ಫೇಕ್ ಪಟ್ಟ ಪಡೆದ ಬಿಗ್ ಬಾಸ್ ಆನೆ ವಿನಯ್ ಗೌಡ, ಸೋಷಿಯಲ್ ಮೀಡಿಯಾ ಸುದ್ದಿ ಭಾರೀ ವೈರಲ್!
ಫೇಕ್ ಸ್ಪರ್ಧಿ ಎಂಬ ಪಟ್ಟ ವಿನಯ್ ಪಾಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆನೆ ಎಂಬ ಪಟ್ಟ ಹೊತ್ತಿರುವ ವಿನಯ್ ಗೌಡ ಅವರನ್ನೀಗ ಫೇಕ್ ಆನೆ ಎನ್ನಬಹುದೇ? ಗೊತ್ತಿಲ್ಲ. ಏಕೆಂದರೆ, ಸೋಷಿಯಲ್ ಮೀಡಿಯಾಗಳಲ್ಲಿ ಯಾವಾಗ ಯಾರನ್ನು ಏನೆಂದು ಕರೆಯುತ್ತಾರೆ, ಯಾವಾಗ ಯಾರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಾರೆ, ಯಾವಾಗ ಯಾರನ್ನು ಬೀಳಿಸುತ್ತಾರೆ ಎಂಬುದನ್ನು ಹೇಳುವುದು ಕಷ್ಟ.
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 10' ಗೇಮ್ ಶೋ ನಡೆಯುತ್ತಿರುವದು ಗೊತ್ತೇ ಇದೆ. ಈಗಾಗಲೇ ಸ್ಪರ್ಧಿಗಳಾದ ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ರಕ್ಷಕ್ ಬುಲೆಟ್, ಇಶಾನಿ ಅವರುಗಳು ಅಲ್ಲಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಗೆಲುವಿಗಾಗಿ ಆಡುತ್ತಿದ್ದಾರೆ. ಅವರಲ್ಲಿ ಕೆಲವರು ಸ್ಟ್ರಾಂಗ್ ಕಂಟೆಸ್ಟಂಟ್ಸ್ ಎನಿಸಿದ್ದರೆ ಹಲವರು ವೀಕ್ ಕಂಟೆಸ್ಟಂಟ್ಸ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಗಾಸಿಪ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ.
ಅದೇನು ಎಂದರೆ, ಬಿಗ್ ಬಾಸ್ ಮನೆಯಲ್ಲಿ 'ಫೇಕ್ ಸ್ಪರ್ಧಿ' ಯಾರು?' ಎಂಬ ಸಂಗತಿ. ಖಾಸಗಿ ಯೂಟ್ಯೂಬ್ ಒಂದರ ಸರ್ವೇ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಇರುವ ಫೇಕ್ ಸ್ಪರ್ಧಿ ಯಾರು ಎಂಬ ವೋಟಿಂಗ್‌ನಲ್ಲಿ ಗೆದ್ದಿದ್ದು ವಿನಯ್ ಗೌಡ ಎನ್ನಲಾಗಿದೆ. ಅದನ್ನು ಗೆಲವು ಎನ್ನವುದು ತಪ್ಪು, ಸೋಲು ಎನ್ನಬೇಕು. ಫೇಕ್ ಕಂಟೆಸ್ಟಂಟ್ ವೋಟಿಂಗ್ ವಿನಯ್ ಪರವಾಗಿ ಶೇ 50% ಹೆಚ್ಚು ಬಂದಿದೆ. ಉಳಿದಂತೆ, ಸ್ನೇಹಿತ್, ತುಕಾಲಿ ಸಂತು, ನಮ್ರತಾ ಪರವಾಗಿ ಇತ್ತು. ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಕೂಡ ಆ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದರೂ ಕೂಡ ಅವರನ್ನೀಗ ಗಣನೆ ಹೊರಗೆ ಇಡಬೇಕು ಅಷ್ಟೇ.
ಧೂಮ್ ಸರಣಿ ಚಿತ್ರಗಳ ನಿರ್ದೇಶಕ ಸಂಜಯ್ ಗಧ್ವಿ ತೀವ್ರ ಹೃದಯಾಘಾತದಿಂದ ನಿಧನ
ಫೇಕ್ ಸ್ಪರ್ಧಿ ಎಂಬ ಪಟ್ಟ ವಿನಯ್ ಪಾಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆನೆ ಎಂಬ ಪಟ್ಟ ಹೊತ್ತಿರುವ ವಿನಯ್ ಗೌಡ ಅವರನ್ನೀಗ ಫೇಕ್ ಆನೆ ಎನ್ನಬಹುದೇ? ಗೊತ್ತಿಲ್ಲ. ಏಕೆಂದರೆ, ಸೋಷಿಯಲ್ ಮೀಡಿಯಾಗಳಲ್ಲಿ ಯಾವಾಗ ಯಾರನ್ನು ಏನೆಂದು ಕರೆಯುತ್ತಾರೆ, ಯಾವಾಗ ಯಾರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಾರೆ, ಯಾವಾಗ ಯಾರನ್ನು ಬೀಳಿಸುತ್ತಾರೆ, ಹೇಗೆ ಟ್ರೋಲ್ ಯಾವಾಗ ತುಳಿಯುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಹೀಗಾಗಿ ಸದ್ಯದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಗಾಸಿಪ್ ಇದು ಎನ್ನಬಹುದು. ನಾಳೆ ಇನ್ನೇನೋ, ಇನ್ಯಾರೋ ಗೊತ್ತಿಲ್ಲ!
ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಇಶಾನಿ ಮಾಡಿದ್ದ ತಪ್ಪೇನು, ಹೇಳಿದ ಕೊನೆಯ ಮಾತು ಫುಲ್ ವೈರಲ್!
ಒಟ್ಟಿನಲ್ಲಿ, ಬಿಗ್ ಬಾಸ್ ಹೋಸ್ಟ್ ಸುದೀಪ್ ಹೇಳಿರುವಂತೆ ಇಂದು, 19 ನವೆಂಬರ್ 2023ರಂದು ಇನ್ನೊಂದು ಎಲಿಮಿನೇಶನ್ ನಡೆಯಲಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಮನೆಯಿಂದ ಇನ್ನೊಬ್ಬರು ಸ್ಪರ್ಧಿ ಹೊರನಡೆಯಲಿದ್ದಾರೆ. ಭಾಗ್ಯಶ್ರೀಯಾ, ನೀತು ಅಥವಾ ಸ್ನೇಹಿತ್, ಯಾರದು ಎಂಬುದು ಸದ್ಯಕ್ಕೆ ಸಸ್ಪೆನ್ಸ್! ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಬಿಗ ಬಾಸ್ ಸಂಚಿಕೆ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ಪ್ರಸಾರವಾಗುತ್ತಿದೆ. ನಿರಂತರ 24 ಗಂಟೆ ಲೈವ್ ಅಪ್ಡೇಟ್‌ಗಾಗಿ 'ಜಿಯೋ ಸಿನಿಮಾಸ್' ನೋಡಬಹುದು.