ತುಕಾಲಿ ಸಂತೋಷ್ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್; ಭಾರೀ ನೋವು ಅನುಭವಿಸಿದ ಕಾರ್ತಿಕ್ ಮಹೇಶ್!
ಇಂದು, ಅಂದರೆ 26 ನವೆಂಬರ್ 2023 ರಂದು ಬಿಗ್ ಬಾಸ್ ಶೋದ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆ ಪ್ರಸಾರವಾಗಲಿದೆ. ಹಾಗೇ, ಇನ್ನೊಂದು ಸ್ಪರ್ಧಿ ಎಲಿಮಿನೇಶನ್ ಮೂಲಕ ಮನೆಯಿಂದ ಹೊರಹೋಗಲಿದ್ದಾರೆ. ಅದು ಯಾರು ಎಂಬುದು ಇಂದು ರಾತ್ರಿ 9.00 ಗಂಟೆ ಎಪಿಸೋಡ್ ನೋಡಿದರೆ ತಿಳಿಯುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲಿ ದಿನದಿನಕ್ಕೂ ಹಲವಾರು ಮಹತ್ತರ ಬದಲಾವಣೆಗಳು ಆಗುತ್ತಿರುತ್ತವೆ. ಇಂದಿನ ಸಂಚಿಕೆ ಪ್ರೋಮೋ ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಕೇಳಿ ಬರುತ್ತಿರುವ ತುಕಾಲಿ ಸಂತೋಷ್ ಮಾತುಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಆಗಿರುವ ಹಲವು ಸೂಚನೆಗಳ ಝಲಕ್ ಕಾಣಿಸುತ್ತಿದೆ ಎನ್ನಬಹುದು. ಬಿಗ್ ಬಾಸ್ ಗೇಮ್ ಶೋ ಹೋಸ್ಟ್ ಸುದೀಪ್ ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತ ತುಕಾಲಿ ಸಂತೋಷ್ ಆ ಮನೆಯ ಸದ್ಯದ ಹಲವು ಸ್ಥಿತಿಗತಿಗಳ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ಎನ್ನಬಹುದು.
ಇಂದು, ಅಂದರೆ 26 ನವೆಂಬರ್ 2023 ರಂದು ಬಿಗ್ ಬಾಸ್ ಶೋದ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆ ಪ್ರಸಾರವಾಗಲಿದೆ. ಹಾಗೇ, ಇನ್ನೊಂದು ಸ್ಪರ್ಧಿ ಎಲಿಮಿನೇಶನ್ ಮೂಲಕ ಮನೆಯಿಂದ ಹೊರಹೋಗಲಿದ್ದಾರೆ. ಅದು ಯಾರು ಎಂಬುದು ಇಂದು ರಾತ್ರಿ 9.00 ಗಂಟೆ ಎಪಿಸೋಡ್ ನೋಡಿದರೆ ತಿಳಿಯುತ್ತದೆ. ಇಂದಿನ ಸಂಚಿಕೆಯಲ್ಲಿ ನಟ, ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಮನೆಯ ಹಲವು ಸದಸ್ಯರ ಜತೆ ಮಾತನಾಡಿದ್ದಾರೆ. ಪ್ರೋಮೋದಲ್ಲಿ ತುಕಾಲಿ ಸಂತು ಹೇಳಿರುವ ಮಾತುಗಳು ಭಾರೀ ಗಮನಸೆಳೆಯುತ್ತಿವೆ.
ಆರು ವಾರಗಳ ಕಾಲ ಇದ್ದಂತಹ ಒಪಿನಿಯನ್ ಒಂದು ನೈಟ್‌ನಲ್ಲಿ ಚೇಂಜ್ ಆಗ್ಬಿಡುತ್ತಾ; ಕಿಚ್ಚನ ಪ್ರಶ್ನೆಗೆ ಸಂಗೀತಾ ಶಾಕ್!
ಕಿಚ್ಚ ಸುದೀಪ್ ಮಾತಿಗೆ ಉತ್ತರಿಸುತ್ತ ತುಕಾಲಿ ಸಂತು 'ಈ ಮನೆಯಲ್ಲಿ ಅತಿ ಹೆಚ್ಚು ನೋವು ಅನುಭವಿಸಿರುವುದು ಕಾರ್ತಿಕ್, ಅವರಿಗೆ ಅಧ್ಯಕ್ಷ ಸ್ಥಾನ' ಎಂದಿದ್ದಾರೆ. 'ವರ್ತೂರು ಸಂತೋಷ್ ಮಾತನಾಡಿದರೂ ಕೂಡ ಅತ್ತಂತೆ ಇರುತ್ತದೆ. ಇನ್ನು ಪ್ರತಾಪ್ ಯಾವುದೇ ಟೀಮ್ ಸೇರಿಕೊಳ್ಳದೇ ಹೊರಗೇ ಇರಬೇಕೆಂದು ನಿರ್ಧರಿಸಿದ್ದರೂ ಇದ್ದ ಟೀಮ್‌ನಲ್ಲಿ ಅಪಾರ ನೋವು ಅನುಭವಿಸಿ ಈಗ ಇನ್ನೊಂದು ಟೀಮ್‌ಗೆ ಮರಳಿ ಹಾಯಾಗಿದ್ದಾರೆ' ಎನ್ನುವ ಮೂಲಕ ಆ ಮನೆಯಲ್ಲಿ ಇರುವ ಹಲವು ಸ್ಪರ್ಧಿಗಳ ಸ್ಥಿತಿ ಮತ್ತು ಮನಸ್ಥಿತಿ ಬಗ್ಗೆ ಹೇಳಿದಂತಾಗಿದೆ. ಇಂದಿನ ಸಂಚಿಕೆ ಮೂಲಕ ಇನ್ನೊಂದು ಎಲಿಮಿನೇಶನ್ ಆಗಿ ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬರು ಸ್ಪರ್ಧಿ ಕಮ್ಮಿ ಆಗಲಿದ್ದಾರೆ.
ನನ್ನ ಸೊಂಟದ ಸುತ್ತಳತೆ ಮೇಲೆ ಯಾವತ್ತೂ ಕಣ್ಣು ನೆಟ್ಟಿರುತ್ತೆ; ಪ್ರಿಯಾಂಕಾ ಚೋಪ್ರಾ ಹೇಳಿಕೆಗೆ ಬೆರಗಾಯ್ತು ಹಾಲಿವುಡ್ !
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಎಲ್ಲವನ್ನೂ ತಿಳಿಯಬೇಕಾದರೆ, JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ, ವಾರಾಂತ್ಯದ (ಶನಿವಾರ-ಭಾನುವಾರ) ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು.