- Home
- Entertainment
- TV Talk
- ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಸಿದ್ಧವಾಗಿದ್ದ ನಟಿ ಲಕ್ಷ್ಮಿ ಪ್ರಿಯಾ; ಆದ್ರೆ ವೋಟರ್ ಲಿಸ್ಟ್‌ನಲ್ಲೇ ಹೆಸರಿಲ್ಲ!
ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಸಿದ್ಧವಾಗಿದ್ದ ನಟಿ ಲಕ್ಷ್ಮಿ ಪ್ರಿಯಾ; ಆದ್ರೆ ವೋಟರ್ ಲಿಸ್ಟ್‌ನಲ್ಲೇ ಹೆಸರಿಲ್ಲ!
ಪೆರುಂಬಾವೂರ್ ವಿಧಾನಸಭಾ ಕ್ಷೇತ್ರದಿಂದ ಟ್ವೆಂಟಿ-20 ಪಕ್ಷದ ಅಭ್ಯರ್ಥಿ ಎಂದು ಘೋಷಿಸಲಾಗಿದ್ದ ನಟಿ ಲಕ್ಷ್ಮಿ ಪ್ರಿಯಾ ಅವರ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲ. ಈ ಕಾರಣಕ್ಕೆ ನಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ವೋಟರ್ ಲಿಸ್ಟ್‌ನಲ್ಲಿ ಹೆಸರಿಲ್ಲ; ಟ್ರೋಲ್‌ಗೆ ಗುರಿಯಾದ ನಟಿ ಲಕ್ಷ್ಮಿ ಪ್ರಿಯಾ
ಪೆರುಂಬಾವೂರ್ ವಿಧಾನಸಭಾ ಕ್ಷೇತ್ರಕ್ಕೆ ಟ್ವೆಂಟಿ-20 ಪಕ್ಷದಿಂದ ಲಕ್ಷ್ಮಿ ಪ್ರಿಯಾ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಆದರೆ, ಅವರ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲ. ಲಕ್ಷ್ಮಿ ಪ್ರಿಯಾ ಸದ್ಯ ತ್ರಿಪ್ಪೂನಿತುರಾದ ಕರಿಂಗಾಚಿನಲ್ಲಿ ವಾಸಿಸುತ್ತಿದ್ದರೂ, ಅಲ್ಲಿನ ಮತದಾರರ ಪಟ್ಟಿಯಲ್ಲೂ ಅವರ ಹೆಸರಿಲ್ಲ. ಈ ಹಿನ್ನೆಲೆಯಲ್ಲಿ, ಪೆರುಂಬಾವೂರ್ ಕ್ಷೇತ್ರದಲ್ಲಿ ನಿಗದಿಯಾಗಿದ್ದ ರೋಡ್ ಶೋ ಅನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ರೋಡ್ ಶೋಗಾಗಿ ಹಾಕಿದ್ದ ಫ್ಲೆಕ್ಸ್‌ಗಳನ್ನೂ ಅಲ್ಲಿಂದ ತೆಗೆದುಹಾಕಲಾಗಿದೆ.
ಲಕ್ಷ್ಮಿ ಪ್ರಿಯಾ ಅವರನ್ನು ಟ್ರೋಲ್ ಮಾಡುತ್ತಿರುವ ಸೋಷಿಯಲ್ ಮೀಡಿಯಾ
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ನಟಿ ಲಕ್ಷ್ಮಿ ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಹಲವು ನೆಟ್ಟಿಗರು ಲಕ್ಷ್ಮಿ ಪ್ರಿಯಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
'ಮಮ್ಮುಟ್ಟಿ ಮತ್ತು ಲಾಲೇಟ್ಟನ್' ಈಗ ಏನು ಮಾಡುತ್ತಾರೆ?'
'ಪ್ರಚಾರಕ್ಕೆ ಇಳಿಯಲು ಸಿದ್ಧರಾಗಿದ್ದ ಮಮ್ಮುಟ್ಟಿ ಮತ್ತು ಲಾಲೇಟ್ಟನ್ (ಮೋಹನ್‌ಲಾಲ್) ಈಗ ಏನು ಮಾಡುತ್ತಾರೆ?' ಎಂದು ಟ್ರೋಲಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
'ಅರಳುವ ಮುನ್ನವೇ ಬಾಡಿದ ಹೂವು'
'ಅರಳುವ ಮುನ್ನವೇ ಬಾಡಿದ ಹೂವು' ಎಂದು ಹೇಳುವ ಮೂಲಕ ಇನ್ನು ಕೆಲವರು ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇದರಲ್ಲಿ ನಟಿ ಧಾರಾವಾಹಿ ಮತ್ತು ಸೀರಿಯಲ್‌ಗಳಲ್ಲಿ ಅಳುವ ದೃಶ್ಯವನ್ನೂ ಅಳವಡಿಕೆ ಮಾಡಿದ್ದಾರೆ.
'ಹೀಗೊಂದು ಲಿಸ್ಟ್ ಇದೆ ಅಂತ ನನಗೆ ಯಾರೂ ಹೇಳಿಲ್ಲ'
'ಹೀಗೊಂದು ಲಿಸ್ಟ್ ಇದೆ ಅಂತ ನನಗೆ ಯಾರೂ ಹೇಳಿಲ್ಲ' ಎಂಬ ಕ್ಯಾಪ್ಶನ್‌ನೊಂದಿಗೆ ಮತ್ತೊಂದು ಟ್ರೋಲ್ ಪೋಸ್ಟ್ ಕಾಣಿಸಿಕೊಂಡಿದೆ. ಚುನಾವಣೆಗೂ ಮುನ್ನ ವೋಟರ್ ಲಿಸ್ಟ್‌ನಲ್ಲಿ ಹೆಸರು ಇರಬೇಕು ಎಂದು ನನಗೆ ಮಾಹಿತಿಯೇ ಇಲ್ಲವೆಂಬಂತೆ ನಟಿಯನ್ನ ಟ್ರೋಲ್ ಮಾಡಿದ್ದಾರೆ.
'ಇದನ್ನೆಲ್ಲಾ ಗಮನಿಸಬೇಕಲ್ವಾ ಅಂಬಾನೇ'
'ಆವೇಶಂ' ಸಿನಿಮಾದ 'ಇದೆಲ್ಲಾ ಗಮನಿಸಬೇಕಲ್ವಾ ಅಂಬಾನೇ' ಎಂಬ ಡೈಲಾಗ್ ಅನ್ನೂ ಕೆಲವರು ಶೇರ್ ಮಾಡಿದ್ದಾರೆ. 'ಅರಳುವ ಮುನ್ನವೇ ಕಮರಿದ ಎಂಎಲ್‌ಎ' ಎಂಬ ಕಾಮೆಂಟ್‌ಗಳೂ ಬಂದಿವೆ.
ಲಕ್ಷ್ಮಿ ಪ್ರಿಯಾ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂಬ ವಿಚಾರ ಪಕ್ಷಕ್ಕೆ ನಿನ್ನೆ ತಿಳಿದಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

