ಮತ್ತೆ 'ನಾನು ಫೇಕ್ ಅಲ್ಲ'ವೆಂದ ಭಾಗ್ಯಶ್ರೀ ರಾವ್, ಹೊರಬಂದಾಯ್ತಲ್ಲ ಬಿಡಿ ಮೇಡಮ್ ಎಂದು ಕಾಲೆಳೆದ ನೆಟ್ಟಿಗರು!
ಗುಂಪು ಅಂತ ಬಂದಾಗ, ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು.
ನಟಿ, ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಭಾಗ್ಯಶ್ರೀ ಬಿಗ್‌ಬಾಸ್ ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು? ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು? ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್? ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ ಮಾತಾಡಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು ಕೈಯೆತ್ತಿದರೂ ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ. ಯಾಕೆಂದರೆ ಅವರಿಗೆ ಯಾರಿಗೂ ನಾನು ಟಾಸ್ಕ್ ಮಾಡಬಲ್ಲೆ ಎಂಬ ನಂಬಿಕೆಯೂ ಇರ್ತಿರ್ಲಿಲ್ಲ. ಸಿಕ್ಕಿದ ಅವಕಾಶಗಳಲ್ಲಿ ನಾನು ಖಂಡಿತವಾಗಲೂ ನನ್ನ ಎಫರ್ಟ್ ನೂರಕ್ಕೆ ನೂರು ಹಾಕಿದೀನಿ.
ಟಾಪ್ ಫೈವ್‌ನಲ್ಲಿ ಮೈಕಲ್, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್, ಪ್ರತಾಪ್ ಇರ್ತಾರೆ ಅನ್ಸತ್ತೆ. ಕಾರ್ತಿಕ್‌ಗೆ ಎಲ್ಲ ಅರ್ಹತೆ ಇವೆ. ಅವರು ಓವರ್ ಸ್ಮಾರ್ಟ್‌ನೆಸ್ ತೋರಿಸುವುದು ಕಡಿಮೆ ಮಾಡಿದರೆ ವಿನ್ ಆಗಬಹುದು. ಮುಂದಿನವಾರ ಎಲಿಮಿನೇಟ್ ಆಗಿರುವವರ ಜಾಗದಲ್ಲಿ ನನ್ನ ಪ್ರಕಾರ ನೀತು ಇರುತ್ತಾರೆ.
ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಇಶಾನಿ ಮಾಡಿದ್ದ ತಪ್ಪೇನು, ಹೇಳಿದ ಕೊನೆಯ ಮಾತು ಫುಲ್ ವೈರಲ್!
ಬಿಗ್‌ಬಾಸ್ ಮನೆಯೊಳಗೆ JioCinemaದ ಫನ್ ಫ್ರೈಡೇ ಟಾಸ್ಕ್‌ನಲ್ಲಿ ‘ಕಥಾಸಂಗಮ’ ಟಾಸ್ಕ್‌ನಲ್ಲಿ ನಾನು ಗೆದ್ದಿದ್ದು ಮರೆಯಲಾಗದ ನೆನಪು. ನನಗೆ ಮಾತಾಡಲು ಎರಡು ನಿಮಿಷ ಟೈಮ್ ಇತ್ತು. ಅಲ್ಲಿ ಒಂದು ಅದ್ಭುತ ಕಥೆ ಮಾಡಿದೀನಿ ಅಂತ ಖುಷಿ ಇದೆ. ಜಿಯೊ ಸಿನಿಮಾ ಫನ್ ಫ್ರೈಡೆಯಲ್ಲಿ ಒಗಟು ಬಿಡಿಸಿದ್ದೂ ಒಂದು ಅದ್ಭುತ ನೆನಪು. ‘ಅಟ್ಟದ ಮೇಲೆ ಪುಟ್ಟಲಕ್ಷ್ಮೀ’ ಅಂದ ತಕ್ಷಣ ಬೊಟ್ಟು ಎಂದು ನೆನಪಾಯ್ತು. ಮನೆಯೊಳಗಿನ ಬೊಟ್ಟು ತರಲು ಓಡಿದೆ. ಮಧ್ಯದಲ್ಲಿಯೇ ಏನೋ ನೆನಪಾಯ್ತು. ನನ್ನ ಹಣೆಯಲ್ಲಿನ ಬೊಟ್ಟನ್ನೇ ತೆಗೆದು ಇಟ್ಟುಬಿಟ್ಟೆ. ಎಲ್ಲರೂ ಅಚ್ಚರಿಪಟ್ಟರು. ಅದೂ ಖುಷಿಕೊಟ್ಟಿತು.
ಫೇಕ್ ಪಟ್ಟ ಪಡೆದ ಬಿಗ್ ಬಾಸ್ ಆನೆ ವಿನಯ್ ಗೌಡ, ಸೋಷಿಯಲ್ ಮೀಡಿಯಾ ಸುದ್ದಿ ಭಾರೀ ವೈರಲ್!
ಬಿಗ್‌ಬಾಸ್ ಅಂದ್ರೆ ಬಿಗ್‌ಬಾಸ್ ಅಷ್ಟೆ. ಅಲ್ಲಿನ ಎಲ್ಲವನ್ನೂ ಮಿಸ್ ಮಾಡಿಕೊಳ್ತೀನಿ. ಬೆಳಗಿನ ಸಾಂಗ್, ಪ್ರತಿಕ್ಷಣ ಧರಿಸಿರುತ್ತಿದ್ದ ಮೈಕ್ ಮಿಸ್ ಮಾಡ್ಕೊತೀನಿ. ಬಿಗ್‌ಬಾಸ್ ಧ್ವನಿಯನ್ನಂತೂ ತುಂಬ ಮಿಸ್ ಮಾಡ್ಕೋತೀನಿ' ಎಂದಿದ್ದಾರೆ ಭಾಗ್ಯಶ್ರೀ ರಾವ್. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರದ ಎಪಿಸೋಡ್‌ಗಳನ್ನು ರಾತ್ರಿ 9.00ಕ್ಕೇ ವೀಕ್ಷಿಸಬಹುದು.