ಈ ಬಾರಿಯ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದ್ದು, ಶೋ ಡಲ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಲಿಮಿನೇಟ್ ಆದ ನಟಿ ಕಾವ್ಯಾ ಗೌಡ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೀಕ್ಷಕರ ಕೊರತೆಗೆ ನಿಖರ ಕಾರಣ ತಿಳಿದಿಲ್ಲ ಎಂದಿದ್ದಾರೆ. ವೀಕ್ಷಕರನ್ನು ಸೆಳೆಯಲು ಶೋನಲ್ಲಿ ಹೊಸ ತಂತ್ರಗಳನ್ನು ಹಾಗೂ ಸ್ಪರ್ಧಿಗಳನ್ನು ಪರಿಚಯಿಸಲಾಗುತ್ತಿದೆ.

ಎಲ್ಲಾ ಭಾಷೆಗಳಲ್ಲಿಯೂ ಅತಿ ದೊಡ್ಡ ಷೋ ಎನ್ನಿಸಿಕೊಂಡಿರುವ ಬಿಗ್​ಬಾಸ್, ಈ ಬಾರಿ ಕನ್ನಡದಲ್ಲಿ ಜನರನ್ನು ಅಷ್ಟು ಸೆಳೆಯುತ್ತಿಲ್ಲ. ತುಂಬಾ ಡಲ್​ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಿಗ್​ಬಾಸ್​ ರಿಯಾಲಿಟಿ ಷೋ ಮೇಲೆ ವೀಕ್ಷಕರು ಯಾಕೋ ಆಸಕ್ತಿ ತೋರುವಂತೆ ಕಾಣಿಸುತ್ತಿಲ್ಲ. ಇದನ್ನು ನೋಡಲು ಈ ಹಿಂದೆ ಇದ್ದಷ್ಟು ಕ್ರೇಜ್​ ಈ ಬಾರಿ ಇಲ್ಲ. ಇದು ಬಹುತೇಕ ಎಲ್ಲಾ ಭಾಷೆಗಳ ಬಿಗ್​ಬಾಸ್​ ರಿಯಾಲಿಟಿ ಷೋಗಳ ಕಥೆಯಾದಂತಿದೆ. ಅದರಲ್ಲಿಯೂ ಕನ್ನಡದ ಬಿಗ್​ಬಾಸ್​ 12ನೇ ಸೀಸನ್​ ಸೃಷ್ಟಿಸಿದಷ್ಟು ಹವಾ 13ನೇ ಸೀಸನ್​ ಸೃಷ್ಟಿಸುತ್ತಿಲ್ಲ ಎನ್ನುವುದಕ್ಕೆ ಪ್ರೊಮೋ ಬಿಡುಗಡೆಯಾದಾಗಲೆಲ್ಲಾ ನೆಟ್ಟಿಗರು ಹಾಕುತ್ತಿರುವ ಕಮೆಂಟ್ಸ್​ ಸಾಕ್ಷಿಯಾಗಿದೆ. ಜಗಳ, ಗಲಾಟೆ, ಗದ್ದಲ, ಕಚ್ಚಾಟ, ರೊಮಾನ್ಸ್​ ಎಷ್ಟೂ ಎಂದು ನೋಡಲು ಸಾಧ್ಯ ಗುರೂ. ಏನೂ ಟೇಸ್ಟೇ ಇಲ್ಲ ಎನ್ನುವಂಥ ಕಮೆಂಟ್ಸ್​ಗಳು ಬರುತ್ತಿವೆ..

ಇದೇ ಕಾರಣಕ್ಕೆ ಬಿಗ್​ಬಾಸ್​​ಗೆ ವೀಕ್ಷಕರನ್ನು ಹಿಡಿದುಕೊಳ್ಳಲು ಹೊಸ ಹೊಸ ಸಾಹಸಗಳಿಗೆ ಕೈಹಾಕಲೇಬೇಕಾದ ಅನಿವಾರ್ಯತೆ ಉಂಟಾಗುವುದು ಸಹಜ. ಈ ಹಿಂದೆ ಹಿಂದಿನ ಬಿಗ್​ಬಾಸ್​ನಲ್ಲಿ ಕಾಂಟ್ರವರ್ಸಿ ಕ್ರಿಯೇಟ್​ ಮಾಡಿ ಜನರು ಅದನ್ನು ನೋಡುವ ಹಾಗೆ ಮಾಡಲಾಗಿತ್ತು. ಆದರೆ, ಇವೆಲ್ಲವೂ ಸ್ಕ್ರಿಪ್ಟೆಡ್​ ಕಾಂಟ್ರವರ್ಸಿಗಳು ಎಂದು ವೀಕ್ಷಕರಿಗೂ ಈಗೀಗ ಅರ್ಥವಾಗುತ್ತಿರುವ ಕಾರಣ, ಬಹುತೇಕ ಭಾಷೆಗಳ ರಿಯಾಲಿಟಿ ಷೋಗಳನ್ನು ನೋಡಲು ಮುಂದೆ ಬರುತ್ತಿಲ್ಲ ಎಂದೇ ಹೇಳಲಾಗುತ್ತಿದೆ. ಇದೇ ಪ್ರಶ್ನೆಯನ್ನು ಇದೀಗ ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿರುವ ನಟಿ ಕಾವ್ಯಾ ಗೌಡ ಅವರಿಗೆ ಕೇಳಲಾಗಿದೆ. ಈ ಸಲದ ಬಿಗ್​ಬಾಸ್​ ಏಕಿಷ್ಟು ಡಲ್​ ಎನ್ನುವ ಪ್ರಶ್ನೆ ಕೇಳಲಾಗಿದೆ.

ಕಾವ್ಯಾ ಗೌಡ ಹೇಳಿದ್ದೇನು?

ಬಾಸ್​ ಟಿವಿ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ನಟಿ, ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸುದೀಪ್​ ಸರ್​ ಕೂಡ ಒಂದೆರಡು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ನಮಗೂ ಬೇಸರವಾಗಿತ್ತು. ಆದರೆ ಕಾರಣ ನನಗೂ ತಿಳಿಯುತ್ತಿಲ್ಲ. ಅಷ್ಟಕ್ಕೂ ನಾನು ಈಗ ತಾನೇ ಹೊರಕ್ಕೆ ಬಂದಿದ್ದೇನೆ. ಯಾವ ಎಪಿಸೋಡ್​ಗಳನ್ನೂ ನೋಡಲಿಲ್ಲ. ಆದ್ದರಿಂದ ಎಲ್ಲಿ ಕೊರತೆಯಾಗಿದೆ ಎಂದು ಹೇಳುವುದು ಕಷ್ಟ ಎಂದಿದ್ದಾರೆ ನಟಿ ಕಾವ್ಯಾ ಗೌಡ (Bigg Boss Kavya Gowda). ಸ್ಪರ್ಧಿಗಳು ಸಿಕ್ಕಾಪಟ್ಟೆ ಎಂಟರ್​ಟೈನ್​ ಮಾಡ್ತೀವಿ, ಗಲಾಟೆನೂ ಇದೆ. ಎಲ್ಲವೂ ಇದೆ. ಆದರೆ ಯಾಕೆ ಜನರ ಗಮನ ಸೆಳೆಯುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ. ನಾನೇನಾದ್ರೂ ಎಪಿಸೋಡ್​ಗಳನ್ನು ನೋಡಿದ್ದರೆ ಹೇಳಬಹುದಿತ್ತು ಎಂದಿದ್ದಾರೆ ಕಾವ್ಯಾ.

ಕಳೆದ ಬಾರಿ ಗಿಲ್ಲಿ, ರಕ್ಷಿತಾ ಹವಾ

ಅಷ್ಟಕ್ಕೂ ಕಳೆದ ಸೀಸನ್​ನಲ್ಲಿ ಗಿಲ್ಲಿ ನಟನ ಹವಾ ಜೋರಾಗಿತ್ತು. ಗಿಲ್ಲಿ ಮತ್ತು ಕಾವ್ಯಾ ಜೋಡಿ ಸಕತ್​ ಟ್ರೆಂಡಿಂಗ್​ನಲ್ಲಿ ಇತ್ತು. ಗದ್ದಲ ಗಲಾಟೆಯಿಂದಲೇ ಒಂದಷ್ಟು ಮಂದಿ ಫೇಮಸ್​ ಆಗಿದ್ರು. ರಕ್ಷಿತಾ ಶೆಟ್ಟಿ ತಮ್ಮ ಮಾತಿನಿಂದ ಎಲ್ಲರನ್ನೂ ಮೋಡಿ ಮಾಡಿದ್ದರು. ಈ ಬಾರಿ ಗದ್ದಲ, ಗಲಾಟೆಗೆ ಏನೂ ಕೊರತೆ ಇಲ್ಲ. ಆದರೂ ಈ ಷೋ ಬಗ್ಗೆ ಜನರು ಇಂಟರೆಸ್ಟ್​ ಕಳೆದುಕೊಳ್ಳುತ್ತಿರುವುದು ಸ್ಪಷ್ಟಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಿಯೂ ಇದರ ಬಗ್ಗೆ ಹಿಂದಿನಷ್ಟು ಚರ್ಚೆ ಆಗ್ತಿರೋದು ಬಹಳ ಕಡಿಮೆಯೇ. ಅಚ್ಚರಿ ಎಂದರೆ ಎಲಿಮಿನೇಟ್​ ಆಗಿ ಹೊರಕ್ಕೆ ಬಂದರೂ ಅವರ ಬಗ್ಗೆ ಕೂಡ ಹಿಂದಿನಷ್ಟು ಚರ್ಚೆ ಆಗುತ್ತಿಲ್ಲ. ಅಲ್ಲಿಗೆ ಬಿಗ್​ಬಾಸ್ ತನ್ನ ಹಿಂದಿನ ಕ್ರೇಜ್​ ಕಳೆದುಕೊಳ್ಳುತ್ತಿದೆ ಎಂದೇ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಈಗ ಬಹುಮಾನ ಘೋಷಣೆ ಮಾಡಲಾಗಿದೆ. ಅನಾರೋಗ್ಯದಿಂದ ಬಿಗ್​ಬಾಸ್​ಗೆ ಹೋಗದಿದ್ದ ಕುಮಾರಿಯಿಂದಾದರೂ ಒಂದಷ್ಟು ವ್ಯೂವ್ಸ್​ ಬರಬಹುದು ಎಂದು ಆಕೆಯನ್ನೂ ಕಳುಹಿಸಲಾಗಿದೆ. ಮುಂದೆ ಏನಾಗುತ್ತೋ ನೋಡಬೇಕಿದೆ.