ಯವೇ ಇಲ್ಲ. ಗಿಲ್ಲಿಯೇನೂ ಕೆಟ್ಟವನಲ್ಲ. ಎಲ್ಲರನ್ನೂ ನಗಿಸುತ್ತಾನೆ. ಟಾಸ್ಕ್ ಚೆನ್ನಾಗಿ ಆಡಲ್ಲ ಅನ್ನೋದಷ್ಟೇ ನನಗೆ ಅವನಲ್ಲಿ ಕಂಡ ಕೊರತೆ. ಅವರು ತಪ್ಪು ತಿದ್ದುಕೊಂಡರೆ ಫಿನಾಲೆ ತಲುಪಿ ಕಪ್ ಗೆಲ್ಲಬಹುದು' ಎಂದು ಹೇಳಿದ್ದಾರೆ ಮಾಳು.

ಮಾಳು ಇಷ್ಟು ಹೇಳಿದ್ದೇ ತಡ, ನೆಟ್ಟಿಗರು ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ. 'ಗಿಲ್ಲಿ ಹವಾ ಏನು ಎಂಬುದು ಮಾಳುಗೆ ಈಗ ಗೊತ್ತಾಗಿದೆ. ಹೀಗಾಗಿಯೇ ಮಾಳು ಈಗ ಬದಲಾಗಿದ್ದಾರೆ' ಎಂದು ಕೆಲವರು ಹೇಳಿದ್ದಾರೆ. ಇತ್ತೀಚೆಗೆ ಮಾಳು ವೇದಿಕೆ ಏರಿದಾಗ 'ಗಿಲ್ಲಿ ಗಿಲ್ಲಿ' ಎಂದು ಕೂಗಿದ್ದರು. ಇದರಿಂದ ಅವರಿಗೆ ಮುಜುಗರ ಆಗಿತ್ತು. ಆ ಬಳಿಕ ಮಾಳು ಬದಲಾದರೋ ಹೇಗೆ? ಇದಕ್ಕೆ ಉತ್ತರವನ್ನು ಮಾಳು ಅವರೇ ಕೊಡಬೇಕು, ಬೇರೆಯವರು ಏನೇ ಉತ್ತರ ಕೊಟ್ಟರೂ ಅದು ಕೇವಲ ಊಹೆ ಅಷ್ಟೇ..!