Asianet Suvarna News Asianet Suvarna News

ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಇಶಾನಿ ಮಾಡಿದ್ದ ತಪ್ಪೇನು, ಹೇಳಿದ ಕೊನೆಯ ಮಾತು ಫುಲ್ ವೈರಲ್!

ಇಶಾನಿ ಸ್ವತಃ ತಾವೇ ಎದ್ದು ನಿಂತುಕೊಂಡರು. ಕಿಚ್ಚ, ‘ನಿಜ. ನಿಮ್ಮ ಪಯಣ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್ ಇಶಾನಿ ಅವರೇ' ಎಂದು ಹೇಳಿದರು ಹೋಸ್ಟ್ ಕಿಚ್ಚ ಸುದೀಪ್. ನಾಳೆಯ ಎಪಿಸೋಡ್‌ನಲ್ಲಿ ಇನ್ನೊಬ್ಬರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ನಾಳೆಯ ಎಪಿಸೋಡ್‌ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ.

Rapper Eshani talk after elimination at Bigg Boss Kannada season 10 srb
Author
First Published Nov 19, 2023, 1:14 PM IST

ಕೊನೆಗೂ ಬಿಗ್‌ಬಾಸ್‌ ಮನೆಯಲ್ಲಿ ಪಾಪ್ ಹಾಡುಗಾತಿ ಇಶಾನಿ ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್‌ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್ ಎಂದಿದ್ದರು ಕಿಚ್ಚ ಸುದೀಪ್. ಅದರಂತೆ, ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು. ಶನಿವಾರದ ಎಪಿಸೋಡ್ ಕೊನೆಯಲ್ಲಿ, ಕಿಚ್ಚ, ‘ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. 

ಇಶಾನಿ ಸ್ವತಃ ತಾವೇ ಎದ್ದು ನಿಂತುಕೊಂಡರು. ಕಿಚ್ಚ, ‘ನಿಜ. ನಿಮ್ಮ ಪಯಣ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್ ಇಶಾನಿ ಅವರೇ' ಎಂದು ಹೇಳಿದರು ಹೋಸ್ಟ್ ಕಿಚ್ಚ ಸುದೀಪ್. ನಾಳೆಯ ಎಪಿಸೋಡ್‌ನಲ್ಲಿ ಇನ್ನೊಬ್ಬರು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ನಾಳೆಯ ಎಪಿಸೋಡ್‌ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಹಾಗಿದ್ದರೆ ಇಂದು ನಡೆಯುವ ಎಲಿಮಿನೇಶನ್‌ನಲ್ಲಿ ಹೊರಹೋಗುವ ಸ್ಪರ್ಧಿ ಯಾರಿರಬಹುದು? ಭಾಗ್ಯಶ್ರೀಯಾ, ನೀತುನಾ? ಅಥವಾ ಇನ್ಯಾರು? ಉತ್ತರಕ್ಕೆ ಇಂದಿನ 'ಸೂಪರ್ ಸಂಡೆ ವಿತ್ ಸುದೀಪ' ನೋಡಬೇಕಷ್ಟೇ.

 

ಬಿಗ್ ಬಾಸ್ ಮನೆಯಿಂದ ಹೊರಬೀಳುವ ಮೊದಲು ಕೊನೆಯದಾಗಿ ಇಶಾನಿ ಹೇಳಿದ್ದೇನು ಗೊತ್ತೇ? ‘ನಾನು ಇನ್ನಷ್ಟು ಎಫರ್ಟ್‌ ಹಾಕಬೇಕಾಗಿತ್ತು, ಆಗಲಿಲ್ಲ. ಆದರೆ, ನಾನು ಈ ಬಿಗ್ ಬಾಸ್ ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್‌ ದಿ ಬೆಸ್ಟ್’ಎಂದು ಹೇಳಿದರು. ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ, ಭಾನುವಾರದ 'ಸೂಪರ್ ಸಂಡೇ ವಿತ್ ಸುದೀಪ' ಮಾತ್ರ ಬಾಕಿಯಿದೆ. 

ಇಂದು ಇನ್ನೊಬ್ಬರು ಸ್ಪರ್ಧಿ ಹೊರಹೋಗುವುದಂತೂ ಪಕ್ಕಾ. ಆದರೆ ಯಾರು? ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರದ ಎಪಿಸೋಡ್‌ಗಳನ್ನು ರಾತ್ರಿ 9.00ಕ್ಕೇ ವೀಕ್ಷಿಸಬಹುದು.

Follow Us:
Download App:
  • android
  • ios