ಬಿಗ್ ಬಾಸ್ ಮನೆಯಲ್ಲಿ  ನನ್ನ ನೀನು ಗೆಲ್ಲಲಾರೆ ಟಾಸ್ಕ್ ಗೆ ಕೊನೆ ಬಿದ್ದಿದೆ. ಅತಿ  ಹೆಚ್ಚು ಅಂಕ ಗಳಿಸಿಕೊಂಡ  ವಾಸುಕಿ   ವೈಭವ್ ಮತ್ತು ಕುರಿ ಪ್ರತಾಪ್ ಮುಂದಿನ ವಾರದ ನಾಮಿನೇಶನ್ ಬಲೆಯಿಂದ ಬಚಾವಾಗಿದ್ದಾರೆ.

ಕ್ಯಾಪ್ಟನ್ ಪ್ರಿಯಾಂಕಾ ಟಾಸ್ಕ್ ಫರ್ಮಾಮೆನ್ಸ್ ಆಧಾರಗಳನ್ನು ನೀಡಿ ವಾಸುಕಿ ವೈಭವ್ ಅವರಿಗೆ ಅತ್ಯುತ್ತಮ ನೀಡಿದ್ದಾರೆ.  ಚಂದನ್ ಆಚಾರ್,  ಕಿಶನ್ ಮತ್ತು ಭೂಮಿ ಮುಂದಿನ ವಾರದ ಕ್ಯಾಪ್ಟನ್ಸಿ ಸ್ಥಾನಕ್ಕೆ ಸ್ಪರ್ಧೆ ಮಾಡಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ನನ್ನ ನೀನು ಗೆಲ್ಲಲಾರೆಯಲ್ಲಿ ಶೂನ್ಯ ಸಂಪಾದನೆ ಮಾಡಿದ ಅಂದರೆ ಶೂನ್ಯ ಅಂಕ ಸಂಪಾದಿಸಿದ ಕಿಶನ್ ಕಳಪೆ ಬೋರ್ಡ್ ಕುತ್ತಿಗೆಗೆ ಹಾಕಿಸಿಕೊಂಡರು. ಪ್ರಿಯಾಂಕಾ ಕಿಶನ್ ಅವರನ್ನು ಕಳಪೆ ಎಂದು ಘೋಷಣೆ ಮಾಡಿದಾಗ ಕಿಶನ್ ನಾನು ಟಾಸ್ಕ್ ನಲ್ಲಿ ಚೆನ್ನಾಗಿ ಮಾಡಿದ್ದೇನೆ ಆದರೂ ಕಳಪೆ ಎಂದು ವಾದ ಮುಂದಿಟ್ಟರು.

ಕೊಳದಲ್ಲಿ ಮಿಂದೆದ್ದ ಕಿಶನ್-ದೀಪಿಕಾ; ಮನೆಯವರೆಲ್ಲ ಕಂಗಾಲು

ಇದೆಲ್ಲದರ ನಡುವೆ ಮನೆಗೆ ಚಂದನ್ ಆಚಾರ್ ಅವರ ತಾಯಿ ಬಂದಿದ್ದರು. ನೀನು ಚೆನ್ನಾಗಿ ಆಡುತ್ತಿದ್ದೀಯಾ, ಹಾಗೆ ಆಡು  ಕೋಪ ಕಡಿಮೆ ಮಾಡಿಕೊ ಎಂದು ಹೇಳಿ ಹೊರಟರು. 

ಬಿಗ್ ಬಾಸ್ ಈ ನಡುವೆ ವಾಸುಕಿ ವೈಭವ್ ಅವರನ್ನು ಕನ್ ಫೆಶನ್ ರೂಂಗೆ ಕರೆದು ಶಾಕಿಂಗ್ ಸುದ್ದಿಯೊಂದನ್ನು ನೀಡಿದರು. ವಾಸುಕಿ ನಿಮ್ಮ ದೊಡ್ಡಪ್ಪ ತೀರಿಕೊಂಡಿದ್ದಾರೆ ಎಂಬ ಸುದ್ದಿ ನೀಡಿದರು. ಈ ವೇಳೆ ಗದ್ಗದಿತರಾದ ವಾಸುಕಿ ನಾನು ಹೋಗಬೇಕು ಎಂದರು. ಆದರೆ ಅವರ ಅಂತ್ಯಕ್ರಿಯೆ ಮುಗಿದಿದೆ ಎಂದು ತಿಳಿಸಿದರು. ಸಮಾಧಾನ ಪಡಿಸಲು ಶೈನ್ ಅವರನ್ನು ಕರೆಸಲಾಯಿತು.