Asianet Suvarna News Asianet Suvarna News

ನ.29ಕ್ಕೆ ನಟಿ ಪೂಜಾ ಗಾಂಧಿ ವಿವಾಹ, ಮುಂಗಾರು ಮಳೆ ಹುಡುಗಿಯ ವರನ್ಯಾರು?

ನಟಿ ಪೂಜಾ ಮದುವೆ ಸುದ್ದಿ ಇಡೀ ಕರ್ನಾಟಕದ ತುಂಬಾ ಗಲ್ಲಿಗಲ್ಲಿಗಳಲ್ಲಿ ಬಿರುಗಾಳಿಯಂತೆ ಬೀಸುವುದು ಗ್ಯಾರಂಟಿ. ಕಾರಣ, ಒಂದು ದಶಕದ ಹಿಂದೆ ನಟಿ ಪೂಜಾ ಗಾಂಧಿ ಕನ್ನಡದಲ್ಲಿ ಬಹುಬೇಡಿಕೆ ನಟಿಯಾಗಿ ಭಾರೀ ಗಮನ ಸೆಳೆದವರು. ಬೇರೆ ಭಾಷೆ ನಟಿಯರು ಕನ್ನಡದಲ್ಲಿ ನಟಿಸಿ, ವೈಸ್ ಡಬ್ಬಿಂಗ್ ಮಾಡಿಸಿಕೊಂಡು ಹೆಸರು ಸಂಪಾದಿಸಿಕೊಳ್ಳುತ್ತಾರೆ. 

Sandalwood actress Pooja Gandhi marriage with bengalurean vijay srb
Author
First Published Nov 27, 2023, 1:16 PM IST

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ವೈರಲ್ ಆಗುತ್ತಿದೆ. ಹುಡುಗ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್ ಎನ್ನಲಾಗಿದ್ದು, 29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ಪೂಜಾ ಗಾಂಧಿ, ಕನ್ನಡವನ್ನು ಕಲಿತು ಭೇಷ್ ಎನಿಸಿಕೊಂಡಿದ್ದಾರೆ. 

ಇದೀಗ, ನಟಿ ಪೂಜಾ ಮದುವೆ ಸುದ್ದಿ ಇಡೀ ಕರ್ನಾಟಕದ ತುಂಬಾ ಗಲ್ಲಿಗಲ್ಲಿಗಳಲ್ಲಿ ಬಿರುಗಾಳಿಯಂತೆ ಬೀಸುವುದು ಗ್ಯಾರಂಟಿ. ಕಾರಣ, ಒಂದು ದಶಕದ ಹಿಂದೆ ನಟಿ ಪೂಜಾ ಗಾಂಧಿ ಕನ್ನಡದಲ್ಲಿ ಬಹುಬೇಡಿಕೆ ನಟಿಯಾಗಿ ಭಾರೀ ಗಮನ ಸೆಳೆದವರು. ಬೇರೆ ಭಾಷೆ ನಟಿಯರು ಕನ್ನಡದಲ್ಲಿ ನಟಿಸಿ, ವೈಸ್ ಡಬ್ಬಿಂಗ್ ಮಾಡಿಸಿಕೊಂಡು ಹೆಸರು ಸಂಪಾದಿಸಿಕೊಳ್ಳುತ್ತಾರೆ. ಆದರೆ ನಟಿ ಪೂಜಾ ಗಾಂಧಿ ಇದಕ್ಕೆ ತ್ದವಿರುದ್ಧ ಎಂಬಂತೆ ತಾವೇ ಸ್ವತಃ ಕನ್ನಡ ಕಲಿತು ತಮ್ಮ ಸಿನಿಮಾಗೆ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಅನ್ನ ಕೊಟ್ಟ ಭಾಷೆಗೆ ಗೌರವ ನೀಡಿ ಅಭಿಮಾನ ಮರೆದು ತಾವೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. 

ಖ್ಯಾತ ನಟಿ ಮೇಲೆ ಅನಾಮಿಕನ ದಾಳಿ, ಹಲ್ಲೆ ಮಾಡಿ ಪರಾರಿಯಾದ ಆರೋಪಿ; ವೈರಲ್ ಆಯ್ತು ಪೋಸ್ಟ್!

ಅವರಿಗೆ ಕನ್ನಡಿಗ ವಿಜಯ್ ಎಂಬವರು ನಮ್ಮ ಕನ್ನಡ ಭಾಷೆ ಕಲಿಯಲು ಸಹಾಯ ಮಾಡಿದವರು, ಅವರು ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಕಂಪನಿ ಓನರ್ ಎನ್ನಲಾಗಿದೆ. ಅವರನ್ನೇ ಈಗ ಪೂಜಾ ಗಾಂಧಿ ಮದುವೆಯಾಗುತ್ತಿದ್ದಾರೆ. ಅವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಪ್ರೇಮಿಗಳಾಗಿದ್ದವರು ಎನ್ನಲಾಗಿದೆ. ಪಂಜಾಬಿ ಮೂಲದ ನಟಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡ ಕಲಿತು ಇದೀಗ ಕನ್ನಡಿಗನನ್ನು ಮದುವೆಯಾಗಿ ಕರ್ನಾಟಕದ ಸೊಸೆಯೇ ಆಗಲಿದ್ದಾರೆ. ಇದು ನಿಜವಾಗಿಯೂ ಕನ್ನಡಿಗರು ಹೆಮ್ಮೆ ಪಡುವ ಸಂಗತಿಯೇ ಆಗಿದೆ ಎನ್ನಬಹುದು.

ಯಾವತ್ತೂ ನಗುನಗುತ್ತಿರು, ಅಮ್ಮನ ಮಾತೇ ನನಗೆ ವೇದವಾಕ್ಯ; ರಶ್ಮಿಕಾ ಮಾತಿಂದ ಕಣ್ಣೀರಾದ್ರು ಸಂದರ್ಶಕಿ!

ಅಂದಹಾಗೆ, ನಟಿ ಪೂಜಾ ಗಾಂಧಿ ಮೂಲತಃ ಬೆಂಗಾಲಿ ಕುಟುಂಬದವರು. ಹುಟ್ಟಿದ್ದು ಉತ್ತರಪ್ರದೇಶದ ಮೀರತ್‌, ಬೆಳೆದಿದ್ದು ಓದಿದ್ಎದು ದೆಹಲಿಯಲ್ಲಿ ಎನ್ನಲಾಗಿದೆ. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಪೂಜಾ ಗಾಂಧಿ, ಇಲ್ಲಿ ಸಕ್ಸಸ್‌ ಪಡೆದುಕೊಂಡು ನೆಲೆ ನಿಂತವರು. ಕನ್ನಡ ಸೇರಿದಂತೆ ಮಲಯಾಳಂ, ಬೆಂಗಾಲಿ ಸಿನಿಮಾರಂಗಗಳಲ್ಲಿ ನಟಿ ಪೂಜಾ ಗಾಂಧಿ ಕೆಲಸ ಮಾಡಿದವರು. ಅವರ ಮೊದಲ ಹೆಸರು ಸಂಜನಾ ಗಾಂಧಿ. ಬೆಂಗಾಲಿ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿ ಬಳಿಕ ಅವರು ಕನ್ನಡದ ಮುಂಗಾರು ಮಳೆಯಲ್ಲಿ ಕಾಣಿಸಿಕೊಂಡವರು. ಮುಂಗಾರು ಮಳೆ ಮೂಲಕ ಇಲ್ಲಿಯೇ ನೆಲೆನಿಂತು, ಬಳಿಕ ಹಲವು ವರ್ಷಗಳ ಕಾಲ ಬೇಡಿಕೆಯಲ್ಲಿದ್ದು ಹತ್ತಾರು ಸಿನಿಮಾಗಳಲ್ಲಿ ನಟಿಸಿದವರು. ಈಗ ಕರ್ನಾಟಕದ ಸೊಸೆ ಆಗಲಿದ್ದಾರೆ. 

Follow Us:
Download App:
  • android
  • ios