ನನಗೆ ಪ್ರೀತಿ ಬೇಕಿತ್ತು ಅನುಕಂಪವಲ್ಲ, ಬಿಗ್ ಬಾಸ್ ಮನೆ ಅದನ್ನು ಕೊಟ್ಟಿದೆ; ನೀತು ವನಜಾಕ್ಷಿ

ಕೆಲವೊಂದು ವಿಚಾರದಲ್ಲಿ ನಾನು ಸ್ವಲ್ಪ ಹಿಂದೇಟು ಹಾಕ್ತಿದ್ದೆ. ಯಾಕಂದ್ರೆ ಆರಂಭದಲ್ಲಿ ಜಗಳ ಆಡ್ತಿದ್ದೆ. ಸರಿಯಾದ ವಿಷಯಕ್ಕೇ ಜಗಳ ಆಡ್ತಿದ್ದೆ. ಆಮೇಲಾಮೇಲೆ, ನಾನು ಬೇರೆ ರೀತಿ ಪ್ರೊಜಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಅದರಿಂದ ಹಿಂಜರಿಗೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ. ಟಾಸ್ಕ್‌ನಲ್ಲಿಯೂ ಎಲ್ಲರೂ ಹೇಳಿದ್ದನ್ನ ಒಪ್ಪಿಕೊಂಡುಬಿಡುತ್ತಿದ್ದೆ.

Bigg boss kannada season 10 eliminated contestant Neethu Vanajakshi interview srb

ಏಳನೇ ವಾರದಲ್ಲಿ ಬಿಗ್‌ಬಾಸ್ ಮನೆಯಿಂದ ನೀತು ವನಜಾಕ್ಷಿ ಹೊರಬಿದ್ದಿದ್ದಾರೆ. ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ. ಬಿಗ್‌ಬಾಸ್‌ನ ಈ ಜರ್ನಿಯ ಕುರಿತು JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ನೀತು ಹಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 

'ಈವಾಗಷ್ಟೇ ಹೊರಗೆ ಬಂದಿದೀನಿ. ಸ್ವಲ್ಪ ಬೇಜಾರು ಇದ್ದೇ ಇದೆ. ಆದರೆ 50 ದಿನ ಮುಗಿಸಿದ್ದೇನೆ ಎಂಬ ಖುಷಿಯಿದೆ. ಎಲ್ಲ ಕಂಟೆಸ್ಟೆಂಟ್‌ಗಳ ಮಧ್ಯ ನಾನೂ ಅಷ್ಟು ದಿನ ಸರ್ವೈವ್ ಆಗಿದ್ದೀನಿ ಎಂಬ ಹೆಮ್ಮೆ ಇದೆ. ತುಂಬ ಅನುಭವಗಳ ಜೊತೆಗೆ ಮನೆಗೆ ಹೋಗುತ್ತಿದ್ದೇನೆ. ಈ ಅನುಭವಗಳನ್ನು ಮುಂದೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಮುನ್ನುಗ್ಗುತ್ತೇನೆ. ಹೊರಗಡೆ ಬರ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ಕಳೆದ ಎರಡು ವಾರದಿಂದ ನನ್ನ ಪರ್ಪಾರ್ಫೆನ್ಸ್‌ ತುಂಬ ಕಡಿಮೆ ಇತ್ತು. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿದ್ದೆ. ಆದರೆ ದುರದೃಷ್ಟ. ಏನೂಮಾಡಕ್ಕಾಗಲ್ಲ. 

ಕೆಲವೊಂದು ವಿಚಾರದಲ್ಲಿ ನಾನು ಸ್ವಲ್ಪ ಹಿಂದೇಟು ಹಾಕ್ತಿದ್ದೆ. ಯಾಕಂದ್ರೆ ಆರಂಭದಲ್ಲಿ ಜಗಳ ಆಡ್ತಿದ್ದೆ. ಸರಿಯಾದ ವಿಷಯಕ್ಕೇ ಜಗಳ ಆಡ್ತಿದ್ದೆ. ಆಮೇಲಾಮೇಲೆ, ನಾನು ಬೇರೆ ರೀತಿ ಪ್ರೊಜಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಅದರಿಂದ ಹಿಂಜರಿಗೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ. ಟಾಸ್ಕ್‌ನಲ್ಲಿಯೂ ಎಲ್ಲರೂ ಹೇಳಿದ್ದನ್ನ ಒಪ್ಪಿಕೊಂಡುಬಿಡುತ್ತಿದ್ದೆ. ಅಲ್ಲಿ ಇನ್ನೂ ಸ್ವಲ್ಪ ಚುರುಕಾಗಿದ್ದಿದ್ರೆ ನಾನು ಸರ್ವೈವ್ ಆಗಬಹುದಾಗಿತ್ತು. ಈಗ ನಾನು ಮತ್ತೆ ಹೋದ್ರೆ ಖಂಡಿತ ಇನ್ನಷ್ಟು ಚೆನ್ನಾಗಿ ಪರ್ಫಾರ್ಪೆನ್ಸ್‌ ಮಾಡುತ್ತೇನೆ. ಯಾವಾಗ ನನಗೆ ಕಿಚ್ಚನ ಚಪ್ಪಾಳೆ ಬಂತೋ, ನನಗದು ಟ್ರೋಫಿ ತಗೊಂಡಂಗೆ. ಅಷ್ಟು ಖುಷಿಯಾಯ್ತು ನಂಗೆ. ಚೆನ್ನಾಗಿ ಆಡ್ತಾ ಇದ್ದೀನಿ ಅನ್ನೋ ಕಾನ್ಫಿಡೆನ್ಸ್ ಬಂತು. ಒಬ್ಬ ಸ್ಪರ್ಧಿಗೆ ಏನೇನು ಸಿಗಬೇಕೋ ಅವೆಲ್ಲವೂ ನನಗೆ ಸಿಕ್ಕಿವೆ. !

ಬಿಗ್‌ಬಾಸ್‌ ಮನೆಯೊಳಗೆ ನನ್ನ ಪ್ರಕಾರ ಪ್ರತಾಪ್ ತುಂಬ ಜೆನ್ಯೂನ್. ಯಾಕೆಂದ್ರೆ ಅವನು ಮಾತಾಡಬೇಕಾದ್ರೆ ನಾಟಕೀಯತೆ ಇರುತ್ತಿರಲಿಲ್ಲ. ಚೆನ್ನಾಗಿ ಆಡ್ತಾನೂ ಇದ್ದಾನೆ. ಸ್ನೇಹಿತ್ ಫೇಕ್ ಅನಿಸ್ತಾನೆ. ಯಾಕೆಂದರೆ ‘ಟಾಸ್ಕ್ ಎಲ್ಲ ಆಯ್ತು, ಇನ್ಮೇಲಿಂದ ಫ್ರೈಡೆ ಸಾಟರ್‍ಡೇ ನಾವೊಂದ್ ಸ್ವಲ್ಪ ಎಂಟರ್‍ಟೈನಿಂಗ್ ಆಗಿರ್ಬೇಕು’ ಅಂತ. ಹಾಗಾಗಿ ಅವನು ಬಹುಶಃ ಕ್ಯಾಮೆರಾಗೋಸ್ಕರ ಚಟುವಟಿಕೆ ಮಾಡ್ತಿದ್ದಾನೆ ಅನ್ಸತ್ತೆ. ಪ್ರತಾಪ್‌, ತುಕಾಲಿ ಸಂತೋಷ್, ಸಂಗೀತಾ, ಕಾರ್ತಿಕ್, ತನಿಷಾ ಈ ಐವರು ಈ ಸಲದ ಬಿಗ್‌ಬಾಸ್‌ ಫೈನಲ್‌ನಲ್ಲಿ ಇರ್ತಾರೆ. ಅವರಲ್ಲಿ ಪ್ರತಾಪ್ ವಿನ್ನರ್ ಆಗ್ತಾನೆ. 

ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳನ್ನು ತುಂಬಾನೇ ಎಂಜಾಯ್ ಮಾಡಿದೀನಿ ನಾನು. ಕಥೆ ಹೇಳೋದು ಮಜವಾಗಿತ್ತು. ನನಗೆ ಗುರಿ ಇಡೋದು ಅಂದ್ರೆ ತುಂಬಾನೇ ಇಷ್ಟ. ಹಾಗಾಗಿ ಇರುಳ್ಳಿ ಅಂತ ಹೇಳಿದ ತಕ್ಷಣ ದೂರದಿಂದಲೇ ಗುರಿಇಟ್ಟು ಹಾಕಿಬಿಟ್ಟಿದ್ದೆ. ಆ ಟಾಸ್ಕ್‌ಗಳನ್ನು ಫುಲ್ ಜೋಷ್‌ನಲ್ಲಿ ಖುಷಿಯಿಟ್ಟು ಆಡ್ತಿದ್ದೆ. ಲಗೋರಿ ಆಟವೂ ಮಜವಾಗಿತ್ತು. ಚಿಕ್ಕ ಮಗುವಾಗಿದ್ದಾಗ ನಾನು ಏನೆಲ್ಲ ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲವೋ ಅವೆಲ್ಲವನ್ನೂ ಬಿಗ್‌ಬಾಸ್ ಮನೆಯ ಫನ್ ಫ್ರೈಡೆ ಟಾಸ್ಕ್‌ನಲ್ಲಿ ಎಂಜಾಯ್ ಮಾಡಿದ್ದೇನೆ. 

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಮುಂಗಾರು ಮಳೆ ಚೆಲುವೆ ಪೂಜಾ ಗಾಂಧಿ, ಯಾರು ಆ ವರ?

ಬಿಗ್‌ಬಾಸ್‌ ಮನೆಯಲ್ಲಿ ತುಂಬ ಮಿಸ್ ಮಾಡ್ಕೊಳೋದು ಕಾಫಿ ಮಗ್. ಅದರಲ್ಲಿ ನೀತು ಎಂದು ಬರೆದಿತ್ತು. ಅದು ನನ್ನ ಐಡೆಂಟಿಟಿ. ಮತ್ತು ಮಮ್ಮಿ ನಾನು ಇರುವ ಫೋಟೊ ಇತ್ತು. ಅದನ್ನೂ ಮಿಸ್ ಮಾಡ್ಕೋತೀನಿ. ಎದ್ದ ತಕ್ಷಣವೇ ಮಮ್ಮಿ ಮುಖ ನೋಡ್ತಿದ್ದೆ. ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರೊಟ್ಟಿಗೆ ನಾನು ಒಳ್ಳೆಯ ಕನೆಕ್ಷನ್ ಇಟ್ಟುಕೊಂಡಿದ್ದೆ. ಎಲ್ಲರಿಗೂ ಅವರದೇ ಆದ ಒಂದು ಜರ್ನಿ ಅಂತ ಇರತ್ತೆ. ಯಾವ್ದೆ ಕೆಲಸ ಅಂತ ಬಂದಾಗ ಏನಾದ್ರೂ ಕಲಿಬೇಕು, ಏನಾದ್ರು ಮಾಡಬೇಕು ಅಂದಾಗ ಮಾಡುತ್ತಿದ್ದೆ. ಅಡುಗೆ ಮಾಡುವುದರಿಂದ ಎಲ್ಲರ ಜೊತೆಗೆ ಒಂದು ಬಾಂಡಿಂಗ್ ಬೆಳೆದಿತ್ತು. 

ಟಾಸ್ಕ್‌ ಅಂತ ಬಂದಾಗ ಇವರು ಸರಿ ಇಲ್ಲ, ಅವ್ರು ಸರಿ ಇಲ್ಲ ಅಂತ ಹೇಳ್ಬೇಕಾಗತ್ತೆ. ಫೇಕ್ ಅಂತ ಹೇಳ್ಬೇಕಾಗತ್ತೆ. ಎಂಡ್‌ ಆಫ್‌ ದಿ ಡೇ ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇದೆ. ಎಲ್ಲರೂ ಸ್ಟ್ರಾಂಗ್ ಆಗಿಯೇ ಇದ್ದಾರೆ. ಪ್ರೀತಿಯನ್ನು ಮನದುಂಬಿಕೊಂಡು ಹೋಗುತ್ತಿರುವೆ. ನನಗೆ ಪ್ರೀತಿ ಬೇಕಾಗಿತ್ತು. ಸಿಂಪತಿ ಬೇಕಾಗಿರ್ಲಿಲ್ಲ. ಸಿಂಪತಿ ಇಲ್ಲದ ಪರಿಪೂರ್ಣ ಪ್ರೀತಿಯನ್ನು ಹುಡುಕಿಕೊಂಡು ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಅದು ನನಗೆ ಸಿಕ್ಕಿದೆ. 

ಎಷ್ಟು ಹೇಳಿದ್ರೂ ನೀವು ಏನೂ ಮಾಡ್ತಾ ಇಲ್ಲ ಎಂದರೆ ನಿಮಗೆ ಕಣ್ಣಿಲ್ಲ, ಕಿವಿ ಇಲ್ಲ; ಬೃಂದಾವನಕ್ಕೆ ಏನ್ ಕಾಮೆಂಟ್ಸ್‌ ಗುರೂ!

ನನಗೆ ಇದೊಂದು ಒಳ್ಳೆಯ ಅವಕಾಶ. ಮನೆಯಲ್ಲಿ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೀನಿ. ಈ ನೆನಪುಗಳನ್ನು ನನ್ನ ಜೀವನವಿಡೀ ಒಂದೊಂದು ಎಪಿಸೋಡ್ ನೋಡ್ತಾ ಎಂಜಾಯ್ ಮಾಡ್ತೀನಿ. ಟ್ರಾನ್ಸ್‌ಜೆಂಡರ್‌ಗಳ ಬದುಕಿನ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ. ನಮಗೆ ಏನು ಬೇಕು, ನಾವು ಸಮಾಜದಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ. ನಮಗೆ ಕರುಣೆ ಬೇಡ. ಪ್ರೀತಿ ಕೊಟ್ಟರೆ ಸಾಕು. ಅದು ನನಗೆ ಬಿಗ್‌ಬಾಸ್ ಮನೆ ಕೊಟ್ಟಿದೆ. ಅದನ್ನು ನಾನು ಮನದುಂಬಿ ತೆಗೆದುಕೊಂಡು ಹೋಗುತ್ತಿದ್ದೇನೆ' ಎಂದಿದ್ದಾರೆ ನೀತು.

ತುಕಾಲಿ ಸಂತೋಷ್ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್; ಭಾರೀ ನೋವು ಅನುಭವಿಸಿದ ಕಾರ್ತಿಕ್ ಮಹೇಶ್!

ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತಿದೆ? ಯಾರು ಯಾವ ಟಾಸ್ಕ್ ಮಾಡಿದ್ದಾರೆ, ಏನಯ ಕತೆ? ಎಲ್ಲವನ್ನೂನೊಡಲು 'https://jiocinema.onelink.me/fRhd/5mnctrgj'ಕ್ಲಿಕ್ ಮಾಡಬಹುದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು JioCinemaದಲ್ಲಿ ಬಿಗ್ ಬಾಸ್ ಕನ್ನಡ ಉಚಿತ ನೇರಪ್ರಸಾರ ವೀಕ್ಷಿಸಬಹುದು. ಪ್ರತಿದಿನದ ಎಪಿಸೋಡ್ ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

Latest Videos
Follow Us:
Download App:
  • android
  • ios