ʼಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಡುವೆ ಪ್ರೀತಿ ಇದ್ಯಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಹೊರಗಡೆಯೇ ತ್ರಿವಿಕ್ರಮ್‌ಗೆ ಲವ್ವರ್ ಇದ್ದಾರೆ ಎನ್ನುವ ಮಾತು ಬಂದಿತ್ತು. ಇದಕ್ಕೆ ತ್ರಿವಿಕ್ರಮ್ ಉತ್ತರ ನೀಡಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್ ಮಧ್ಯೆ ಲವ್ ಇದೆ ಅಂತ ಅನೇಕರಿಗೆ ಸಂದೇಹ ಇತ್ತು. ಅದರಲ್ಲಿಯೂ ಈ ಜೋಡಿಯ ಸಂಭಾಷಣೆಯೊಂದನ್ನು ಕೇಳಿದ್ದ ಗೋಲ್ಡ್ ಸುರೇಶ್ ಅವರು ಮತ್ತೊಮ್ಮೆ ಮನೆಯೊಳಗಡೆ ಹೋದಾಗ ಈ ವಿಷಯವನ್ನು ಇನ್ನಷ್ಟು ದೊಡ್ಡದು ಮಾಡಿದರು. ಇನ್ನೊಂದು ಕಡೆ ತ್ರಿವಿಕ್ರಮ್ ಅವರಿಗೆ ಇನ್ನೋರ್ವ ಗೆಳತಿ ಇದ್ದಾಳೆ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಎಲ್ಲ ಗೊಂದಲಗಳಿಗೆ ತ್ರಿವಿಕ್ರಮ್ ಅವರು ತೆರೆ ಎಳೆದಿದ್ದಾರೆ.
ಲವ್ವರ್ ಇದ್ದಾರಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ವಿಜೇತ ಹನುಮಂತ, ತ್ರಿವಿಕ್ರಮ್, ರಜತ್ ಕಿಶನ್ ಹಾಗೂ ಈ ಶೋ ಡೈರೆಕ್ಟರ್ ಪ್ರಕಾಶ್ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆಗ ತ್ರಿವಿಕ್ರಮ್ ಅವರ ಗೆಳತಿ ಬಗ್ಗೆ ಪ್ರಶ್ನೆ ಬಂತು. “ನಿಮಗೆ ಹೊರಗಡೆ ಪ್ರೇಯಸಿ ಇದ್ದಾರಂತೆ ಹೌದಾ?” ಎಂದಾಗ ತ್ರಿವಿಕ್ರಮ್ ಅವರು “ಇಲ್ಲ” ಎಂದಿದ್ದಾರೆ, ಆಮೇಲೆ “ನಿಮ್ಮ ಪ್ರೇಯಸಿ ಡಾಕ್ಟರ್ ಅಂತೆ” ಎಂದಾಗ ತ್ರಿವಿಕ್ರಮ್ ಅವರು, “ಡಾಕ್ಟರ್? ಈ ವಿಷಯ ನನಗೆ ಗೊತ್ತಿಲ್ಲ” ಎಂದಿದ್ದಾರೆ. ಒಟ್ಟಿನಲ್ಲಿ ತ್ರಿವಿಕ್ರಮ್ ಅವರು ಹೊರಗಡೆ ಯಾವ ಲವ್ ಇಲ್ಲ ಎಂದು ಹೇಳಿದ್ದಾರೆ.
BBK 11: ನನಗೆ ನೂರು ಎಕ್ಸ್ ಇದ್ದಾರೆ, ಯಾರ್ ಬಗ್ಗೆ ಮಾತಾಡ್ತಿದ್ದೀರಿ: ರಜತ್ ಕಿಶನ್ ಖಡಕ್ ಮಾತು!
ಸ್ಪಷ್ಟನೆ ನೀಡಿದ್ದ ತ್ರಿವಿಕ್ರಮ್!
ದೊಡ್ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್ ಮಧ್ಯೆ ಲವ್ ಇದೆ ಎಂದು ಕೆಲವರು ಅಂದುಕೊಂಡಿದ್ದರು. ಇನ್ನು ಕಿಚ್ಚ ಸುದೀಪ್ ಕೂಡ ಈ ಜೋಡಿಯ ಕಾಲೆಳೆಯುತ್ತಿದ್ದರು. “ನಾವಿಬ್ಬರೂ ಸ್ನೇಹಿತರು ಅಷ್ಟೇ, ಜಗತ್ತು ನಮ್ಮ ಬಗ್ಗೆ ಏನು ಬೇಕಿದ್ರೂ ಮಾತಾಡಲಿ, ನೀನು ಯಾವಾಗಲೂ ನನಗೆ ಜ್ಯೂನಿಯರ್. ಹೊರಗಡೆಯೂ ಚೆನ್ನಾಗಿರೋಣ” ಅಂತ ತ್ರಿವಿಕ್ರಮ್ ಅವರು ಮನೆಯೊಳಗಡೆ ಸ್ಪಷ್ಟನೆ ಕೊಟ್ಟಿದ್ದರು.
ಇದು ಮದ್ವಿ ವಿಷ್ಯ ಐತ್ರಿ..! ಕಿಚ್ಚ ಸುದೀಪ್ ಅವ್ರ ಮುಂದ ಹನುಮಂತನ ಅಪ್ಪ-ಅಮ್ಮ ಮಾತು ಕೊಟ್ಟಾರೀ...!
ಗೋಲ್ಡ್ ಸುರೇಶ್ ಪ್ರಶ್ನೆ ಏನಾಗಿತ್ತು?
ಭವ್ಯಾ ಗೌಡ, ತ್ರಿವಿಕ್ರಮ್ ಅವರು ಒಂದು ರಾತ್ರಿ ಮಾತನಾಡುತ್ತಿದ್ದರು. ಪದೇ ಪದೇ ತ್ರಿವಿಕ್ರಮ್ ಅವರು “ನಿನ್ನ ಉತ್ತರ ಏನು?” ಅಂತ ಪ್ರಶ್ನೆ ಮಾಡಿದ್ದರು. ಆಗ ಭವ್ಯಾ ಗೌಡ ಅವರು “ನೀವು ಗೆದ್ದು ಬಂದು ಕೇಳಿದ್ರೆ ಹೇಳ್ತಿದ್ದೆ, ಇಲ್ಲಿ ಹೇಳೋಕೆ ಆಗೋದಿಲ್ಲ, ಹೊರಗಡೆ ಮಾತಾಡ್ತೀವಿ” ಅಂತ ಹೇಳಿದ್ದರು. ಇದು ಪ್ರೇಮ ನಿವೇದನೆಯೋ ಎಂಬ ಪ್ರಶ್ನೆ ಎದ್ದಿತ್ತು. ಬಿಗ್ ಬಾಸ್ ಮನೆಯೊಳಗಡೆ ಮತ್ತೆ ಹೋದ ಗೋಲ್ಡ್ ಸುರೇಶ್ ಅವರು ಭವ್ಯಾಗೆ “ತ್ರಿವಿಕ್ರಮ್ ಪ್ರಪೋಸ್ ಮಾಡಿದಾಗ ಏನಂದೆ?” ಅಂತ ಪ್ರಶ್ನೆ ಮಾಡಿದ್ದರು. ಆಗಲೂ ಇವರಿಬ್ಬರು ಈ ವಿಷಯವನ್ನು ತಮಾಷೆಯಾಗಿ ತಗೊಂಡಿದ್ದರು.
ಎರಡನೇ ಬಾರಿಗೆ ಮದುವೆಗೆ ಸಜ್ಜಾದ ನಿರೂಪಕಿ ಚೈತ್ರಾ ವಾಸುದೇವನ್; ಪ್ಯಾರೀಸ್‌ನಲ್ಲಿ ಅಬ್ಬರದ ಪ್ರಿ ವೆಡ್ಡಿಂಗ್ ಶೂಟ್
ನಾನು ಭವ್ಯಾಳನ್ನು ಮದುವೆ ಆಗೋಕೆ ಆಗೋದಿಲ್ಲ!
ಈ ಬಗ್ಗೆ ಉತ್ತರ ಕೊಟ್ಟಿದ್ದ ತ್ರಿವಿಕ್ರಮ್ ಅವರು, “ಭವ್ಯಾ ಗೌಡ ನನ್ನ ಸ್ನೇಹಿತೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರು ಇರಬೇಕಾಗುತ್ತದೆ. ಸಾಮಾನ್ಯವಾಗಿ ಹೊರಗಡೆಯೂ ಎಲ್ಲರಿಗೂ ಐ ಲವ್ ಯು ಅಂತ ಹೇಳ್ತೀವಿ.ಹಾಗೆಯೇ ಭವ್ಯಾಗೂ ಐ ಲವ್ ಯು ಅಂತ ಹೇಳಿದ್ದೆ ಅಷ್ಟೇ. ಭವ್ಯಾ ಹಾಗೂ ನನ್ನ ಮಧ್ಯೆ ತುಂಬ ವಯಸ್ಸಿನ ಅಂತರ ಇದೆ. ನಾನು ಭವ್ಯಾಳನ್ನು ಮದುವೆ ಆಗೋಕೆ ಆಗೋದಿಲ್ಲ” ಎಂದು ಹೇಳಿದ್ದರು.
ತ್ರಿವಿಕ್ರಮ್‌ಗೆ ಮೂರನೇ ಸ್ಥಾನ!
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಟ್ರೋಫಿಯನ್ನು ಹನುಮಂತ ಲಮಾಣಿ ಪಡೆದುಕೊಂಡಿದ್ದಾರೆ. ತ್ರಿವಿಕ್ರಮ್ ಅವರು ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಇನ್ನು ರಜತ್ ಕಿಶನ್ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ. ತ್ರಿವಿಕ್ರಮ್ ಅವರು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಸೆ ಇಟ್ಟುಕೊಂಡಿದ್ದಾರೆ.
