ನಮ್ಮಪ್ಪಂಗೆ ನಾನೇ ಹುಟ್ಟಿರೋದು, ನೀವ್ಯಾರಾದ್ರೂ ಹುಟ್ಟಿದ್ರೆ ಬಂದು ಶೋಕಿ ಮಾಡಿ; ಹೀಗೆ ಹೇಳಿದ್ರಾ ವರ್ತೂರು ಸಂತೋಷ್
ವರ್ತೂರು ಸಂತೋಷ್ ತಾವು ಬಿಗ್ ಬಾಸ್ ಮನೆಯಿಂದ ಶೋ ಬಿಟ್ಟು ಹೊರನಡೆಯುವ ನಿರ್ಧಾರ ಪ್ರಕಟಿಸಿ ಸ್ವಲ್ಪ ದಿನಗಳ ಹಿಂದೆ ಸಖತ್ ಸುದ್ದಿಯಾಗಿದ್ದರು. ಆದರೆ, ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಹೋಸ್ಟ್ ಸುದೀಪ್ ಅವರು 'ನಿಮಗೆ ಕುರುನಾಡ ಜನರು ಇರಬೇಕು ಎಂದು ವೋಟ್ ಮಾಡಿದ್ದಾರೆ. ನಾನು ಜನರ ವಿರುದ್ಧ ಹೋಗಲಾರೆ' ಎಂದು ಹೇಳಿ ವರ್ತೂರು ಸಂತೋಷ್ ಮಾತಿಗೆ ತೀವ್ರ ಬೇಸರ ಹೊರಹಾಕಿ ಶೋ ಬಿಟ್ಟು ವೇದಿಕೆಯಿಂದ ಹೊರಕ್ಕೆ ನಡೆದಿದ್ದರು.
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವರ್ತೂರ್ ಸಂತೋಷ್ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಹುಲಿ ಉಗುರು ಕೇಸ್ ನಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಸಂತೋಷ್ ಮತ್ತೆ ಬಿಗ್ ಬಾಸ್ ಮನೆ ಸೇರಿದ್ದು ಈಗ ಹಳೆಯ ಸುದ್ದಿ. ಸಂತೋಷ್‌ಗೆ ಮದುವೆಯಾಗಿದೆ, ಒಂದು ಮಗುವಿದೆ ಎಂಬುದು ಲೇಟೆಸ್ಟ್ ಗಾಸಿಪ್. ಇದು ನಿಜವೋ ಸುಳ್ಳೋ ಎಂಬುದು ಭವಿಷ್ಯದಲ್ಲಿ ಕನ್ಫರ್ಮ್ ಆಗಲಿದೆ. ಈ ಮಧ್ಯೆ , ಸಂತೋಷ್ ಬಿಗ್ ಬಾಸ್ ಶೋಗೆ ಬರುವ ಮುಂಚೆ ಮಾಡಿರುವ ಹಲವು ರೀಲ್‌ಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅವು ಸಖತ್ ಸದ್ದು ಮಾಡುತ್ತಿವೆ.
ಹೌದು, ವರ್ತೂರು ಸಂತೋಷ್ ಮಾತನಾಡಿರುವ ಹಲವು ರೀಲ್ಸ್‌ಗಳು, ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗತೊಡಗಿವೆ. ಅದರಲ್ಲೊಂದು ರೀಲ್ಸ್‌ನಲ್ಲಿ ಸಂತೋಷ್ ಆಡಿರುವ ಮಾತು ಭಾರೀ ಗಮನಸೆಳೆಯುತ್ತಿದೆ. 'ಕೆಲವರು ನನ್ನ ಬಗ್ಗೆ ಅಪ್ಪನ ದುಡ್ಡಲ್ಲಿ ಶೋಕಿ ಮಾಡ್ತಾನೆ ಅಂತ ಹೇಳ್ತಾರೆ. ಹೌದು, ನಾನು ನನ್ನ ಅಪ್ಪನ ದುಡ್ಡಲ್ಲಿ ಶೋಕಿ ಮಾಡ್ತೀನಿ, ನೀವ್ಯಾರಾದ್ರೂ ನನ್ನ ಅಪ್ಪಂಗೆ ಹುಟ್ಟಿದ್ರೆ ನೀವು ಬಂದು ಶೋಕಿ ಮಾಡಿ, ಅಲ್ವಾ' ಎಂದು ಸಂತೋಷ್ ಹೇಳಿರುವ ಮಾತನ್ನು ಹಲವರು ಹೇಳಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಮದುವೆ ದಿನ ಡ್ರಗ್ಸ್ ಮಾಡ್ಕೊಂಡು ಬಂದಿದ್ದ ವರ್ತೂರ್ ಸಂತೋಷ್, ಎರಡೇ ದಿನಕ್ಕೆ ಡಿವೋರ್ಸ್ ಅಂತಾರೆ; ಮಾವ ಕಣ್ಣೀರು
ವರ್ತೂರು ಸಂತೋಷ್ ತಾವು ಬಿಗ್ ಬಾಸ್ ಮನೆಯಿಂದ ಶೋ ಬಿಟ್ಟು ಹೊರನಡೆಯುವ ನಿರ್ಧಾರ ಪ್ರಕಟಿಸಿ ಸ್ವಲ್ಪ ದಿನಗಳ ಹಿಂದೆ ಸಖತ್ ಸುದ್ದಿಯಾಗಿದ್ದರು. ಆದರೆ, ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಹೋಸ್ಟ್ ಸುದೀಪ್ ಅವರು 'ನಿಮಗೆ ಕುರುನಾಡ ಜನರು ಇರಬೇಕು ಎಂದು ವೋಟ್ ಮಾಡಿದ್ದಾರೆ. ನಾನು ಜನರ ವಿರುದ್ಧ ಹೋಗಲಾರೆ' ಎಂದು ಹೇಳಿ ವರ್ತೂರು ಸಂತೋಷ್ ಮಾತಿಗೆ ತೀವ್ರ ಬೇಸರ ಹೊರಹಾಕಿ ಶೋ ಬಿಟ್ಟು ವೇದಿಕೆಯಿಂದ ಹೊರಕ್ಕೆ ನಡೆದಿದ್ದರು. ಬಳಿಕ, ಭಾಗ್ಯಲಕ್ಷ್ಮೀ ಸೀರಿಯಲ್ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್ ಬಿಗ್ ಬಾಸ್ ಮನೆಗೆ ಬಂದು ಸಂತೋಷ್ ಮನವೊಲಿಸಲು ಹರಸಾಗಸ ಪಟ್ಟಿದ್ದರು.
ಮಂಡ್ಯ ಜನತೆ ಮನೆಗೆ ಬಂದ್ರೆ ಅವಿವಾ ರೂಮ್‌ಗೆ ಓಡೋಗ್ತಾಳೆ: ಪತ್ನಿ ಬಗ್ಗೆ ಅಭಿಷೇಕ್ ಅಂಬರೀಶ್
ಸಂತೋಷ್ ಅಮ್ಮ ಬಿಗ್ ಬಾಸ್ ಮನೆಯೊಳಕ್ಕೆ ಬಂದು ಸಂತೋಷ್ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ಈ ವಾರದ ಕೊನೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಶನಿವಾರ ಪ್ರಸಾರವಾಗುವ 'ಕಿಚ್ಚನ ಪಂಚಾಯಿತಿ' ಹಾಗೂ ಭಾನುವಾರದ 'ಸೂಪರ್ ಸಂಡೆ ವಿತ್ ಸುದೀಪ' ಸಂಚಿಕೆಯಲ್ಲಿ ವರ್ತೂರು ಸಂತೋಷ್ ನಿರ್ಧಾರ ಏನು ಎಂಬುದು ತಿಳಿಯಬಹುದು. ಅದಕ್ಕೂ ಮೊದಲು ಏನೇನಾಗುತ್ತೋ ಬಲ್ಲವರಾರು?