Asianet Suvarna News Asianet Suvarna News

BBK 10: ಬಿಗ್‌ಬಾಸ್‌ ಮನೆಯಲ್ಲೂ ಶುರುವಾಯ್ತು ಪ್ರದೀಪ್‌ ಈಶ್ವರ್‌ ಮೋಟಿವೇಷನ್‌ ಸ್ಪೀಚ್‌!

ಬಿಗ್‌ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಕಾಲಿಟ್ಟಿರುವ ಶಾಸಕ ಪ್ರದೀಪ್‌ ಈಶ್ವರ್‌, ಬಿಗ್‌ಬಾಸ್‌ ಮನೆಯಲ್ಲಿಯೂ ತಮ್ಮ ಮೋಟಿವೇಶನ್‌ ಸ್ಪೀಚ್‌ ಆರಂಭಿಸಿದ್ದಾರೆ.

Bigg boss Kannada season 10 MLA Pradeep Eshwar motivation speech in BBK house sat
Author
First Published Oct 9, 2023, 4:18 PM IST

ಬೆಂಗಳೂರು (ಅ.09): ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಕಾಲಿಟ್ಟಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌, ಬಿಗ್‌ಬಾಸ್‌ ಮನೆಯಲ್ಲಿಯೂ ತಮ್ಮ ಮೋಟಿವೇಶನ್‌ ಕ್ಲಾಸ್‌ ಆರಂಭಿಸಿದ್ದಾರೆ. ಈ ಮೂಲಕ ಮೋಟಿವೇಶನ್‌ ಕ್ಲಾಸ್‌ ಹೆಸರಿನಲ್ಲಿ ವಂಚನೆ ಮಾಡುವವರಿಗೂ ಸಖತ್‌ ಚಾಟಿ ಬೀಸಿದ್ದಾರೆ.

ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ಕೇಂದ್ರ ಆರಂಭಿಸಿದ ಪ್ರದೀಪ್‌ ಈಶ್ವರ್‌ ಅವರು ಮೋಟಿವೇಶನ್‌ ಸ್ಪೀಚ್‌ ಮೂಲಕವೇ ಪ್ರಸಿದ್ಧಿಯಾಗಿದ್ದರು. ಇದಾದ ನಂತರ ಚಿಕ್ಕಬಳ್ಳಾಪುರದಿಂದ ಗೆದ್ದು ಹಾಲಿ ಸಚಿವರಾಗಿದ್ದ ಡಾ.ಕೆ. ಸುಧಾಕರ್‌ ಅವರನ್ನು ಸೋಲಿಸಿ ಗೆಲುವು ಸಾಧಿಸಿದ ಪ್ರದೀಪ್‌ ಈಶ್ವರ್‌ ಈಗ ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಮೋಟಿವೇಶನ್‌ ಸ್ಪೀಚ್‌ ಆರಂಭಿಸಿದ್ದಾರೆ.

BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್‌: ಸ್ಫರ್ಧಿಗಳಿಗೆ ಶಾಕ್‌!

"ಇಲ್ಲಿ ಏನಾಗುತ್ತಿದೆ ಎಂದರೆ ಮೋಟಿವೇಟ್‌ ಮಾಡುವ ಪ್ರತಿಯೊಬ್ಬನೂ ತಾನು ಸಾಚಾ ಅಂದುಕೊಂಡಿದ್ದಾರೆ. ಈಗಿನ ಜನರೇಶನ್‌ಗೆ ರೈಟ್‌ ಆಗಿ ಮೋಟಿವೇಶನ್‌ ಮಾಡುತ್ತಿಲ್ಲ, ಫಾಲ್ಸ್‌ ಆಗಿ ಮೋಟಿವೇಟ್‌ ಮಾಡ್ತಿದೀವಿ. ದೊಡ್ಡವರು ಹೇಳಿಕೊಡ್ತಾರೆ ಏಣು ಹತ್ತೋದೆ ಕಷ್ಟ ಎನ್ನುತ್ತಾರೆ. ಇನ್ನು ಕೆಲವರು ಹೇಳ್ತಾರೆ, ಏಣಿ ಹತ್ತಬಹುದು ಆದರೆ ತುದಿಯಲ್ಲಿ ನಿಲ್ಲುವುದು ಕಷ್ಟ ಎಂದು ಹೇಳುತ್ತಾರೆ. ಮುಖ್ಯವಾಗಿ ನಮ್ಮ ಜನರೇಷನ್‌ಗೆ ಏಣಿಯೇ ಸಿಗ್ತಿಲ್ಲ ಎಂದು ಪ್ರದೀಪ್‌ ಈಶ್ವರ್‌ ಮೋಟಿವೇಶನ್‌ ಸ್ಪೀಚ್‌ ಆರಂಭಿದ್ದಾರೆ.

ಇನ್ನು ಇಡೀ ರಾಜ್ಯಕ್ಕೆ ತಾನು ಡ್ರೋನ್‌ ಕಂಡುಹಿಡಿದ ವಿಜ್ಞಾನಿಯೆಂದು ಬಿಂಬಿಸಿಕೊಂಡಿದ್ದ ಮಂಡ್ಯದ ಹೈದ ಡ್ರೋನ್‌ ಪ್ರತಾಪ್‌ ರಾಜ್ಯಾದ್ಯಂತ ಸುತ್ತಾಡಿ, ಶಾಲಾ ಕಾಲೇಜುಗಳು ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿಯೂ ಮೋಟಿವೇಶನ್‌ ಸ್ಪೀಚ್‌ ಮಾಡುತ್ತಿದ್ದನು. ಆದರೆ, ಡ್ರೋನ್‌ ಕಂಡುಹಿಡಿದಿಲ್ಲವೆಂಬ ಸತ್ಯಾಂಶ ನಾಡಿಗೆ ತಿಳಿಯುತ್ತಿದ್ದಂತೆ ಡ್ರೋನ್‌ ಪ್ರತಾಪ್‌ ಮುಖ್ಯವಾಹಿನಿಯಿಂದ ದೂರವಾಗಿದ್ದರು. ಈಗ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ತನಗೆ ಆಗಿರುವ ಮೋಸ ಹಾಗೂ ತನ್ನ ಬಗ್ಗೆ ಜನರು ಮಾತನಾಡುತ್ತಿರುವುದು ಎಲ್ಲವೂ ಸುಳ್ಳು ಎಂದು ಡ್ರೋನ್‌ ಪ್ರತಾಪ್‌ ಹೇಳಿದ್ದಾರೆ.

Follow Us:
Download App:
  • android
  • ios