- Home
- Entertainment
- TV Talk
- ಗಿಲ್ಲಿ ಗೆಲುವನ್ನು ಸಹಿಸದ ರಾಜಮಾತೆ! ನಾನು ಆ ಇಬ್ಬರನ್ನಂತೂ ಕ್ಷಮಿಸೊಲ್ಲವೆಂದ ಅಶ್ವಿನ್ ಗೌಡ
ಗಿಲ್ಲಿ ಗೆಲುವನ್ನು ಸಹಿಸದ ರಾಜಮಾತೆ! ನಾನು ಆ ಇಬ್ಬರನ್ನಂತೂ ಕ್ಷಮಿಸೊಲ್ಲವೆಂದ ಅಶ್ವಿನ್ ಗೌಡ
ಬಿಗ್ ಬಾಸ್ ಮನೆಯ ರಾಜಮಾತೆ ಅಶ್ವಿನಿ ಗೌಡ ಫುಲ್ ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣ ಗಿಲ್ಲಿ ನಟನ ಗೆಲುವು. ನಲ್ಲಿ ಮೂಳೆ ಗಿಲ್ಲಿ ನಾನು ಬಡವರ ಮನೆ ಹುಡುಗ ಅಂತ ಬೋರ್ಡ್ ಹಾಕ್ಕೊಂಡು ಗೆದ್ದಿದ್ದಾನೆ ಅಂತ ಅಶ್ವಿನಿ ಗೌಡ ಕೌಂಟರ್ ಕೊಟ್ಟಿದ್ದಾರೆ. ಗಿಲ್ಲಿ ಗೆಲುವಿನ ಬಗ್ಗೆ ಅಶ್ವಿನಿ ಗೌಡ ಹೇಳಿದ್ದೇನು?

ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಅಶ್ವಿನಿ ಗೌಡ
ಬಿಗ್ ಬಾಸ್ ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಅಶಾಂತಿಯೇ ಬಿಗ್‌ಬಾಸ್ ಮನೆಯ ಲಕ್ಷಣ. ಇಂಥಾ ಮನೆಗೆ 112 ದಿನದ ಹಿಂದೆ ರಾಜಮಾತೆಯ ಎಂಟ್ರಿ ಆಗಿತ್ತು. ಅಂದೇ ಬಿಗ್‌ಬಾಸ್ ಕಿರೀಟ ಈ ರಾಜಮಾತೆ ಮುಡಿಗೇರುತ್ತೆ ಅನ್ನೋ ನಿರೀಕ್ಷೆ ಹುಟ್ಟಿತ್ತು. ಆದ್ರೆ ಅದು ಸುಳ್ಳಾಗಿದೆ. ರಾಜಮಾತೆ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.
ಗಿಲ್ಲಿ ನಟ ಬಿಗ್‌ಬಾಸ್, ಸಹಿಸದ ಅಶ್ವಿನಿ..!
ಗಿಲ್ಲಿ ನಟ ಬಿಗ್‌ಬಾಸ್ ಗೆದ್ದಿದ್ದಕ್ಕೆ ಇಡೀ ಊರಿಗೆ ಊರೇ ಸಂಬ್ರಮಿಸುತ್ತಿದೆ. ಆದ್ರೆ ರಾಜಮಾತೆ ಅಶ್ವಿನಿ ಗೌಡ ಮಾತ್ರ ಬೇಸರ ಪಟ್ಟಿದ್ದಾರೆ. ಅದಕ್ಕೆ ಕಾರಣ ಗಿಲ್ಲಿ ಬಡವರ ಮನೆ ಹುಡುಗ ಅನ್ನೋ ಟ್ಯಾಗ್ಲೈನ್ ಹಾಕೊಂಡು ಗೆದ್ದ ಅನ್ನೋ ಕಾರಣ. ಕೃಷಿಕ ಕುಟುಂಬದಿಂದ ಬಂದ ಗಿಲ್ಲಿ ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್.
ಗಿಲ್ಲಿ ಗೆಲುವನ್ನು ಒಪ್ಪದ ರಾಜಮಾತೆ
ಗಿಲ್ಲಿ ನಟ ಬಡವನೋ ಶ್ರೀಮಂತನೋ ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಆದ್ರೆ ಗಿಲ್ಲಿ ಗೆಲುವನ್ನ ರಾಜಮಾತೆ ಅಶ್ವಿನಿ ಗೌಡ ಒಪ್ಪಿಲ್ಲ. ಗಿಲ್ಲಿ ಬಡವ ಅಂತ ಬೋರ್ಡ್ ಹಾಕಿಕೊಂಡು ಗೆದ್ದಿದ್ದಾನೆ. ಅದು ನನಗೆ ಇಷ್ಟ ಆಗಿಲ್ಲ ಅಂತ ಅಶ್ವಿನಿ ಹೇಳಿದ್ದಾರೆ.
ರಜತ್ & ಚೈತ್ರಾರನ್ನು ಕ್ಷಮಿಸೊಲ್ಲವೆಂದ ಅಶ್ವಿನಿ ಗೌಡ
ಅಶ್ವಿನಿ ಗೌಡ ಒಂಟಿಮನೆಯ ಹೆಣ್ಣುಹುಲಿ. ಅಶ್ವಿನಿ ಬಿಗ್‌ಬಾಸ್ ಮನೆಯಲ್ಲಿ 112 ದಿನ ಇದ್ದು ಬಂದಿದ್ದಾರೆ. ಈ ಜರ್ನಿಯಲ್ಲಿ ನಾನು ಎಲ್ಲರನ್ನೂ ಕ್ಷಮಿಸುತ್ತೇನೆ. ಆದ್ರೆ ರಜತ್ ಹಾಗು ಚೈತ್ರರನ್ನ ಕ್ಷಮಿಸಲ್ಲ ಎಂದಿದ್ದಾರೆ ಅಶ್ವಿನಿ ಗೌಡ.
ಟ್ರೋಲ್ ಬಗ್ಗೆಯೂ ಮನಬಿಚ್ಚಿ ಮಾತಾಡಿದ ಅಶ್ವಿನಿ ಗೌಡ
ಅಶ್ವಿನಿ ಗೌಡ ಕನ್ನಡ ಪರ ಹೋರಾಟಾಗಾರ್ತಿ. ಆದ್ರೆ ಬಿಗ್‌ಬಾಸ್ ಮನೆಯ ಟಾಸ್ಕ್ ಒಂದರಲ್ಲಿ ಕನ್ನಡವನ್ನ ತಪ್ಪಾಗಿ ಬರೆದಿದ್ದಾರೆ ಅಂತ ಟ್ರೋಲ್ ಆಗುತ್ತಿದ್ದಾರೆ. ಕನ್ನಡದ ಹೋರಾಟಗಾರ್ತಿ ಅಂತ ಮುಖವಾಡ ಹಾಡಕಿಕೊಂಡು ಕನ್ನಡವನ್ನ ತಪ್ಪಾಗಿ ಬರೆದಿದ್ದಾರೆ ಅಂತ ಅಶ್ವಿನಿಯನ್ನ ಟ್ರೋಲ್ ಮಾಡಲಾಗ್ತಿದೆ. ಈ ಬಗ್ಗೆಯೂ ಅಶ್ವಿನಿ ಮಾತನಾಡಿದ್ದಾರೆ.
ಒಂದು ಕಡೆ ಖುಷಿ, ಮತ್ತೊಂದು ಕಡೆ ಬೇಜಾರಿದೆ ಎಂದ ಅಶ್ವಿನಿ ಗೌಡ
ಫಿನಾಲೆಯಲ್ಲಿ ಟ್ರೋಫಿ ಗೆಲ್ಲಬೇಕು ಎಂದುಕೊಂಡಿದ್ದ ಅಶ್ವಿನಿ ಅವರಿಗೆ ನಿರಾಸೆ ಆಗಿದೆ. ‘ಒಂದು ಕಡೆ ಖುಷಿ ಇದೆ. ಇನ್ನೊಂದು ಕಡೆ ಬಹಳ ಬೇಜಾರು ಇದೆ ಎಂದಿದ್ದಾರೆ ಅಶ್ವಿನಿ ಗೌಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

