ಬಿಗ್‌ಬಾಸ್ 13ರಲ್ಲಿ ಸೌಂದರ್ಯ ಶೆಟ್ಟಿ ಕ್ಯಾಪ್ಟನ್ಸಿ, ಬೆಸ್ಟ್ ಎಂಟರ್‌ಟೈನರ್ ಮತ್ತು ಕಿಚ್ಚನ ಚಪ್ಪಾಳೆ ಪಡೆದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದೇ ವೇಳೆ 'ಊಸರವಳ್ಳಿ' ಪದದ ಅರ್ಥ ತಿಳಿಯದೆ ಅವರು ಕೇಳಿದ ವಿಚಿತ್ರ ಪ್ರಶ್ನೆ ವೀಕ್ಷಕರ ನಗುವಿಗೆ ಕಾರಣವಾಗಿದೆ. ಮಸ್ಕಟ್‌ನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಬೆಳೆದ ಇವರು ಸದ್ಯ ಬಿಗ್‌ಬಾಸ್ ಮನೆಯಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ.

ಬಿಗ್​ಬಾಸ್​ 13 (Bigg Boss 13) ಸೌಂದರ್ಯ ಶೆಟ್ಟಿ ಸದ್ಯ ಹವಾ ಸೃಷ್ಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಇವರು, ಡಬಲ್​ ಅಲ್ಲ, ತ್ರಿಬಲ್​ ಧಮಾಕಾ ಮಾಡಿದ್ದಾರೆ. ಬಿಗ್​ಬಾಸ್​​ ಇತಿಹಾಸದಲ್ಲಿಯೇ ಇದೊಂದು ದಾಖಲೆ ಎನ್ನಲಾಗುತ್ತಿದೆ. ‘ಶೆಟ್ಟಿ ಡಾನ್‌’ ಎಂದೇ ಬಿರುದು ಪಡೆದುಕೊಂಡಿರುವ ಸೌಂದರ್ಯ ಶೆಟ್ಟಿ, ಒಂದೇ ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿ ಅವರು ದಿ ಬೆಸ್ಟ್‌ ಎಂಟರ್‌ಟೈನರ್‌ ಆಗಿ ವೀಕ್ಷಕರ ಮನಸ್ಸು ಗೆದ್ದರು, ಉತ್ತಮ ಪದಕ ಪಡೆದರು ಜೊತೆಗೆ ಟಾಸ್ಕ್‌ ಗೆದ್ದು 7 ನೇವಾರದ ಕ್ಯಾಪ್ಟನ್‌ ಆಗಿದ್ದಾರೆ. ಎಷ್ಷೇ ಅಲ್ಲದೆ “ಬ್ಲಾಕ್‌ ಬಾಸ್ಟರ್‌ ಎಂಟರ್‌ಟೈನರ್‌ ಆಫ್‌ ದಿ ವೀಕ್‌ ಈ ವಾರ ಎರಡನೇ ಕಿಚ್ಚನ ಚಪ್ಪಾಳೆ ಸೌಂದರ್ಯ ಶೆಟ್ಟಿ ಅವರೇ ನಿಮಗೆ” ಎಂದು ಕಿಚ್ಚ ಸುದೀಪ್‌ ಅವರ ಕಡೆಯಿಂದ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದಾರೆ! ಈ ರೀತಿ ಒಂದೇ ಬಾರಿ ಮೂರು ಮೂರು ಅವಾರ್ಡ್​ ಪಡೆದುಕೊಂಡಿರುವ ಸೌಂದರ್ಯ ಬಿಗ್​ಬಾಸ್​​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹೀಗೆ ಆಗ್ತಿರೋದು ಇದೇ ಮೊದಲು ಎನ್ನಲಾಗುತ್ತಿದೆ.

ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೊಮೋ ಒಂದನ್ನು ಶೇರ್​ ಮಾಡಿಕೊಂಡಿದೆ. ಅದರಲ್ಲಿ ಒಂದು ಬೋರ್ಡ್​ ಸೌಂದರ್ಯ ಶೆಟ್ಟಿ ಕೈಗೆ ನೀಡಲಾಗಿದೆ. ಬಹುಶಃ ಈಕೆ ಊಸರವಳ್ಳಿ ಎಂದು ಯಾರೋ ಹೇಳಿರಬೇಕು. ಅಥವಾ ಬಿಗ್​ಬಾಸ್​ನಲ್ಲಿ ಊಸರವಳ್ಳಿ ಯಾರು ಎಂದು ಅವರನ್ನು ಕೇಳಿರಬಹುದು. ಅದಕ್ಕಾಗಿ 'ಊಸರವಳ್ಳಿ' ಹೆಸರು ಇರುವ ಬೋರ್ಡ್​ ಒಂದನ್ನು ಸೌಂದರ್ಯ ಶೆಟ್ಟಿ ಅವರ ಕೈಗೆ ನೀಡಲಾಗಿದೆ.

ಊಸರವಳ್ಳಿ ಅಂದ್ರೆ ಹೂಂ* ಬಿಡೋದಾ?

ಆದರೆ, ಊಸರವಳ್ಳಿಯ ಅರ್ಥ ಏನೆಂದು ತಿಳಿಯದೇ ಸೌಂದರ್ಯ ಶೆಟ್ಟಿ ಚಿಂತಿತರಾಗಿದ್ದಾರೆ. ಬಳಿಕ ಅವರು 'ಬಿಗ್​ಬಾಸ್... ನನಗೆ ಊಸರವಳ್ಳಿಯ ಅರ್ಥ ಗೊತ್ತಿಲ್ಲ. ಅಂದರೆ ಏನು, ಹೂಂ*ಸು ಬಿಡೋದಾ ಎಂದು ಪ್ರಶ್ನಿಸಿದ್ದಾರೆ. ಒಂದು ಕ್ಷಣ ಮೌನವಾದ ಬಿಗ್​ಬಾಸ್​ ಬಳಿಕ ಊಸರವಳ್ಳಿ ಎಂದರೆ 'Chameleon' ಎಂದು ಹೇಳಿದ್ದಾರೆ. ಬಹುಶಃ ಸೌಂದರ್ಯ ಅವರಿಗೆ ಗೋಸುಂಬೆ ಎಂದರೆ ಅರ್ಥವಾಗ್ತಿತ್ತೋ ಏನೋ, ಅದೂ ಗೊತ್ತಿಲ್ಲ. ಆದರೆ ಊಸರವಳ್ಳಿ ಶಬ್ದಕ್ಕೆ ಹೊಸ ಅರ್ಥ ಕಲ್ಪಿಸಿರೋದು ನೋಡಿ ಕಮೆಂಟ್​ಗಳಲ್ಲಿ ನೆಟ್ಟಿಗರು ಬಿದ್ದೂ ಬಿದ್ದೂ ನಗ್ತಿದ್ದಾರೆ.

ನಟಿಯ ಹಿನ್ನೆಲೆ ಏನು?

ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್​ಬಾಸ್​ನಲ್ಲಿ ಹೀಗೆ ಇಂಟ್ರಡ್ಯೂಸ್​ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್‌ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ’’ ಎಂದಿದ್ದರು. ‘’ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್‌ ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್‌ ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ’’ ಎಂದಿದ್ದರು ಸೌಂದರ್ಯ ಶೆಟ್ಟಿ. ‘’ನಾನು ಅನಿಸಿದ್ದನ್ನ ನೇರವಾಗಿ ಹೇಳಿಬಿಡ್ತೀನಿ. ಮೈಂಡ್‌ನಿಂದ ಆಡೋಕೆ ಇಳಿದರೆ, ಎಲ್ಲರನ್ನ ಖಂಡಿತ ಮ್ಯೂನಿಪುಲೇಟ್ ಮಾಡ್ತೀನಿ. ನಾನು ಇದ್ದ ‘ಸ್ಪ್ಲಿಟ್ಸ್ ವಿಲ್ಲಾ ಸೀಸನ್ 16’ ಬ್ಲಾಕ್ ಬಸ್ಟರ್ ಆಯ್ತು. ಈಗ ಕರ್ನಾಟಕದಲ್ಲೂ ನನಗೆ ಜನರ ಪ್ರೀತಿ ಬೇಕಿದೆ’’ ಅಂತಂದಿದ್ದಾರೆ ಸೌಂದರ್ಯ ಶೆಟ್ಟಿ.