BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್: ಸ್ಫರ್ಧಿಗಳಿಗೆ ಶಾಕ್!
ನಾನು ಬಿಗ್ ಬಾಸ್ ಮನೆಗೆ ನಿನ್ನೆಯೇ ಬರಬೇಕಿತ್ತು. ಆದರೆ ಇವತ್ತು ಬಂದಿದ್ದೇನೆ. ಸ್ಪರ್ಧಿಯಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿರೋದಿಕ್ಕೆ ಖುಷಿಯಾಗಿದೆ. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು' ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 10 ಗ್ರ್ಯಾಂಡ್ ಪ್ರೀಮಿಯರ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. 7 ಜನ ನೇರವಾಗಿ ದೊಡ್ಮನೆ ಪ್ರವೇಶಿಸಿದರೆ ಇಬ್ಬರು ಫೇಲ್ ಆಗಿ ತಮ್ಮ ಮನೆಗೆ ವಾಪಸ್ ಹೋಗಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಮೊದಲ ದಿನವೇ ಹೊಸ ಎಂಟ್ರಿಯಾಗಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿತ್ತು.
ಅಂತೆಯೇ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಡೊಳ್ಳು ಕುಣಿತ ಮೂಲಕ ಅವರನ್ನು ಬಿಗ್ ಬಾಸ್ ಮನೆಗೆ ಸ್ವಾಗತ ನೀಡಿದ್ದಾರೆ. 'ನಾನು ಬಿಗ್ ಬಾಸ್ ಮನೆಗೆ ನಿನ್ನೆಯೇ ಬರಬೇಕಿತ್ತು. ಆದರೆ ಇವತ್ತು ಬಂದಿದ್ದೇನೆ. ಸ್ಪರ್ಧಿಯಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿರೋದಿಕ್ಕೆ ಖುಷಿಯಾಗಿದೆ. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು' ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. 'ನಾವು ಎಂಎಲ್‌ಎ ಜೊತೆ ಸ್ಪರ್ಧೆ ಮಾಡ್ತಿದ್ದೇವೆ, ಇದು ತಮಾಷೆ ವಿಷಯವೇ ಅಲ್ಲ' ಎಂದು ಪ್ರದೀಪ್ ಈಶ್ವರ್ ಅವರಿಗೆ ಸಂತು ಹೇಳಿದ್ದಾರೆ.
ನಾನು ಎಂಟ್ರಿ ಅಂತಲೇ ಅಂತ ಅಂದುಕೊಂಡಿರಲಿಲ್ಲ" ಅಂತ ಸಿರಿ ಅವರು ಪ್ರದೀಪ್ ಎಂಟ್ರಿಗೆ ಹೇಳಿದ್ದಾರೆ. ಪ್ರದೀಪ್ ಈಶ್ವರ್ ಅವರು ಎಂಎಲ್‌ಎ ಆಗಿದ್ದು, ಅವರು ಜನರ ಸಮಸ್ಯೆಗಳನ್ನು ಆಲಿಸಬೇಕು. ದೊಡ್ಮನೆಯೊಳಗಡೆ ಅವರು ಸ್ಪರ್ಧಿಯಾಗಿ ಇರುತ್ತಾರೆ ಎನ್ನೋದು ಡೌಟ್. ಕೆಲವೇ ಕೆಲವು ದಿನ ಅವರು ಅತಿಥಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಸಾಧ್ಯತೆ ಜಾಸ್ತಿ ಇದೆ.
Bigg Boss Season 10: ಕನ್ನಡತಿಯ ಹರ್ಷ-ಭುವಿ ದೊಡ್ಮನೆಯಲ್ಲಿ ಇರ್ತಾರಾ?
ಈಗ ಪ್ರದೀಪ್ ಈಶ್ವರ್ ಸ್ಪರ್ಧಿ ಎಂದು ದೊಡ್ಮನೆಯೊಳಗಡೆ ಹೇಳಿ, ಆನಂತರ ಅತಿಥಿ ಅಂತ ಹೇಳುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಮಾಧ್ಯಮದವರು ಬಿಗ್ ಬಾಸ್‌ಗೆ ಹೋಗ್ತೀರಾ ಅಂದಿದಕ್ಕೆ ಸೋಮವಾರದ ತನಕ ಕಾದುನೋಡಿ ಎಂದು ಪ್ರದೀಪ್ ಈಶ್ವರ್ ಟ್ವಿಸ್ಟ್ ಕೊಟ್ಟಿದ್ದರು. ಜಿಯೋ ಸಿನಿಮಾ ಒಟಿಟಿ ಹಾಗೂ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ವೀಕ್ಷಣೆಗೆ ಅವಕಾಶ ಇದೆ. ಪ್ರತಿ ದಿನ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ.