ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋನಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟು ಕಂಟೆಂಟ್‌ ವಿಚಾರದಲ್ಲಿ ವೈಲ್ಡ್‌ ಆಗಿ ಮೆರೆದಿದ್ದ ರಜತ್‌ ಈಗ ಕೆಲ ವಿಷಯಗಳಿಗೆ ಸ್ಪಷ್ಟನೆ ನೀಡಿದ್ದಾರೆ.  

‘ಬಿಗ್‌ ಬಾಸ್ ಕನ್ನಡ ಸೀಸನ್‌ 11’ ಮನೆಯಲ್ಲಿದ್ದಾಗ ಭಾರೀ ಸೌಂಡ್‌ ಮಾಡಿದ್ದ‌ ಅನೇಕ ವಿಚಾರಗಳ ಬಗ್ಗೆ ರಜತ್‌ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೊರಗಡೆ ಬಂದ್ಮೇಲೆ ಮಾತನಾಡಿದ್ದಾರೆ. ರಜತ್‌ ಅವರು ರಸಿಕ ಅಂತ ಕೆಲವರು ಟ್ರೋಲ್‌ ಮಾಡಿದ್ದರು. ಈ ಬಗ್ಗೆ ರಜತ್‌ ಮೌನ ಮುರಿದಿದ್ದಾರೆ. 

ರಜತ್‌ ರಸಿಕ ಟ್ರೋಲ್!‌ 
ರಜತ್‌ ಅವರು ಭವ್ಯಾ ಗೌಡ ಅಕ್ಕ‌ ದಿವ್ಯಾ ಗೌಡ ಚೆನ್ನಾಗಿದ್ದಾರೆ ಅಂತ ಹೇಳಿದ್ದರು. ಇನ್ನು ಭವ್ಯಾ ಗೌಡ ತಂದೆ ಬಳಿ, ರಜತ್‌ ಅವರು, “ನಿಮ್ಮ ಮೂವರು ಮಕ್ಕಳು ತುಂಬ ಚೆನ್ನಾಗಿದ್ದಾರೆ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಭವ್ಯಾ ಅಕ್ಕ-ತಂಗಿ ಇಬ್ಬರೂ ಚೆನ್ನಾಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಭವ್ಯಾ ಗೌಡ ಬ್ಯುಸಿ ಇರ್ತಾರೆ. ಭವ್ಯಾ ಗೌಡ ಬದಲು ಅನುಷಾ ಈ ಮನೆಯಲ್ಲಿ ಇರಬೇಕಿತ್ತು ಅಂತ ಹೇಳಿದ್ದಾರೆ. ಇನ್ನು ತ್ರಿವಿಕ್ರಮ್‌ ಜೊತೆಗೆ ಮಾತನಾಡುವಾಗ ರಜತ್‌ ಅವರು ಐಶ್ವರ್ಯಾ ಸಿಂಧೋಗಿ ಚೆನ್ನಾಗಿದ್ದಾಳೆ ಅಂತ ಕೂಡ ಹೇಳಿದ್ದರು. ರಜತ್‌ ರಸಿಕ ಅಂತೆಲ್ಲ ಸಾಕಷ್ಟು ಟ್ರೋಲ್‌ ಆಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದಾರೆ. 

ʼತ್ರಿವಿಕ್ರಮ್‌ ಜೊತೆ ತನ್ನ ಅಕ್ಕ ದಿವ್ಯಾ ಗೌಡ ಮದುವೆ ಮಾಡಿಸೋಣ ಅಂತ Bigg Boss ಮನೇಲಿ ಮಾತಾಡಿದ್ದೆʼ: ಭವ್ಯಾ ಗೌಡ!

ರಜತ್ ಏನಂದ್ರು? 
“ಮಂಜುಗೆ ರೇಗಿಸಬೇಕು ಅಂತ ನಾವು ತಾಲಿಬಾನ್‌ ಹಾಡು ಹಾಡಿ ಡ್ಯಾನ್ಸ್‌ ಮಾಡಿದೆ. ಸುಮ್ಮನೆ ಮಾಡಿದ್ದ ಈ ಡ್ಯಾನ್ಸ್‌ ಸಿಕ್ಕಾಪಟ್ಟೆ ವೈರಲ್‌ ಆಯ್ತಂತೆ. ನಾನು ನನ್ನ ಹೆಂಡ್ತಿಯ ಸ್ನೇಹಿತರನ್ನು ಚುಡಾಯಿಸಿಕೊಂಡು ಇರ್ತೀನಿ, ಅಕ್ಷಿತಾಗೂ ರೂಢಿ ಆಗಿದೆ. ಚೆನ್ನಾಗಿದ್ದವರನ್ನ ಚೆನ್ನಾಗಿದ್ದಾಳೆ ಅಂತ ಹೇಳೋಕೆ ಸಮಸ್ಯೆ ಏನು? ನಾನು ಐಶ್ವರ್ಯಾ ಸಿಂಧೋಗಿಗೆ ದೇವರಾಣೆ ಕಿಸ್‌ ಕೊಟ್ಟಿಲ್ಲ, ಸುಮ್ಮನೆ ಮುಖದ ಹತ್ರ ಹೋದೆ ಅಷ್ಟೇ, ಇನ್ನೊಂದು ಕ್ಯಾಮರಾ ಆಂಗಲ್‌ನಲ್ಲಿ ತೋರಿಸಿದ್ರೆ ನಾನು ಕಿಸ್‌ ಕೊಟ್ಟಿಲ್ಲ ಅಂತ ತೋರಿಸ್ತಿತ್ತು” ಎಂದು ತ್ರಿವಿಕ್ರಮ್‌ ಅವರು ಹೇಳಿದ್ದಾರೆ. 

BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್‌ ಯು ಅಂದಿದ್ದೆ: ನಟ ತ್ರಿವಿಕ್ರಮ್‌ ಮುಕ್ತ ಮಾತು!

ಹನುಮಂತ ಗೆದ್ದಿದ್ದು ಖುಷಿ ಇದೆ! 
“ಬಿಗ್‌ ಬಾಸ್‌ ಮನೆಯಲ್ಲಿ ಯಾರು ಸ್ಟ್ರಾಂಗ್‌, ಯಾರು ವೀಕ್‌ ಇದ್ದಾರೆ ಎನ್ನುವ ಐಡಿಯಾ ಇರುತ್ತಿತ್ತು. ಜನರಿಗೆ ನಾವು ಇಷ್ಟವಾದರೆ ಹೇಗೆ ಜನರು ಮೆರೆಸ್ತಾರೆ ಎನ್ನೋದಕ್ಕೆ ನಾನೇ ಉತ್ತಮ ಉದಾಹರಣೆ. ಹನುಮಂತ ಕೂಡ ಚೆನ್ನಾಗಿ ಆಡಿದ್ದಾನೆ. ಎಲ್ಲೋ ಇದ್ದ‌ ಹನುಮಂತ ಫಿನಾಲೆಗೆ ಬಂದಿದ್ದಾನೆ. ಚೆನ್ನಾಗಿ ಆಡಿದ, ಹಾಡು ಹಾಡಿದ, ನಗಿಸಿದ. ಹನುಮಂತಗೆ ಜನರು ಬೆಂಬಲ ಕೊಡ್ತಾರೆ ಎನ್ನೋದು ಮೊದಲು ಗೊತ್ತಿತ್ತು. ಇದೇನು ಶಾಕ್‌ ಆಗಿರಲಿಲ್ಲ. ಕೊನೇ ಮೂಮೆಂಟ್‌ನಲ್ಲಿ ತ್ರಿವಿಕ್ರಮ್‌ಗೆ ಎಲ್ಲವೂ ಮಿಸ್‌ ಆಗುತ್ತದೆ. ಬಿಗ್ ಬಾಸ್‌ ಶೋನಲ್ಲಿಯೂ ಹೀಗೆ ಆಗಿತ್ತು” ಎಂದು ರಜತ್ ಅವರು ಹೇಳಿದ್ದಾರೆ.

BBK 11 ಮನೆಗೆ ಹೋಗೋ ಮುನ್ನ ತ್ರಿವಿಕ್ರಮ್‌ಗೆ ಲವ್ವರ್‌ ಇದ್ರಾ? ಉತ್ತರ ಕೊಟ್ಟ‌ ತ್ರಿವಿಕ್ರಮ್!‌

“ನಾನು ಚೈತ್ರಾ ಕುಂದಾಪುರಗೆ ತುಂಬ ಹಿಂಸೆ ಕೊಟ್ಟಿದ್ದೇನೆ. ಚೈತ್ರಾ ಮಾತುಗಳು ನನಗೆ ತುಂಬ ಕಿರಿಕಿರಿ ಮಾಡಿತ್ತು.‌ ಚೈತ್ರಾ ಕುಂದಾಪುರ ಉಸ್ತುವಾರಿ ಕೂಡ ನನಗೆ ಇಷ್ಟ ಇಲ್ಲ. ಆಟ ಆಡೋಕೆ ಬಿಡದೆ ಚೈತ್ರಾ ಸಿಕ್ಕಾಪಟ್ಟೆ ಸಿಟ್ಟು ತರಿಸಿದಳು. ನನಗೆ ಕಳಪೆ ಕೊಟ್ಟಿದ್ದು ತುಂಬ ಸಿಟ್ಟು ಬಂದಿತು. ಆಮೇಲೆ ಆಟ ಶುರು ಮಾಡಿದೆ. ನಿಮ್ಮನ್ನೆಲ್ಲ ಹೊರಗಡೆ ಕಳಿಸಿ ನಾನು ಹೊರಗಡೆ ಹೋಗೋದು ಅಂತ ಫಿಕ್ಸ್‌ ಆದೆ. ನಾವು ಹುಡುಗಿಯನ್ನು ತಳ್ಳಿದರೆ ನ್ಯೂಸ್‌ ಆಗುತ್ತದೆ, ಅದೇ ಹುಡುಗಿ ನಮ್ಮನ್ನು ತಳ್ಳಿದರೆ ನ್ಯೂಸ್‌ ಆಗೋದಿಲ್ಲ” ಎಂದು ರಜತ್‌ ಅವರು ಹೇಳಿದ್ದಾರೆ. 

ಈ ಹಿಂದೆ ʼರಾಜಾ ರಾಣಿʼ ರಿಯಾಲಿಟಿ ಶೋನಲ್ಲಿ ರಜತ್‌ ಭಾಗವಹಿಸಿದ್ದರು. ʼಬಿಗ್‌ ಬಾಸ್ʼ‌ ಮನೆಯಲ್ಲಿ ನೇರವಾದ ಮಾತುಗಳು, ಖಡಕ್‌ ಡೈಲಾಗ್‌, ಡ್ಯಾನ್ಸ್‌, ಹಾಡುಗಳಿಂದ ಅವರು ವೀಕ್ಷಕರನ್ನು ತುಂಬ ರಂಜಿಸಿದ್ದಾರೆ.