ಮದುವೆ, ಡಿವೋರ್ಸ್ ಬಗ್ಗೆ ರಾಜ್ ಬಿ.ಶೆಟ್ಟಿ ಓಪನ್ ಮಾತು: ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!
ನಟ ರಾಜ್ ಬಿ. ಶೆಟ್ಟಿ ಅವರು ಮದುವೆ ಮತ್ತು ಡಿವೋರ್ಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹೊಂದಾಣಿಕೆ ಇಲ್ಲದಿದ್ದರೆ ಡಿವೋರ್ಸ್ ಪಡೆಯುವುದು ತಪ್ಪಲ್ಲ ಎಂಬ ಅವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಸೂಪರ್ ಸ್ಟಾರ್ ಆಗಿರೋ ರಾಜ್ ಬಿ.ಶೆಟ್ಟಿ
ಒಂದು ಮೊಟ್ಟೆಯ ಕಥೆ, ಸು ಫ್ರಮ್ ಸೋ ಸೇರಿದಂತೆ ಅತ್ಯಂತ ಕಡಿಮೆ ಬಜೆಟ್ನಲ್ಲಿ ಹಿಟ್ ಚಿತ್ರ ಕೊಟ್ಟು ಪ್ಯಾನ್ ಇಂಡಿಯಾವನ್ನು ಮೀರಿ ಹೆಸರು ಮಾಡಿದವರು ರಾಜ್ ಬಿ.ಶೆಟ್ಟಿ. 1987ರಲ್ಲಿ ಹುಟ್ಟಿರುವ ರಾಜ್ ಅವರಿಗೆ ಈಗ 38 ವರ್ಷ ವಯಸ್ಸು. ಆದರೂ ಇದುವರೆಗೆ ಅವರು ಮದುವೆಯಾಗಲಿಲ್ಲ.
ಪಾರ್ಟನರ್ ಇದ್ದಾಳೆ
ಈ ಬಗ್ಗೆ ಈ ಹಿಂದೆ ಏಷ್ಯಾನೆಟ್ ಸುವರ್ಣದ ಜೊತೆ ಮಾತನಾಡಿದ್ದ ಅವರು, ಪಾರ್ಟನರ್ ಇದ್ದಾರೆ ಎನ್ನಬಹುದು. ಆದರೆ ಮದುವೆಯ ಬಗ್ಗೆ ಈಗಲೇ ಡಿಸೈಡ್ ಮಾಡಲಿಲ್ಲ. ಒಬ್ಬರು ಕಾರಿನಲ್ಲಿ ಒಂದಿಷ್ಟು ದೂರ ಹೋಗುವಾಗಲೂ ತಮ್ಮ ಜೊತೆ ಯಾರು ಇರಬೇಕು ಎಂದು ಯೋಚನೆ ಮಾಡುತ್ತಾರೆ, ಮದುವೆ ಎನ್ನುವುದು ಲೈಫ್ ಲಾಂಗ್ ಜರ್ನಿ ಅದಕ್ಕಾಗಿ ಯೋಚನೆ ಮಾಡಬೆಕು ಎಂದಿದ್ದರು.
ಮಕ್ಕಳು ಯಾಕೆ?
ಮೆಂಟಲ್ ಏಜ್ ಬೇರೆ, ಫಿಸಿಕಲ್ ಏಜ್ ಬೇರೆ. ಮದುವೆ ಆದ್ರೆ ಆಯಿತು ಬಿಡಿ. ಜಗತ್ತಿನಲ್ಲಿ ಇಷ್ಟೆಲ್ಲಾ ಮಕ್ಕಳು ಇದ್ದಾರೆ. ಇಬ್ಬರನ್ನು ಅಡಾಪ್ಟ್ ಮಾಡಿಕೊಂಡರೆ ಆಯಿತು ಎಂದು ಪಾರ್ಟನರ್ ಇರುವುದನ್ನು ಬಹಿರಂಗಪಡಿಸಿದ್ದರೂ ಮದುವೆಯಾಗುವ ಬಗ್ಗೆ ಮಾತನಾಡಿರಲಿಲ್ಲ.
ಮದುವೆ ಎನ್ನುವುದು...
ಇದೇ ವೇಳೆ ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ಡಿವೋರ್ಸ್ ಬಗ್ಗೆ ಮಾತನಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಉಂಟು ಮಾಡುತ್ತಿದೆ. ಇದಕ್ಕೆ ಕಾರಣ, ರಚಿತಾ ರಾಮ್, ಲಿವ್ ಇನ್ ಒಳ್ಳೆಯದೋ, ಮದುವೆನೋ ಎಂದು ಪ್ರಶ್ನಿಸಿದ್ದಾಗ, ರಾಜ್ ಅವರು ಮದುವೆ ಎನ್ನುವುದು ನನ್ನ ಅನಿಸಿಕೆ. ಆದರೆ ಮದುವೆಗೂ ಮೊದಲು ಪ್ರೀತಿಯ ಎಕ್ಸ್ಪೀರಿಯನ್ಸ್ ಇರಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ, ಎಲ್ಲವನ್ನೂ ಕಳೆದುಕೊಳ್ಳಲು ರೆಡಿ ಇದ್ದರೆ ಮದುವೆಯಾಗಬೇಕು, ಎರಡೂ ಕಡೆಗಳಿಂದ ಅದು ಹಾಗೆಯೇ ಇರಬೇಕು. ಪಡೆದುಕೊಳ್ಳುವುದು ಮುಖ್ಯವಲ್ಲ, ಕಳೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದಿದ್ದಾರೆ ನಟ.
ಡಿವೋರ್ಸ್ ಬಗ್ಗೆ ರಾಜ್
ಇದೇ ವೇಳೆ ಡಿವೋರ್ಸ್ ಬಗ್ಗೆ ಮಾತನಾಡಿದಾಗ ಇಬ್ಬರಿಗೂ ಹೊಂದಾಣಿಕೆ ಇಲ್ಲ ಎಂದರೆ ದೂರವಾಗುವುದರಲ್ಲಿ ತಪ್ಪೇನಿಲ್ಲ. ಖುಷಿಯಾಗಿದ್ದರೆ ಒಟ್ಟಿಗೇ ಇರಬೇಕು. ದೂರವಾದ್ರೆ ಅದೇನಂತೆ, ಗಂಡ ಬಿಟ್ಟವಳು, ಹೆಂಡ್ತಿ ಬಿಟ್ಟವ ಎನ್ನುವುದರಲ್ಲಿ ಅರ್ಥವಿಲ್ಲ. ಒಬ್ಬಂಟಿಯಾಗಿ ಖುಷಿಯಾಗಿದ್ದರೆ ಡಿವೋರ್ಸ್ ಮಾಡುವುದು ತಪ್ಪಲ್ಲ ಎಂದಿದ್ದಾರೆ.
ಪರ-ವಿರೋಧದ ಚರ್ಚೆ
ಈ ಬಗ್ಗೆ ಈಗ ಚರ್ಚೆ ಆಗ್ತಿದೆ. ಕೆಲವರು ಈ ಮಾತನ್ನು ಒಪ್ಪಿಕೊಂಡಿದ್ದರೆ, ಕೆಲವರು ಇದರ ವಿರುದ್ಧವಾಗಿದ್ದಾರೆ. ಇದಕ್ಕೆ ಕಾರಣ, ಮದುವೆ ಮತ್ತು ಡಿವೋರ್ಸ್ ಎನ್ನುವುದು ಎರಡು ಕುಟುಂಬಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಅದರ ಪರಿಣಾಮ ಎರಡು ಕುಟುಂಬಗಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಅದರಲ್ಲಿಯೂ ಮಕ್ಕಳು ಇದ್ದರೆ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಡಿವೋರ್ಸ್ ಎನ್ನುವುದನ್ನು ಇಷ್ಟು ಸಲೀಸಾಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

