- Home
- Entertainment
- TV Talk
- ಬರೋ ಸೊಸೆ ನಿಮ್ ಬುರುಡೆ ಒಡೆಯುತ್ತಾಳೆ: ಆರ್ಯವರ್ಧನ್ ಗುರೂಜಿ ಮಾತಿಗೆ ಹುಲಿಕಲ್ ನಟರಾಜ್ ತರಾಟೆ
ಬರೋ ಸೊಸೆ ನಿಮ್ ಬುರುಡೆ ಒಡೆಯುತ್ತಾಳೆ: ಆರ್ಯವರ್ಧನ್ ಗುರೂಜಿ ಮಾತಿಗೆ ಹುಲಿಕಲ್ ನಟರಾಜ್ ತರಾಟೆ
Bigg Boss ಕನ್ನಡ ಶೋನಲ್ಲಿ ಭಾಗವಹಿಸಿದ್ದ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಟಿವಿ ಮಾಧ್ಯಮದಲ್ಲಿ ಭವಿಷ್ಯ ಹೇಳುತ್ತಾರೆ. ಆರ್ಯವರ್ಧನ್ ಗುರೂಜಿ, ಮಹಿಳೆಯೋರ್ವರ ಮಗನ ಜೊತೆ ಮಾತನಾಡಿ, ಬರೋ ಸೊಸೆ ಏನು ಮಾಡುತ್ತಾಳೆ ಎಂದು ಹೇಳಿದ್ದರು. ಇದನ್ನು ನೋಡಿ ಹುಲಿಕಲ್ ನಟರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಆರ್ಯವರ್ಧನ್ ಮಾತಿಗೆ ವಿರೋಧ
ಟಿವಿ ಮಾಧ್ಯಮಕ್ಕೆ ಕೆಲವರು ಫೋನ್ ಮಾಡಿ ಮಾತನಾಡುತ್ತಾರೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಆಗ ಆರ್ಯವರ್ಧನ್ ಗುರೂಜಿ ಅವರು ಆಡಿದ ಮಾತಿನ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಗುರೂಜಿ ಹೇಳಿದ ಭವಿಷ್ಯ ಏನು?
ನಿಮ್ಮ ಮಗನಿಗೆ ಡಿವೋರ್ಸ್ ಆಗಿ, ಎರಡನೇ ಮದುವೆ ಆಗುತ್ತದೆ. ಬರೋ ಸೊಸೆ ನಿಮ್ಮ ಬುರುಡೆ ಒಡೆದು ಹಾಕಿ ಹೋಗ್ತಾಳೆ, ಮಕ್ಕಳು ಮರಿ ಆಗೋಕಿಂತ ಮುಂಚೆ ಜಗಳ ಆದರೆ ನಿಮ್ಮ ಮನೆಯವರೆಲ್ಲ ಜೈಲಿಗೆ ಹೋಗಬೇಕು, ಬೇಲ್ ತಗೊಳ್ಳಬೇಕಾಗುತ್ತದೆ ಎಂದು ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ. ಅಲ್ಲಿ ನಿಮಗೆ ಜಾಡಿಸಿ ಒದೆಯುತ್ತಾಳೆ. ಜಾತಕ ಯಕ್ಕೊಟ್ಟು ಹೋಗುತ್ತದೆ. ಅತ್ತೆಯನ್ನು ಸಾಯಿಸುತ್ತಾಳೆ.
ಹುಲಿಕಲ್ ನಟರಾಜ್ ಹೇಳಿದ್ದೇನು?
ಹುಲಿಕಲ್ ನಟರಾಜ್ ಅವರು, “ಕೇಸ್ ಆಗುತ್ತೆ, ಬರ್ಬಾದ್ ಆಗುತ್ತೆ, ತಲೆ ತೆಗೆಯುತ್ತಾರೆ ಅಂತೆಲ್ಲ ಆರ್ಯರ್ಧನ್ ಗುರೂಜಿ ಅವರು ಹೇಳಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಾಗ, ಸಮಾಧಾನದ ಮಾತುಗಳನ್ನು ಹೇಳಬೇಕು, ಕೆಟ್ಟದಾಗುವ ಹಾಗೆ ಆಗಿದ್ದರೂ ಕೂಡ ಒಳ್ಳೆಯದಾಗತ್ತೆ ಎಂದು ಹೇಳಬೇಕು, ಈ ರೀತಿ ಭಯೋತ್ಪಾದನೆಯ ಮಾತು ಆಡಬೇಡಿ” ಎಂದು ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

