ಚಾರ್ಲಿ ಸಿನಿಮಾದಲ್ಲಿ ನಟಿಸುವ ಮೊದಲು ತಮಗೆ ಆಫರ್ ನೀಡಿದ್ದ ಬರೋಬ್ಬರಿ 50 ಸಿನಿಮಾ ಸ್ಕ್ರಿಪ್ಟ್‌ಗಳನ್ನು ಬೇಡವೇ ಬೇಡ ಎಂದು ತಳ್ಳಿ ಹಾಕಿದ್ದರತೆ ಸಂಗೀತಾ. ಚಾರ್ಲಿ ಸಿನಿಮಾ ಹಿಟ್ ದಾಖಲಿಸಿದರೂ ನಟ ರಕ್ಷಿತ್ ಶೆಟ್ಟಿ-ಸಂಗೀತಾಗಿಂತ ಹೆಚ್ಚು ಜನಪ್ರಿಯತೆ ಪಡೆದಿದ್ದು ನಾಯಿ ಚಾರ್ಲಿಯೇ ಎಂಬುದು ಹೆಚ್ಚು ಪ್ರಚಲಿತದಲ್ಲಿರುವ ಮಾತು. 

ಬಿಗ್ ಬಾಸ್ ಸ್ಪರ್ಧಿ, ಕರ್ನಾಟಕ ಕ್ರಶ್ ಖ್ಯಾತಿಯ ಸಂಗೀತಾ ಶೃಂಗೇರಿ ಬಗೆಗಿನ ಹಲವು ಸೀಕ್ರೆಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಸಂಗೀತಾ ಶ್ರಂಗೇರಿ ಅವರು ನಟಿಯಾಗುವ ಮೊದಲು ಹೇಗಿದ್ದರು, ಏನು ಮಾಡುತ್ತಿದ್ದರು? ಇವೆಲ್ಲಾ ಸೀಕ್ರೆಟ್‌ಗಳು ರೀಲ್ಸ್‌ಗಳು ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಒಂದೊಂದಾಗಿ ಹೊರಬರುತ್ತಿವೆ. ಹಾಗಿದ್ದರೆ, ಶಾರದಾಂಬೆ ನಾಡಿನ , ಶೃಂಗೇರಿಯ ಕುವರಿ ಸಂಗೀತಾ ಬಿಗ್ ಬಾಸ್‌ಗೂ ಮೊದಲ ಜರ್ನಿ ಬಗೆಗೊಂದು ಬೆಳಕು!

ಸಂಗೀತಾ ಶೃಂಗೇರಿ ಚಿಕ್ಕ ಹುಡುಗಿ ಆದಾಗಿನಿಂದಲೂ ತುಂಬಾ ಚೂಸಿಯಾಗಿದ್ದರಂತೆ. ಜತೆಗೆ ಶಿಸ್ತಿನ ಸಿಪಾಯಿ ಆಗಿದ್ದರಂತೆ. ಸ್ಕೂಲು, ಕಾಲೇಜು ಎಲ್ಲಾ ಕಡೆ, ಸುವ್ಯವಸ್ಥೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದ ಸಂಗೀತಾ, ಬಾಲ್ಯದಿಂದಲೂ ಕ್ರಿಡೆಯ ಬಗ್ಗೆ ತುಂಬಾ ಒಲವು ಹೊಂದಿದ್ದರಂತೆ. ಕಾಲೇಜು ಓದುತ್ತಿದ್ದ ವೇಳೆ ಎನ್‌ಸಿಸಿ ಕೇಡರ್ ಆಗಿದ್ದರು ಸಂಗೀತಾ ಎನ್ನಲಾಗುತ್ತಿದೆ. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಸಂಗೀತಾ ರಾಜ್ಯಮಟ್ಟದ ಕ್ರೀಡಾಪಟು ಎನಿಸಿದ್ದರಂತೆ. ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದ ಸಂಗೀತಾ ಮಾಡೆಲಿಂಗ್ ಸಹ ಮಾಡಿದ್ದರು. 

ನಮ್ಮಪ್ಪಂಗೆ ನಾನೇ ಹುಟ್ಟಿರೋದು, ನೀವ್ಯಾರಾದ್ರೂ ಹುಟ್ಟಿದ್ರೆ ಬಂದು ಶೋಕಿ ಮಾಡಿ; ಹೀಗೆ ಹೇಳಿದ್ರಾ ವರ್ತೂರು ಸಂತೋಷ್

ಚಾರ್ಲಿ ಸಿನಿಮಾದಲ್ಲಿ ನಟಿಸುವ ಮೊದಲು ತಮಗೆ ಆಫರ್ ನೀಡಿದ್ದ ಬರೋಬ್ಬರಿ 50 ಸಿನಿಮಾ ಸ್ಕ್ರಿಪ್ಟ್‌ಗಳನ್ನು ಬೇಡವೇ ಬೇಡ ಎಂದು ತಳ್ಳಿ ಹಾಕಿದ್ದರತೆ ಸಂಗೀತಾ. ಚಾರ್ಲಿ ಸಿನಿಮಾ ಹಿಟ್ ದಾಖಲಿಸಿದರೂ ನಟ ರಕ್ಷಿತ್ ಶೆಟ್ಟಿ-ಸಂಗೀತಾಗಿಂತ ಹೆಚ್ಚು ಜನಪ್ರಿಯತೆ ಪಡೆದಿದ್ದು ನಾಯಿ ಚಾರ್ಲಿಯೇ ಎಂಬುದು ಹೆಚ್ಚು ಪ್ರಚಲಿತದಲ್ಲಿರುವ ಮಾತು. ಚಾರ್ಲಿ ಸಿನಿಮಾ ಸಕ್ಸಸ್ ಸಂಗೀತಾ ಅವರು 'ಹರಹರ ಮಹಾದೇವ' ಸೀರಿಯಲ್‌ನಲ್ಲಿ ಸತಿ ಪಾತ್ರದಲ್ಲಿ ಕೂಡ ನಟಿಸಿದ್ದಾರೆ. ಶಿವನಾಗಿ ಸದ್ಯ ಬಿಗ್ ಬಾಸ್ ಸಿಸನ್ 10 ಸ್ಪರ್ಧಿಯಾಗಿರುವ ನಟ ವಿನಯ್ ಗೌಡ ನಟಿಸಿದ್ದಾರೆ. 

ಮಗಳು ಸಂತೋಷ ತಂದ್ಳು, ಮಗ ಸಂಪತ್ತು ತಂದ; ಟಗರು ಪಲ್ಯ ನಟಿ ಅಮೃತಾ ಪ್ರೇಮ್‌, ನೆನಪಿರಲಿ ಪ್ರೇಮ್‌ ಎಕ್ಸ್‌ಕ್ಲೂಸಿವ್ ಇಂಟರ್‌ವ್ಯೂ

ಕಲರ್ಸ್ ಕನ್ನಡದ ಬಿಗ್ ಬಾಸ್ ಸೀಸನ್ 10 ನಲ್ಲಿ ಚಾನ್ಸ್ ಪಡೆದಿರುವ ನಟಿ ಸಂಗೀತಾ, ಚಾರ್ಲಿ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಕಾರಣ, ಮತ್ತದೇ ಚೂಸಿ ಮೆಂಟಾಲಿಟಿ. ಸದ್ಯ ಬಿಗ್ ಬಾಸ್‌ನಲ್ಲಿ ಚೆನ್ನಾಗಿ ಆಡಿ ಗಮನಸೆಳೆಯುತ್ತಿರುವ ನಟಿ ಸಂಗೀತಾ, ಅಲ್ಲಿಯೇ ಇರುವ ಇನ್ನೊಬ್ಬರು ಸ್ಪರ್ಧಿ ನಟ ಕಾರ್ತಿಕ್ ಮಹೇಶ್‌ ಜತೆ ಲವ್ವಲ್ಲಿ ಬಿದ್ದಂತೆ ಆಡುತ್ತಿದ್ದಾರೆ. ಅದು ರಿಯಲ್ ಲವ್ವೋ ಅಥವಾ ರೀಲ್ ಲವ್ವೋ ಎಂದು ಹೊರಗಡೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಲ್ಲಿ ಅವರಿಬ್ಬರ ನಡೆ-ನುಡಿ ನೋಡಿದರೆ ಸಂಗೀತಾ-ಕಾರ್ತಿಕ್ ನಿಜವಾಗಿಯೂ ಬೆಸ್ಟ್ ಫ್ರೆಂಡ್ಸ್ ಮತ್ತು ಲವರ್ಸ್‌ ಎನ್ನಬಹುದು. ಒಟ್ಟಿನಲ್ಲಿ, ಸಂಗೀತಾ ಬಗೆಗಿನ ಹಲವು ಸೀಕ್ರೆಟ್‌ಗಳು ರಿವೀಲ್ ಆಗತೊಡಗಿವೆ.