ಬಿಗ್‌ಬಾಸ್ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿ ಗಿಲ್ಲಿ ನಟನ ಮೂರು ಆಸೆಗಳ ಪೈಕಿ ಒಂದನ್ನು ಈಡೇರಿಸಲಾಗಿದೆ. ಅವರ ಬೇಡಿಕೆಯಂತೆ 'ನಲ್ಲಿ ಮೂಳೆ' ಊಟವನ್ನು ನೀಡಲಾಗಿದ್ದು, ಊಟದ ನಂತರ ಒಂದು ಗಂಟೆ ನಿದ್ರಿಸಲು ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಇಡೀ ಬಿಗ್‌ಬಾಸ್ ಮನೆ ಸಂಪೂರ್ಣ ಸೈಲೆಂಟ್ ಆಗಿತ್ತು.
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಸ್ಪರ್ಧಿಗಳಿಗೆ ಕೊನೆಯ ವಾರ. ಈ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದ್ದು, ಅದಕ್ಕೂ ಮುನ್ನ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ. ಮಿಡ್‌ವೀಕ್ ಎಲಿಮಿನೇಷನ್‌ಗೆ ವೋಟ್ ಮಾಡಲು ಇಂದ ಕೊನೇ ದಿನ. ಇದರ ನಡುವೆ ಬಿಗ್‌ಬಾಸ್ ಫಿನಾಲೆ ವೀಕ್‌ನಲ್ಲಿ ಈಗಾಗಲೇ ಘೋಷಿಸಿರುವಂತೆ ಸ್ಪರ್ಧಿಗಳ ಅಸೆಗಳನ್ನು ಈಡೇರಿಸಲು ಮುಂದಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ತಲಾ ಮೂರು ಆಸೆಯನ್ನು ತಿಳಿಸುವಂತೆ ಸೂಚಿಸಲಾಗಿತ್ತು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ಬಿಗ್‌ಬಾಸ್ ಮುಂದೆ ಇಟ್ಟಿದ್ದಾರೆ.
ಗಿಲ್ಲಿ ನಟ ಬಹಳ ಸ್ಪೆಷಲ್ ಆಗಿ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಆಸೆಯನ್ನು ತಿಳಿಸಿದರು. ಅದರಂತೆ, ನನಗೆ ‘ನಲ್ಲಿ ಮೂಳೆ’ ಅಂದ್ರೆ ತುಂಬಾ ಇಷ್ಟ, ಅದನ್ನ ಹೊಟ್ಟೆ ತುಂಬಾ ತಿನ್ನಬೇಕು. ತಿಂದ ಬಳಿಕ ಒಂದು ಗಂಟೆ ಮಲಗಲು ಅವಕಾಶ ಕೊಡಬೇಕು. ಮಲಗಿದಾಗ ನಾಯಿ ಬೊಗಳುವ ಸೌಂಡ್ ಬರಬಾರದು ಎಂದು ಬೇಡಿಕೆ ಇಟ್ಟಿದ್ದರು.
ಆ ಬಳಿಕ ಬಿಗ್‌ಬಾಸ್ ಮನೆಯಲ್ಲಿರುವ ಆನೆಯ ಮೇಲೆ ಒಮ್ಮೆ ಕುಳಿತುಕೊಳ್ಳಬೇಕು ಹಾಗೂ ಬಿಗ್‌ಬಾಸ್ ಮನೆಯ ಟಿವಿಯಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಮೂರು ಆಸೆಗಳ ಪೈಕಿ ಒಂದನ್ನು ಬಿಗ್‌ಬಾಸ್ ಈಡೇರಿಸುವುದಾಗಿ ತಿಳಿಸಿದ್ದರು.
ಅದರಂತೆ ಬಿಗ್‌ಬಾಸ್ ಗಿಲ್ಲಿ ನಟನ ನಲ್ಲಿ ಮೂಳೆ ಆಸೆಯನ್ನು ಈಡೇರಿಸಿದ್ದಾರೆ. ಮಂಗಳವಾರ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಗಡದ್ದಾಗಿ ನಲ್ಲಿ ಮೂಳೆ ತಿಂದಿರುವ ವಿಡಿಯೋ ವೈರಲ್ ಆಗಿದೆ. ಗಿಲ್ಲಿ ಮಟನ್ ಊಟವನ್ನು ಭರ್ಜರಿಯಾಗಿ ಬಾರಿಸುತ್ತಿದ್ದರೆ, ಕಾವ್ಯಾ ಹಾಗೂ ರಕ್ಷಿತಾ ಅದನ್ನು ನೋಡುತ್ತಿರುವುದು ಕಂಡಿದೆ. ಗಿಲ್ಲಿ ನಲ್ಲಿಮೂಳೆಯನ್ನು ಆಸ್ವಾದಿಸುತ್ತಾ ತಿನ್ನುವಾಗ, ಅಶ್ವಿನಿ ಗೌಡ, ರಕ್ಷಿತಾ ಹಾಗೂ ಕಾವ್ಯಾ ಶೈವ ಆತನನ್ನೇ ನೋಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಲ್ಲಿಮೂಳೆ ತಿನ್ನುವ ದೃಶ್ಯವನ್ನು ತಮಿಳಿನಲ್ಲಿ ಕೈದಿ ಸಿನಿಮಾದಲ್ಲಿ ನಟ ಕಾರ್ತಿಕ್ ಊಟ ಮಾಡುವ ರೀತಿಗೆ ಹೋಲಿಸಿ ಪೋಸ್ಟ್ ಮಾಡಲಾಗಿದೆ.

1 ಗಂಟೆ ನಿದ್ರೆ ಹೊಡೆದ ಗಿಲ್ಲಿ, ಮನೆ ಫುಲ್ ಸೈಲೆಂಟ್!
ಗಿಲ್ಲಿ ಸೈಲೆಂಟ್ ಆದ್ರೆ ಬಿಗ್‌ಬಾಸ್ ಮನೆ ಹೇಗಿರಲಿದೆ ಎನ್ನುವ ಸಣ್ಣ ಝಲಕ್ ಸಿಕ್ಕಿದೆ. ನಲ್ಲಿ ಮೂಳೆ ಊಟ ಮಾಡಿದ ಬಳಿಕ ಗಿಲ್ಲಿಗೆ ಬಿಗ್‌ಬಾಸ್ 1 ಗಂಟೆ ನಿದ್ರೆ ಮಾಡುವ ಅವಕಾಶ ನೀಡಿದ್ದರು. ಅದರಂತೆ ಗಿಲ್ಲಿ ಬೆಡ್‌ಮೇಲೆ ನಿದ್ರಿಸುತ್ತಿರುವಾಗ ಬಂದ ಕಾವ್ಯಾ, 'ಬಿಗ್‌ಬಾಸ್‌ಗೆ ಥ್ಯಾಂಕ್ಸ್ ಹೇಳ್ದಾ ಹೇಳು..' ಎಂದಿದ್ದಾರೆ. ಅದಕ್ಕೆ ಗಿಲ್ಲಿ, 'ನಿದಗದೆ ಮಾಡ್ಬಿಟ್ಟು ಹೇಳ್ತಿನಿ..' ಎಂದು ಹೇಳಿದ್ದಾರೆ. 1 ಗಂಟೆ ಗಿಲ್ಲಿ ನಿದ್ರೆ ಮಾಡುವಾಗ ಇಡೀ ಮನೆ ಫುಲ್ ಸೈಲೆಂಟ್ ಆಗಿತ್ತು. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿದ್ದರು. ಕಾವ್ಯಾ ಹಾಗೂ ರಘು ತಮ್ಮದೇ ಆಟದಲ್ಲಿ ಬ್ಯುಸಿಯಾಗಿದ್ದರೆ, ರಘು ಅವರನ್ನು ನೋಡುತ್ತಾ ಕುಳಿತಿದ್ದರು.


