ʼಬಿಗ್ ಬಾಸ್ ಕನ್ನಡ 11ʼ ಶೋನಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಮಧ್ಯೆ ಲವ್ ಇದ್ಯಾ ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಆದರೆ ತನ್ನ ಅಕ್ಕನ ಜೊತೆ ತ್ರಿವಿಕ್ರಮ್ ಮದುವೆ ಮಾಡಿಸಬೇಕು ಅಂತ ಭವ್ಯಾ ಪ್ಲ್ಯಾನ್ ಮಾಡಿದ್ದರಂತೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್ ಮಧ್ಯೆ ಪ್ರೀತಿ ಹುಟ್ಟಿಕೊಂಡಿರಬಹುದಾ ಅಂತ ಹೊರಗಡೆ ಪ್ರಪಂಚ ಯೋಚನೆ ಮಾಡ್ತಿದ್ರೆ, ಭವ್ಯಾ ಗೌಡ ಮಾತ್ರ ತ್ರಿವಿಕ್ರಮ್ ಜೊತೆ ತನ್ನ ಅಕ್ಕನ ಮದುವೆ ಮಾಡಿಸಿದ್ರೆ ಹೇಗೆ ಅಂತ ಸ್ಕೆಚ್ ಹಾಕಿದ್ರಂತೆ.
ತ್ರಿವಿಕ್ರಮ್ ಅವರನ್ನು ರೇಗಿಸಿದ್ದೇವೆ..!
ದೊಡ್ಮನೆಯಿಂದ ಹೊರಗಡೆ ಬಂದಿರುವ ಭವ್ಯಾ ಗೌಡ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. “ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಬರುತ್ತಿದ್ದಂತೆ ನನ್ನ ಅಕ್ಕನ ಮದುವೆ ಮಾಡಬೇಕು ಅಂತ ನನ್ನ ತಾಯಿ ಕಾಯುತ್ತಿದ್ದಾರೆ. ತ್ರಿವಿಕ್ರಮ್ ಅವರಿಗೂ ಮದುವೆ ವಯಸ್ಸು ಆಗಿದೆ, ನನ್ನ ಅಕ್ಕನಿಗೂ ಮದುವೆ ಮಾಡಬೇಕು. ಇವರಿಬ್ಬರಿಗೂ ಮದುವೆ ಮಾಡಿದ್ರೆ ಹೇಗಿರುತ್ತದೆ ಅಂತ ನಾನು ಅಂದುಕೊಂಡಿದ್ದೆ. ನಾನು ಧನರಾಜ್ ಅವರು ಈ ರೀತಿ ಸ್ಕೆಚ್ ಹಾಕಿ ತಮಾಷೆ ಮಾಡುತ್ತಿದ್ದೆವು. ನನ್ನ ಅಕ್ಕ ಬಿಗ್ ಬಾಸ್ ಮನೆಗೆ ಬಂದಕೂಡಲೇ ಈ ವಿಚಾರ ಇಟ್ಕೊಂಡು ತ್ರಿವಿಕ್ರಮ್ ಅವರನ್ನು ರೇಗಿಸಿದ್ದೇವೆ. ಇದೆಲ್ಲ ತಮಾಷೆ ಅಷ್ಟೇ” ಎಂದು ಭವ್ಯಾ ಗೌಡ ಹೇಳಿದ್ದಾರೆ.
BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್ ಯು ಅಂದಿದ್ದೆ: ನಟ ತ್ರಿವಿಕ್ರಮ್ ಮುಕ್ತ ಮಾತು!
ದಿವ್ಯಾ ಗೌಡ ಏನಂದ್ರು?
ದಿವ್ಯಾ ಗೌಡ ಅವರು, “ಇವರು ಸುಮ್ಮನೆ ತಮಾಷೆ ಮಾಡಿದ್ದಾರೆ ಅಷ್ಟೇ. ನಾನು ಮದುವೆ ಆಗಬೇಕು, ಆದರೆ ಸದ್ಯ ಮದುವೆ ಆಗೋಕೆ ಇಷ್ಟ ಇಲ್ಲ. ಇನ್ನು ನಾನು ಆರಾಮಾಗಿದೀನಿ, ನನಗೆ ಬಿಗ್ ಬಾಸ್ ಮನೆಯೊಳಗಡೆ ಹೋಗೋಕೆ ಇಷ್ಟ ಆಗೋದಿಲ್ಲ” ಎಂದು ಹೇಳಿದ್ದಾರೆ.
ಅಕ್ಕನ ಮದುವೆ ಮಾಡಬೇಕು!
“ನನ್ನ ಅಕ್ಕ ದಿವ್ಯಾ ಗೌಡ ಅವರ ಮದುವೆ ಮಾಡೋಕೆ ಹಣ ಬೇಕು. ಹೀಗಾಗಿ ನಾನು ಬಿಗ್ ಬಾಸ್ ಶೋ ಗೆಲ್ಲಬೇಕು” ಅಂತ ಭವ್ಯಾ ಗೌಡ ಅವರು ದೊಡ್ಮನೆಯಲ್ಲಿದ್ದಾಗಲೇ ಹೇಳಿದ್ದರು.
ಭಾರೀ ಫೇಮಸ್ ಆಗಿದ್ದ ದಿವ್ಯಾ ಗೌಡ!
ಫ್ಯಾಮಿಲಿ ರೌಂಡ್‌ನಲ್ಲಿ ದಿವ್ಯಾ ಗೌಡ ಅವರು ʼಬಿಗ್ ಬಾಸ್ ಕನ್ನಡ 11ʼ ಮನೆಯೊಳಗಡೆ ಒಂದು ದಿನ ಪ್ರವೇಶ ಮಾಡಿದ್ದರು. ಆ ವೇಳೆ ಅವರು ಸ್ಪರ್ಧಿಗಳ ಜೊತೆ ಮಾತನಾಡಿದ್ದರು. ಅಷ್ಟೇ ಅಲ್ಲದೆ ರಜತ್ ಅವರು ಭವ್ಯಾಗಿಂತ ಭವ್ಯಾ ಅಕ್ಕ ಚೆನ್ನಾಗಿದ್ದಾರೆ ಅಂತ ಹೇಳಿದ್ದರು. ಈ ವಿಷಯವೇ ದೊಡ್ಡ ಚರ್ಚೆ ಆಗಿ, ದಿವ್ಯಾ ಗೌಡ ಫುಲ್ ಫೇಮಸ್ ಆಗಿದ್ದರು. ಇನ್ನು ಹನುಮಂತ, ಧನರಾಜ್ ಆಚಾರ್ ಜೊತೆ ದಿವ್ಯಾ ಗೌಡ ಮಾತನಾಡುವಾಗ “ಭವ್ಯಾ ಗೌಡ ಏನೂ ಕೆಲಸ ಮಾಡಲ್ಲ, ಮದುವೆ ಆದರೂ ಅಡುಗೆ ಮಾಡಲ್ಲ, ಸುಮ್ಮನೆ ತಿಂದು ಮಲಗ್ತಾಳೆ” ಅಂತ ಹೇಳಿದ್ದರು. ಅಷ್ಟೇ ಅಲ್ಲದೆ ಹನುಮಂತನ ಜೊತೆ ಮಾತನಾಡುವಾಗ, “ಕೇಳು ಬೇʼ ಎನ್ನುವ ಪದ ಬಳಸಿದ್ದರು. ಈ ಮಾತುಗಳು ಭಾರೀ ವೈರಲ್ ಆಗಿತ್ತು.
Lakshmi Baramma Serial: ಕೀರ್ತಿ, ಲಕ್ಷ್ಮೀ ಬಿಟ್ಟು ಬೇರೆ ಹುಡುಗಿ ಜೊತೆ ಮದುವೆಯಾಗಲು ವೈಷ್ಣವ್ ರೆಡಿ!
ಕಿಚ್ಚ ಸುದೀಪ್ ಏನು ಹೇಳಿದ್ದರು?
“ದಿವ್ಯಾ ಗೌಡ ಅವರು ಭಾರೀ ಫೇಮಸ್ ಆಗಿದ್ದು ರಜತ್ ಅವರಿಂದ. ಭವ್ಯಾ ಬದಲು ದಿವ್ಯಾ ಗೌಡ ಅವರೇ ಬಿಗ್ ಬಾಸ್‌ಗೆ ಹೋಗಿದ್ರೆ ಚೆನ್ನಾಗಿರುತ್ತಿತ್ತು ಎನ್ನುವ ಮಾತು ಬಂದಿದೆ” ಎಂದು ಕಿಚ್ಚ ಸುದೀಪ್ ಅವರೇ ʼಗ್ರ್ಯಾಂಡ್ ಫಿನಾಲೆʼ ವೇಳೆ ಹೇಳಿದ್ದರು.
ಭವ್ಯಾ ಗೌಡ ಅವರು ದೊಡ್ಮನೆಯಲ್ಲಿದ್ದಾಗ ಅವರಿಗೆ ಬಟ್ಟೆ, ಅಗತ್ಯ ವಸ್ತುಗಳು ಎಲ್ಲವನ್ನು ದಿವ್ಯಾ ಅವರೇ ಕಳಿಸಿಕೊಡುತ್ತಿದ್ದಂತೆ. ಈ ವಿಚಾರ ಬಿಟ್ಟರೆ ಬೇರೆ ಯಾವುದು ಅಷ್ಟು ಸಮಸ್ಯೆ ಆಗಿಲ್ಲ ಎಂದು ದಿವ್ಯಾ ಅವರು ಹೇಳಿದ್ದಾರೆ. ದಿವ್ಯಾ ಅವರಿಗೆ ಬೇಡಿಕೆ ಜಾಸ್ತಿ ಆಗಿದ್ದು, ಅವರು ಸಿನಿಮಾ ಮಾಡ್ತಾರಾ ಎಂದು ಕಾದು ನೋಡಬೇಕಿದೆ.
