ಬಿಗ್ ಬಾಸ್ ಕನ್ನಡ 11ರ ವಿಜೇತ ಹನುಮಂತು, ರನ್ನರ್‌ಅಪ್ ತಿವ್ರಿಕಮ್ ಹಾಗೂ ರಜತ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಹನುಮಂತು ಅವರು ಜೀ ಕನ್ನಡವನ್ನು ತಮ್ಮ ತವರು ಮನೆ ಎಂದು ಕರೆದರು ಮತ್ತು ಕಲರ್ಸ್ ಕನ್ನಡವನ್ನು ಗಂಡನ ಮನೆ ಎಂದು ಬಣ್ಣಿಸಿದರು.
ಬೆಂಗಳೂರು (ಜ.27): ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯಲ್ಲಿ ವಿಜೇತನಾದ ಹಳ್ಳಿ ಹೈದ ಹನುಮಂತು, ರನ್ನರ್‌ಅಪ್ ಆದ ತಿವ್ರಿಕಮ್ ಹಾಗೂ ಮೂರನೇ ಸ್ಥಾನ ಪಡೆದ ರಜತ್ ಸೋಮವಾರ ಕಲರ್ಸ್ ಕನ್ನಡದ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಕಲರ್ಸ್ ಕನ್ನಡ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹನುಮಂತಿ ಜೀ ಕನ್ನಡವನ್ನು ನೆನೆಪಿಸಿಕೊಮಡಿದ್ದ ವಿಶೇಷ ಎನಿಸಿತು. 'ನಾನು ಬಿಗ್‌ಬಾಸ್ ನೋಡುತ್ತಿರಲಿಲ್ಲ. ನಾನು ಜೀ ಕನ್ನಡದಲ್ಲಿ ಇದ್ದೆ ಹಾಗಾಗೀ ನಾನು ಕಲರ್ಸ್ ಕನ್ನಡವನ್ನ ಅಷ್ಟಾಗಿ ನೋಡುತ್ತಿರಲಿಲ್ಲ. ಜೀ ಕನ್ನಡ ನನಗೆ ತವರು ಮನೆ ರೀತಿ. ತವರು ಮನೆಯಿಂದ ನನ್ನ ಗಂಡನ ಮನೆ ಕಲರ್ಸ್ ಕನ್ನಡಕ್ಕೆ ಬಂದ ರೀತಿ ಆಯ್ತು. ಸಾಕಷ್ಟು ಬಾರಿ ಬಿಗ್‌ಬಾಸ್‌ಗೆ ಬರುವಂತೆ ನನಗೆ ಆಫರ್ ಬಂದಿತ್ತು. ಎರಡು ವರ್ಷದ ಹಿಂದೆ ಒಮ್ಮೆ ಆಫರ್ ಬಂದಿತ್ತು. ಆದರೆ, ನಾನು ಹೋಗಿರಲಿಲ್ಲ. ಸುದೀಪ್ ಸರ್ ಈ ವರ್ಷ ಕೊನೆ ಬಿಗ್‌ಬಾಸ್ ನಡೆಸಿಕೊಡೋದು ಎಂದರು. ಸುದೀಪ್ ಸರ್ ಇರುವಾಗಲೇ ಹೋಗಬೇಕು ಅಂತ ಬಿಗ್‌ಬಾಸ್‌ಗೆ ಬಂದೆ ಎಂದು ಹೇಳಿದರು.
ಬಿಗ್‌ಬಾಸ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲಿಯೇ ಕಲರ್ಸ್ ಕನ್ನಡ ಈ ಸುದ್ದಿಗೋಷ್ಠಿಯನ್ನು ಆಯೋಜನೆ ಮಾಡಿತ್ತು. 'ಸುದೀಪ್ ಸರ್ ಬಟ್ಟೆ ಕೊಡಿಸಿದ್ದು ಮರೆಯಲಾಗದ ಕ್ಷಣ. ಬಿಗ್‌ಬಾಸ್ ಸೀಸನ್ 11 ಅನ್ನು ನಾನು ಗೆದ್ದಿಲ್ಲ. ನನಗೆ ವೋಟ್ ಮಾಡುವ ಮೂಲಕ ಕನ್ನಡದ ಜನತೆ ನನ್ನನ್ನು ಗೆಲ್ಲಿಸಿದ್ದಾರೆ' ಎಂದು ವಿನಮ್ರವಾಗಿ ಹೇಳಿದ್ದಾರೆ.
'ಹನುಮಂತು ಎಲ್ಲಿ ಹೋದ ಅಂತಾ ಹುಡುಕಾಡ್ತಾ ಇದ್ದರು. ನಾನು ಹೋಗಿ ಮಲಗಿಕೊಂಡಿದ್ದೆ. ನಾನು ಗೆದ್ದಿಲ್ಲ ಕರ್ನಾಟಕದ ಜನ ವೋಟ್ ಮಾಡಿ ನನ್ನ ಗೆಲ್ಲಿಸಿದ್ದಾರೆ. ನಾನು ಗೆಲ್ಲಬೇಕು ಅಂತ ಬಂದಿರಲಿಲ್ಲ. ಬಿಗ್ ಬಾಸ್ ನೋಡುತ್ತಿರಲಿಲ್ಲ ಅದರ ಬಗ್ಗೆ ಕೇಳುತ್ತಿದ್ದೆ. ಸುದೀಪ್ ಸರ್ ಇರೋವಾಗಲೇ ಬಿಗ್ ಬಾಸ್‌ಗೆ ಹೋಗು ಅಂತ ಸ್ನೆಹಿತರ ಒತ್ತಾಯಕ್ಕೆ ಹೋದೆ. ಸುದೀಪ್ ಸರ್ ಲಾಸ್ಟ್ ಅಂತ ಬರೆದಿದ್ದರು. ಅದಕ್ಕಾಗಿ ಆಹ್ವಾನ ಒಪ್ಪಿಕೊಂಡೆ. ಬಿಗ್ ಬಾಸ್ ಮನೆ ಊಟ ನನ್ನ ಗೆಲ್ಲಿಸಿದೆ. ನಾನು ಆಡಿರೋ ಆಟ ನೋಡಿ ಜನ ನನ್ನ ಗೆಲ್ಲಿಸಿದ್ಧಾರೆ ಎಂದಿದ್ದಾರೆ.
ಹುಡುಗಿ ಮನೆಯವರ ಜೊತೆ ಇನ್ನು ಮಾತಾಡಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದೆ. ಆದರೆ, ಹಳ್ಳಿಯೇ ಖುಷಿ ಕೊಡುತ್ತೆ. ಸುದೀಪ್ ಸರ್ ಡ್ರೆಸ್ ಕೊಡಿಸಿದ್ದು ತುಂಬಾ ಖುಷಿ ಆಯ್ತು. ಕರ್ನಾಟಕ ಜನತೆ ಕೊಟ್ಟಿರೋ ಭಿಕ್ಷೆ ಇದೆ. ಸುದೀಪ್ ಸರ್ ಹೇಳಿರೋ ಒಂದೊಂದು ಮಾತು ಪಾಲಿಸುತ್ತೇನೆ. ತಪ್ಪು ಮಾಡಿದ್ರೆ ಸುದೀಪ್ ಸರ್ ಮಾತು ನೆನಪಿಸಿಕೊಂಡು ಸರಿಯಾಗಿ ನಡೆಯುತ್ತೇನೆ. ನಾನು ಮುಂದೆ ತುಂಬಾ ಚಲೋ ಇರುತ್ತೇನೆ ಎಂದು ಹೇಳಿದ್ದಾರೆ.
ಸುದೀಪ್ ಕೊನೆಯ ಬಿಗ್ಬಾಸ್ನಲ್ಲಿ ಕಣ್ಣೀರ ಕೋಡಿ! ಆ ದನಿ ಕೇಳಿ ಕಣ್ಣೀರಾದ ಕಿಚ್ಚನ ಅಪ್ಪ-ಮಗಳು
ರನ್ನರ್‌ಅಪ್ ಆಗಿದ್ದ ತಿವ್ರಿಕಮ್ ಮಾತನಾಡಿ, 'ಈಗ ಜನ ಕೊಡುತ್ತಿರೋ ಪ್ರೀತಿ ದೊಡ್ಡದು. ಮನೆ ಒಳಗೆ ಹೋಗುವಾಗ ಖಾಲಿ ಪೇಪರ್ ಆಗಿದ್ದೆ. ಏನೇ ಪ್ಲ್ಯಾನ್ ಮಾಡಿಕೊಂಡು ಹೋದರೂ ಅದು ಎರಡು ದಿನ ಮಾತ್ರ. ನನಗೆ ಫಿನಾಲೆ ಸ್ಟೇಜ್ ಗೆ ಹೋಗೋ ಆಸೆ ಇತ್ತು ಅದನ್ನ ನಾನು ಈಡೇರಿಸಿಕೊಂಡೆ. ರನ್ನರ್ ಅಪ್ ಆಗಿದ್ದಕ್ಕೆ ತುಂಬಾ ಖುಷಿ ಇದೆ. ಹನುಮಂತ ತುಂಬಾ ಜಾಣ ಇದ್ದಾನೆ ಅಂತ ಮೊದಲ ದಿನವೇ ಹೇಳಿದ್ದೆ. ಹನುಮಂತುನಾ ಮುಗ್ಧ ಅಂತ ಅಂದುಕೊಂಡವ್ರು ದಡ್ಡರಾದ್ರು ಮನೆಯಿಂದ ಹೊರ ಬಂದ್ರು ಎಂದು ಹೇಳಿದ್ದಾರೆ.
ಹನುಮಂತ ಬಿಗ್ ಬಾಸ್ ಗೆಲ್ಲಲು ಕಾರಣ 'ಆಟ' ಮಾತ್ರವಲ್ಲ, ಇನ್ನೇನೋ ಬೇರೆ ಇದೆ..!
