ಎಷ್ಟು ಹೇಳಿದ್ರೂ ನೀವು ಏನೂ ಮಾಡ್ತಾ ಇಲ್ಲ ಎಂದರೆ ನಿಮಗೆ ಕಣ್ಣಿಲ್ಲ, ಕಿವಿ ಇಲ್ಲ; ಬೃಂದಾವನಕ್ಕೆ ಏನ್ ಕಾಮೆಂಟ್ಸ್ ಗುರೂ!
ಬೃಂದಾವನ ಸೀರಿಯಲ್ ಪ್ರಸಾರ ಶುರುವಾಗುವುದಕ್ಕೂ ಮೊದಲೇ ಪ್ರೋಮೋ ನೋಡಿದವರು ಹೇಳುತ್ತಿದ್ದುದು ಒಂದೇ ಮಾತು. ಅದು, 'ಹೀರೋ ವಯಸ್ಸು ತುಂಬಾ ಕಮ್ಮಿ ಎನಿಸುತ್ತಿದೆ' ಎಂಬ ಅಭಿಪ್ರಾಯ. 'ಆತನ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ, ಆ ಹುಡುಗನನ್ನು ನೋಡಿದರೆ ಆತ ಪಿಯುಸಿ ಸ್ಟೂಡೆಂಟ್ ತರ ಕಾಣಿಸ್ತಾನೆ' ಎಂಬ ಕಾಮೆಂಟ್ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿತ್ತು.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಬೃಂದಾವನ' ಸೀರಿಯಲ್ ಹಲವು ಆಯಾಮಗಳಲ್ಲಿ ವಿಭಿನ್ನವಾಗಿದೆ ಎನ್ನಬಹುದು. ತೆಲುಗು ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಜಾಯಿಂಟ್ ಫ್ಯಾಮಿಲಿ (ಅವಿಭಕ್ತ ಕುಟುಂಬ) ಈ ಧಾರಾವಾಹಿಯಲ್ಲಿ ಕಂಡುಬರುತ್ತಿದೆ. ಕನ್ನಡ ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಅಷ್ಟೊಂದು ಕಲಾವಿದರು ಒಂದೇ ಫ್ರೇಂನಲ್ಲಿ ಕಂಡುಬರುವುದು ತುಂಬಾ ಕಡಿಮೆ ಎನ್ನಬಹುದು. ಇತ್ತೀಚೆಗೆ ಪ್ರಸಾರ ಆರಂಭಿಸಿರುವ ಬೃಂದಾವನ ಸೀರಿಯಲ್ ಈ ಕಾರಣಕ್ಕೆ ತುಂಬಾ ವಿಭಿನ್ನ ಎನ್ನಬಹುದು. ಮತ್ತೊಂದು ಕಾರಣ, ಶುರುವಿನಲ್ಲೇ ನಾಯಕ (ಹೀರೋ) ಬದಲಾವಣೆ.
ಬೃಂದಾವನ ಸೀರಿಯಲ್ ಪ್ರಸಾರ ಶುರುವಾಗುವುದಕ್ಕೂ ಮೊದಲೇ ಪ್ರೋಮೋ ನೋಡಿದವರು ಹೇಳುತ್ತಿದ್ದುದು ಒಂದೇ ಮಾತು. ಅದು, 'ಹೀರೋ ವಯಸ್ಸು ತುಂಬಾ ಕಮ್ಮಿ ಎನಿಸುತ್ತಿದೆ' ಎಂಬ ಅಭಿಪ್ರಾಯ. 'ಆತನ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ, ಆ ಹುಡುಗನನ್ನು ನೋಡಿದರೆ ಆತ ಪಿಯುಸಿ ಸ್ಟೂಡೆಂಟ್ ತರ ಕಾಣಿಸ್ತಾನೆ' ಎಂಬ ಕಾಮೆಂಟ್ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿತ್ತು. ಬಳಿಕ, ಅದೇ ಕಾರಣ ಎಂಬಂತೆ ಹೀರೋ ಬದಲಾವಣೆಯಾಗಿ ಇದೀಗ ಧಾರಾವಾಹಿ ಮದುವೆ ತಯಾರಿ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ. ಮದುವೆ ಮನೆ ಎಂದರೆ ಅದ್ದೂರಿತನ ಅಬ್ಬರ ಜಾಸ್ತಿ. ಅದರಲ್ಲೂ ಈ ಬೃಂದಾವನ ಸೀರಿಯಲ್‌ನಲ್ಲಿ ಜನರು, ಅದ್ದೂರಿತನ ಮತ್ತು ಅಬ್ಬರ ತುಸು ಹೆಚ್ಚೇ ಆಗಿದೆ ಎನ್ನಬಹುದು.
ತುಕಾಲಿ ಸಂತೋಷ್ ಮಾತಿಗೆ ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್; ಭಾರೀ ನೋವು ಅನುಭವಿಸಿದ ಕಾರ್ತಿಕ್ ಮಹೇಶ್!
ಇದೀಗ ಕಲರ್ಸ್ ಕನ್ನಡ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿರುವ ಪ್ರೊಮೋದಲ್ಲಿ 'ಬೃಂದಾವನ ಕಲ್ಯಾಣೋತ್ಸವ' ಎಂಬ ಬರಹ ಬರೆಯಲಾಗಿದೆ. ಜತೆಗೆ, ಆಕಾಶ್ ಮದುವೆಯಲ್ಲಿ ಹೆಜ್ಜೆ ಹಾಕಿದ ಅಕ್ಕತಂಗಿಯರ ಗ್ಯಾಂಗ್ ಎಂದೂ ಟ್ಯಾಗ್ ಲೈನ್ ಕೊಡಲಾಗಿದೆ. ಪ್ರೋಮೋದಲ್ಲಿ ಕಾಣಿಸುತ್ತಿರುವಂತೆ ಅಕ್ಕತಂಗಿಯರು 'ಕುದುರೆ ಏರಿಬಂದ.. ಚೆಲುವ ರಾಜಕುಮಾರ..'ಹಾಡಿಗ ಸಖತ್ ಸ್ಟೆಪ್ಸ್ ಹಾಕುತ್ತಿದ್ದಾರೆ. ಅದ್ದೂರಿ ಸೆಟ್‌ನಲ್ಲಿ ಅಕ್ಕತಂಗಿಯರ ನೃತ್ಯ ಪ್ರದರ್ಶನ ಕಣ್ತುಂಬಿಕೊಳ್ಳುವುದೇ ಒಂದು ಮಹದಾನಂದ ಎಂಬಂತಿದೆ ಪ್ರೊಮೊ. ಇನ್ನು ಸಂಚಿಕೆ ನೋಡಿದರೆ ಕಥೆಯೂ ಅರ್ಥವಾಗಲಿದೆ.
ಆರು ವಾರಗಳ ಕಾಲ ಇದ್ದಂತಹ ಒಪಿನಿಯನ್ ಒಂದು ನೈಟ್‌ನಲ್ಲಿ ಚೇಂಜ್ ಆಗ್ಬಿಡುತ್ತಾ; ಕಿಚ್ಚನ ಪ್ರಶ್ನೆಗೆ ಸಂಗೀತಾ ಶಾಕ್!
ಒಟ್ಟಿನಲ್ಲಿ, ಇತ್ತೀಚೆಗಷ್ಟೇ ಪ್ರಸಾರ ಶುರು ಮಾಡಿಕೊಂಡಿರುವ ಬೃಂದಾವನ ಸೀರಿಯಲ್ ಹೀರೋ ಬದಲಾವಣೆಯಿಂದ ಮೊದಲುಗೊಂಡು ಅದ್ದೂರಿತನ, ಆಡಂಬರಗಳಿಂದ ವಿಭಿನ್ನತೆ ಮೆರೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಸೀರಿಯಲ್ ಟಿಆರ್‌ಪಿ ಯಾವ ಸ್ಥಾನದಲ್ಲಿ ಇರಬಹುದು ಎಂಬ ಕುತೂಹಲ ಈಗಾಗಲೇ ಕಿರುತೆರೆ ಪ್ರೇಕ್ಷಕರಲ್ಲಿ ಮನೆಮಾಡಿದೆ. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.00ಕ್ಕೆ ಈ ಬೃಂದಾವನ ಸೀರಿಯಲ್ ಪ್ರಸಾರವಾಗುತ್ತಿದೆ.