ಸದ್ಗುರು ಜಗ್ಗಿ ವಾಸುದೇವ್ ಅವರು ಯಾವಾಗಲೂ ಒಂದು ಮಾತು ಹೇಳುತ್ತಾರೆ. 'ಯಾರನ್ನೂ ಯಾವುದನ್ನೂ ಮೇಲೆ ಎಂದು ಅಥವಾ ಕೆಳಗೆ ಎಂದು ನೋಡಬೇಡಿ. ಎಲ್ಲದಕ್ಕೂ ಅದರದ್ದೇ ಆದ ಒಂದು ಸ್ಥಾನವಿದೆ. ಎಲ್ಲವನ್ನೂ ಅದು..

ಬಿಗ್ ಬಾಸ್ ಕನ್ನಡ 11 ಟ್ರೋಫಿ ಹಳ್ಳಿ ಹೈದ, ಸಿಂಗರ್ ಹನುಮಂತ (Hanumantha) ಪಾಲಾಗಿದೆ. ಕೆಲವರು ಇದನ್ನು ಅಚ್ಚರಿಯಿಂದ ನೋಡುತ್ತಿದ್ದರೆ ಹಲವರು 'ಬಡವರ ಮಕ್ಕಳು ಬೆಳೀಬೇಕು' ಹೀಗೆ ಬದಲಾವಣೆ ಆಗ್ಬೇಕು' ಅಂತಿದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿದವರಿಗೆ ಹೋಲಿಸಿದರೆ ಹನುಮಂತ ಅಷ್ಟೇನೂ ಸ್ಟ್ರಾಂಗ್ ಸ್ಪರ್ಧಿ ಎನ್ನಿಸಿರಲಿಲ್ಲ. ಆದರೆ, ಕೊನೆಗೂ ಎಲ್ಲರನ್ನೂ ಸೈಡ್‌ಗೆ ಸರಿಸಿ ಹನುಮಂತನೇ ಗೆದ್ದಿದ್ದಾರೆ. ಆ ಮೂಲಕ ಗೆಲುವಿಗೆ ಆಟ ಮಾತ್ರವೇ ಅಲ್ಲ, ಇನ್ನೂ ಏನೋ ಅಗತ್ಯವಿದೆ ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಿದ್ದಾರೆ. 

ಹಾಗಿದ್ದರೆ ಅದೇನು? ಸರಿಗಮಪ ಖ್ಯಾತಿಯ ಹನುಮಂತ ಬಿಗ್ ಬಾಸ್ ಖ್ಯಾತಿ ಪಡೆದಿದ್ದೂ ಆಯ್ತು. ಕುರಿ ಕಾಯುತ್ತಿದ್ದ ಹನುಮಂತ ಸಿಂಗರ್ ಹನುಮಂತ ಆಗಿದ್ದು ಹೇಗೆ? ಸಿಂಗರ್ ಹನುಮಂತ ಬಿಗ್ ಬಾಸ್ ಹನುಮಂತ ಆಗಿದ್ದು ಹೇಗೆ? ಇದಕ್ಕೆಲ್ಲಾ ಕಾರಣ ಕೇವಲ ಆಟವಲ್ಲ, ವ್ಯಕ್ತಿತ್ವ ಕೂಡ ಕಾರಣ ಎನ್ನಲಾಗುತ್ತಿದೆ. ಹಾಗಿದ್ದರೆ ಹನುಮಂತ ಗ್ರೇಟ್ ವ್ಯಕ್ತಿಯೇ? ಅವರಿಗೆ ನೊಬೆಲ್, ಆಸ್ಕರ್ ಇಂಥ ಪ್ರಶಸ್ತಿ ಏನಾದ್ರೂ ಸಿಕ್ಕಿದ್ಯಾ? ಮ್ಯಾಟರ್ ಹಾಗಲ್ಲವೇ ಅಲ್ಲ..

ಈ 'ಬಿಗ್ ಬಾಸ್ 11' ಗೆಲ್ಲೋದು ಪಕ್ಕಾ ಇವ್ರೇ, ಕನ್ಫರ್ಮ್ ಅಂದ್ರು; ಆದ್ರೂ ಡೌಟ್ ಬರ್ತಿದೆ ಯಾಕೆ..?!

ಗ್ರೇಟ್ ವ್ಯಕ್ತಿತ್ವ ಅನ್ನೋದು ಅದೊಂದು ಸಾಧನೆಯಲ್ಲ, ಹುಟ್ಟುಗುಣ ಎನ್ನಬಹುದು. ಸದ್ಗುರು ಜಗ್ಗಿ ವಾಸುದೇವ್ ಅವರು ಯಾವಾಗಲೂ ಒಂದು ಮಾತು ಹೇಳುತ್ತಾರೆ. 'ಯಾರನ್ನೂ ಯಾವುದನ್ನೂ ಮೇಲೆ ಎಂದು ಅಥವಾ ಕೆಳಗೆ ಎಂದು ನೋಡಬೇಡಿ. ಎಲ್ಲದಕ್ಕೂ ಅದರದ್ದೇ ಆದ ಒಂದು ಸ್ಥಾನವಿದೆ. ಎಲ್ಲವನ್ನೂ ಅದು ಇರುವಂತೆ ನೋಡಿ. ನಾನು ನನ್ನ ಮಗಳಿಗೆ ಕಲಿಸಿರುವ ಪಾಠ ಅದೊಂದೇ.. ಏನಿದೆಯೋ ಅದನ್ನು ಹಾಗೆ ನೋಡು, ಯಾವುದನ್ನೂ ನೀನು ಮೇಲೆ ಏರಿಸುವುದು ಅಥವಾ ಕೆಳಗೆ ಇಳಿಸುವುದು ಬೇಡ' ಎಂಬ ಮಾತನ್ನು ಹೇಳುತ್ತಲೇ ಇರುತ್ತಾರೆ. 

ಈಗ ಹನುಮಂತ ಬಿಗ್ ಬಾಸ್ ಗೆದ್ದಿದ್ದು ನೋಡಿ ಅದು 'ಹೌದು' ಎಂಬುದು ಮನದಟ್ಟಾಗುತ್ತದೆ. ಹನುಮಂತ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಹಾಗೆಯೇ. ಅವರು ಸುದೀಪ್ ಅವರನ್ನಾಗಲೀ ಅಥವಾ ತಮ್ಮ ಸಹಸ್ಪರ್ಧಿಗಳಲ್ಲಿ ಯಾರನ್ನೇ ಆಗಲೀ, ಮೇಲೆ ಅಥವಾ ಕೆಳಗೆ ಅಂತ ಭಾವಿಸುತ್ತಲೇ ಇರಲಿಲ್ಲ. ತಮ್ಮ ಕೆಲಸ ತಾವು ಮಾಡುವುದು, ಕೇಳಲಾದ ಪ್ರಶ್ನೆಗೆ ತಮಗೆ ತೋಚಿದ ಉತ್ತರ ಕೊಡುವುದು. ಅಷ್ಟೇ ಅವರು ಮಾಡಿದ್ದು. ಗೆಲ್ಲುವುದಕ್ಕಾಗಿ ಏನೂ ಎಕ್ಸ್ಟ್ರಾ ಗಿಮಿಕ್ ಮಾಡಲೇ ಇಲ್ಲ. ಅವರು ಅವರಾಗಿಯೇ ಇದ್ದು, ಈ ಬ್ರಹ್ಮಾಂಡ್ ಅಶೀರ್ವಾದವನ್ನು ಪಡೆದರು. ಗೆಲುವು ಸಿಕ್ಕಿತು.

ಡಾ ರಾಜ್‌ಕುಮಾರ್ 'ಶಬ್ದವೇದಿ'ಗೆ ಕರೆದು ಅಶ್ವಥ್‌ಗೆ ಅವಮಾನ ಮಾಡಲಾಯ್ತಾ? ಏನಿದು ರಹಸ್ಯ?

ಹೌದು, ಹನುಮಂತ ಅವರ ವ್ಯಕ್ತಿತ್ವದಲ್ಲಿ ಮುಗ್ಧತೆ ಜೊತೆಜೊತೆಗೆ ಒಂದು ಶಾಂತತೆ ಕೂಡ ಮನೆ ಮಾಡಿತ್ತು, ಜೀರೋದಿಂದ ಬದುಕು ಶುರು ಮಾಡಿದ್ದ ಅವರಲ್ಲಿ ಯಾವುದೇ ಅತಿಯಾದ ಆಸೆ ಇರಲಿಲ್ಲ. ಏನಾಗುತ್ತೋ ಅದು ಆಗುತ್ತೋ, ನಾನು ನನ್ನ ಪ್ರಯತ್ನ ಮಾಡ್ತೀನಿ ಎಂಬ ಮನೋಭಾವ ಎದ್ದು ಕಾಣಿಸುತ್ತಿತ್ತು. ಬೇರೆ ಕಂಟೆಸ್ಟಂಟ್‌ಗಳಲ್ಲಿ ಕಾಣುವಂತೆ ಯಾವುದೇ ಓವರ್ ಆಕ್ಟಿಂಗ್ ಇರಲಿಲ್ಲ, ತಾನೇ ಗೆಲ್ಲಬೇಕೆಂಬ ಗುರಿ ಕೂಡ ಇರಲಿಲ್ಲ. 'ಮಾಡಬೇಕಾಗಿದ್ದು ಮಾಡ್ತೀನಿ, ಬರಬೇಕಾಗಿದ್ದು ಬರುತ್ತದೆ' ಎಂಬ ಸ್ಥಿತಪ್ರಜ್ಞೆ ಇತ್ತು. ಅದೇ ಗೆಲುವಿನ ಮೂಲವಾಯ್ತು!