ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಅವರು ಉತ್ತಮ ಸ್ನೇಹಿತರು. ಆದರೆ ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ʼಪದ್ಮಾವತಿʼ ನಟ ಉತ್ತರ ಕೊಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರಾ? ಇವರಿಬ್ಬರ ಜೊತೆಗೆ ಮದುವೆ ವಿಷಯದ ಬಗ್ಗೆ ಮಾತುಕತೆ ನಡೆದಿದ್ಯಾ? ಎಂಬ ಪ್ರಶ್ನೆ ಬಂದಿತ್ತು. ಇನ್ನು ಗೋಲ್ಡ್ ಸುರೇಶ್ ಅವರು ದೊಡ್ಮನೆಯೊಳಗಡೆ ಬಂದು “ಪ್ರೇಮ ನುವೇದನೆ” ಬಗ್ಗೆ ಪ್ರಶ್ನೆ ಮಾಡಿದ್ರು.
ಭವ್ಯಾ ಗೌಡ, ತ್ರಿವಿಕ್ರಮ್ ಸ್ನೇಹ!
ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಸ್ನೇಹಿತರಾಗಿದ್ದರು. ಪಾಸಿಟಿವ್ ವಿಷಯ ಅಂತ ಬಂದಾಗ ತ್ರಿವಿಕ್ರಮ್ ಅವರು ಭವ್ಯಾಗೆ, ಭವ್ಯಾ ಅವರು ತ್ರಿವಿಕ್ರಮ್‌ಗೆ ಬೆಂಬಲ ಕೊಡುತ್ತ ಬಂದಿದ್ದರು. ಇನ್ನು ಇವರಿಬ್ಬರ ಸ್ನೇಹದ ಬಗ್ಗೆ ಇಡೀ ಮನೆ ತಮಾಷೆ ಮಾಡಿಕೊಡುತ್ತಿತ್ತು. ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ಕೂಡ ಕಾಲೆಳೆಯುತ್ತಿದ್ದರು.
ಈ ಸರಳತೆಯಿಂದ Bigg Boss ಹನುಮಂತಗೆ ಭಾರೀ ಲಾಭ ಆಯ್ತು, ಲಕ್ಷ ಲಕ್ಷ ಹಣ ಉಳೀತು!
ಗೋಲ್ಡ್ ಸುರೇಶ್ ಏನಂದ್ರು?
ಇನ್ನೊಂದು ಕಡೆ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಡುವೆ ಒಂದು ಸಂಭಾಷಣೆ ನಡೆದಿತ್ತು. ಆ ಸಂಭಾಷಣೆಯಲ್ಲಿ ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ “ನೀನು ಉತ್ತರ ಕೊಟ್ಟಿಲ್ಲ, ಕೊಡು” ಅಂತ ಹೇಳುತ್ತಿದ್ದರು. ಆಗ ಭವ್ಯಾ ಅವರು, “ಇಲ್ಲ, ಈಗ ಏನೂ ಹೇಳೋಕೆ ಆಗೋದು. ನೀವು ಗೆದ್ದು ಬಂದು ಕೇಳಿದ್ರೆ ಹು ಹೇಳುತ್ತಿದ್ದೆ, ಇಲ್ಲವೇ ಉಹು ಹೇಳುತ್ತಿದ್ದೆ” ಎಂದಿದ್ದಾರೆ. ಇದರ ಬಗ್ಗೆ ಗೋಲ್ಡ್ ಸುರೇಶ್ ಅವರು ಭವ್ಯಾ ಗೌಡ ಬಳಿ “ತ್ರಿವಿಕ್ರಮ್ ಪ್ರಪೋಸ್ ಮಾಡಿದಾಗ ನೀನು ಓಕೆ ಅಂದ್ಯಾ? ನಿನ್ನ ಮದುವೆ ಮಾಡಸ್ತೀನಿ” ಎಂದಿದ್ದಾರೆ.
ಭವ್ಯಾ ಗೌಡ ಉತ್ತರ ಏನು?
ಈ ಬಗ್ಗೆ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆ ಆಯ್ತು. ಆಗ ಭವ್ಯಾ ಗೌಡ ಅವರು “ಗೋಲ್ಡ್ ಸುರೇಶ್ ಅವರು ಪ್ರಪೋಸ್ ಬಗ್ಗೆ ಹೇಳಿದಾಗ ನಾನು ತಮಾಷೆಯಾಗಿ ತಗೊಂಡು ಈ ವಿಚಾರ ಎಲ್ಲರಿಗೂ ಹೇಳ್ತಾರಾ? ಅಂತ ಕಾಮಿಡಿ ಮಾಡಿದೆ. ನಮ್ಮಿಬ್ಬರ ಮಧ್ಯೆ ಏನೂ ಇಲ್ಲ. ವಿಕ್ರಮ್ ಅವರು ನನಗೆ ಒಳ್ಳೆಯ ಸ್ನೇಹಿತ” ಎಂದಿದ್ದಾರೆ.
BBK 11 ಮನೆಗೆ ಹೋಗೋ ಮುನ್ನ ತ್ರಿವಿಕ್ರಮ್‌ಗೆ ಲವ್ವರ್ ಇದ್ರಾ? ಉತ್ತರ ಕೊಟ್ಟ ತ್ರಿವಿಕ್ರಮ್!
ತ್ರಿವಿಕ್ರಮ್ ಏನಂದ್ರು?
ಇನ್ನು ಈ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಕೂಡಲೇ ತ್ರಿವಿಕ್ರಮ್ ಅವರು ಮಾತನಾಡಿ, “ಐ ಲವ್ ಯು ಅಂತ ನಾವು ಎಲ್ಲರಿಗೂ ಹೇಳ್ತೀವಿ, ಹಾಗೆಯೇ ನಾನು ಭವ್ಯಾ ಗೌಡಗೂ ಹೇಳಿದೆ. ಲವ್ ಯು ಎನ್ನೋದರಲ್ಲಿ ತಪ್ಪಿಲ್ಲ. ಭವ್ಯಾ ಗೌಡ ಅವರು ನನ್ನ ಜ್ಯೂನಿಯರ್, ನನಗಿಂತ ಚಿಕ್ಕವಳು. ಭವ್ಯಾ ಗೌಡ ನನಗೆ ತುಂಬ ಬೆಂಬಲ ಕೊಟ್ಟಂತಹ ಹುಡುಗಿ. ನಾನು ಅನುಷಾಗೂ ಲವ್ ಯು ಅಂತ ಹೇಳಿದ್ದೀನಿ. ನಿಮಗೆ ಯಾರ ಜೊತೆ ಯಾರನ್ನು ನೋಡಬೇಕು ಅಂತ ಅನಿಸತ್ತೆ ಆಗ ಹೇಗೆ ಬೇಕಿದ್ರೂ ಕೇಳಿಸಬಹುದು. ಲವ್ ಯು ಎನ್ನೋದು ಸಜಜವಾಗಿ ಹೇಳುವಂತಹದ್ದು. ಇಲ್ಲಿ ಪ್ರೀತಿ ವಿಷಯ ಬರೋದಿಲ್ಲ” ಎಂದು ತ್ರಿವಿಕ್ರಮ್ ಹೇಳಿದ್ದಾರೆ.
BBK 11: ನನಗೆ ನೂರು ಎಕ್ಸ್ ಇದ್ದಾರೆ, ಯಾರ್ ಬಗ್ಗೆ ಮಾತಾಡ್ತಿದ್ದೀರಿ: ರಜತ್ ಕಿಶನ್ ಖಡಕ್ ಮಾತು!
ತಲೆ ಕೆಡಿಸಿಕೊಳ್ಳೋದಿಲ್ಲ!
ಅಂದಹಾಗೆ ಭವ್ಯಾ ಗೌಡ, ತ್ರಿವಿಕ್ರಮ್ ಅವರು ಮುಂದಿನ ದಿನಗಳಲ್ಲಿಯೂ ಸ್ನೇಹಿತರಾಗಿ ಇರ್ತೀವಿ ಎಂದು ಹೇಳಿದ್ದಾರೆ. “ಯಾರು ಏನೇ ಅಂದ್ರೂ ನಾವು ತಲೆ ಕೆಡಿಸಿಕೊಳ್ಳೋದು ಬೇಡ” ಎಂದು ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಹೇಳಿದ್ದಾರೆ.
ವಿಜೇತರು ಯಾರು?
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಹನುಮಂತ ಅವರು ವಿನ್ನರ್ ಆದರೆ, ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿದ್ದಾರೆ. ರಜತ್‌ಗೆ ಮೂರನೇ ಸ್ಥಾನ, ಮೋಕ್ಷಿತಾ ಪೈಗೆ ನಾಲ್ಕನೇ ಸ್ಥಾನ, ಮಂಜುಗೆ ಐದನೇ ಸ್ಥಾನ, ಭವ್ಯಾ ಗೌಡಗೆ ಆರನೇ ಸ್ಥಾನ ಸಿಕ್ಕಿದೆ.
