Bhagyalakshmi: ತಾಂಡವ್‌ಗೆ ನಕಲಿ ಅಪ್ಪನಾಗಿ ಬಿಗ್‌ಬಾಸ್ ಮಂಜಣ್ಣ!

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯಂಗೆ ಚಳ್ಳೆಹಣ್ಣು ತಿನ್ನಿಸಿ ಶ್ರೇಷ್ಠಾನ ಮದುವೆ ಆಗಲಿಕ್ಕೆ ಹೊರಟಿದ್ದಾನೆ ತಾಂಡವ್. ಮದುವೆ ಮಾತುಕತೆ ನಕಲಿ ಅಪ್ಪ ಅಮ್ಮನ್ನೂ ಕರೆತಂದಿದ್ದಾನೆ. ಮಂಜಣ್ಣ ನಕಲಿ ಅಪ್ಪನಾಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದೈತೆ ಮಾರಿ ಹಬ್ಬ ಅಂತಿದ್ದಾರೆ ವೀಕ್ಷಕರು. 

big boss Manju Pavagada enters Bhagyalakshmi serial as fake father of Thandav bni

ಬಿಗ್‌ಬಾಸ್ ವಿನ್ನರ್ ಮಂಜಣ್ಣ ಯಾರಿಗೆ ಗೊತ್ತಿಲ್ಲ. ಮಜಾ ಟಾಕೀಸ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಈ ಟ್ಯಾಲೆಂಟೆಡ್ ನಟ ಆಮೇಲೆ ಒಂದು ಸೀರಿಯಲ್‌ನಲ್ಲಿ ಮನೆಕೆಲಸದವನ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಯಾವ ಪಾತ್ರಕ್ಕೆ ಬಣ್ಣ ಹಚ್ಚಿದರೂ ಅದಕ್ಕೆ ಜೀವ ತುಂಬಬಲ್ಲ ಎನರ್ಜಿ ಇರೋ ಈ ನಟ ಸದ್ಯಕ್ಕೀಗ ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಎಡಗಾಲಿಟ್ಟು ಎಂಟ್ರಿ ತಗಂಡಿದ್ದಾರೆ. ಅಂದ್ರೆ ಮತ್ತೇನಿಲ್ಲ. ಕೊಂಚ ಗ್ರೇ ಶೇಡ್ ಜೊತೆಗೆ ಕಾಮಿಡಿ ಟಚ್ ಇರೋ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಯೆಸ್ ನಮ್ ಭಾಗ್ಯ ಗಂಡ ತಾಂಡವ್‌ ಈಗ ಅಡಕತ್ತರಿಯಲ್ಲಿ ಸಿಕ್ಕಾಕ್ಕೊಂಡಿದ್ದಾನೆ. ಒಂದು ಕಡೆ ತನ್ನ ಇಷ್ಟ ಮೀರಿ ಹೆಂಡತಿ ಭಾಗ್ಯ ಸ್ಕೂಲಿಗೆ ಬಂದಿದ್ದಾಳೆ. ಮಗಳ ಕ್ಲಾಸಲ್ಲೇ ಕೂತು ಒಂಭತ್ತನೇ ಕ್ಲಾಸ್ ಪಾಠ ಹೇಳಿಸಿಕೊಳ್ತಿದ್ದಾಳೆ. ತನ್ನೆಲ್ಲ ದುಷ್ಟತನ ಅವಳಿಗೆ ಈಗ ಅರ್ಥವಾಗಿದೆ. ಅಮಾಯಕಿ, ಮುಗ್ಧೆ, ಪೆದ್ದಿ ಅಂತೆಲ್ಲ ಭಾವಿಸಿದ್ದ ಭಾಗ್ಯ ಈಗ ಸಿಡಿದೆದ್ದಿದ್ದಾಳೆ. ಇದೊಂದು ಟಾರ್ಚರ್ ಆದರೆ ತನ್ನ ಅಪ್ಪ, ಅಮ್ಮ ಭಾಗ್ಯ ಬೆಂಗಾವಲಿಗೆ ನಿಂತಿರೋ ಕಾರಣ ತಾಂಡವ್‌ಗೆ ಏನೂ ಕಿಸಿಯೋದಕ್ಕೆ ಆಗ್ತಾ ಇಲ್ಲ.

ಒಂದು ಕಡೆ ಮನೆ, ಹೆಂಡತಿ, ಮಗಳು, ಅಪ್ಪ ಅಮ್ಮನ ಟಾರ್ಚರ್ ಆದ್ರೆ ಇನ್ನೊಂದು ಕಡೆ ತನ್ನ ಪ್ರೇಯಸಿ ಶ್ರೇಷ್ಠಾ ಟಾರ್ಚರ್ ಶುರುವಾಗಿದೆ. ತಾಂಡವ್ ಆಫೀಸಲ್ಲಿ ಕೆಲಸ ಮಾಡೋ ಶ್ರೇಷ್ಠಾಗೆ ಈ ತಾಂಡವ್‌ ಮೇಲೆ ಲವ್ವಾಗಿ ಬಹಳ ದಿನ ಆಗಿದೆ. ಇವ್ರಿಬ್ರೂ ಮದುವೆ ಆಗೋ ನಾಟ್ಕ ಮಾಡಿದ್ದು, ಕೊನೇ ಗಳಿಗೆಯಲ್ಲಿ ಅದು ಹೊಗೆ ಹಾಕಿಸ್ಕೊಂಡಿದ್ದು ಎಲ್ಲ ಮುಗಿದಿದೆ. ಈಗ ಇದಕ್ಕೆ ಉಪ್ಪು ಕಾರ ಸುರೀತಿಕ್ಕೆ ಶ್ರೇಷ್ಠ ಅಪ್ಪ ಅಮ್ಮ ಬಂದಿದ್ದಾರೆ. ಮಗಳಿಗೆ ಮದುವೆ ಮಾಡ್ಲೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಲಕ್ಷ್ಮಿ ಬಾರಮ್ಮ ಸೀರಿಯಲ್ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ, ಫ್ಯಾನ್ಸ್ ಪ್ರೀತಿಯ ವಿಶ್

ಈ ಕಡೆ ತಾಂಡವ್‌ಗೆ ಶ್ರೇಷ್ಠ ಜೊತೆಗೆ ರಿಲೇಶನ್ ಶಿಪ್ ಇಷ್ಟ ಇದ್ದರೂ ಅಮ್ಮನ ಭಯ ಸಿಕ್ಕಾಪಟ್ಟೆ ಇದೆ. ಆದರೆ ಶ್ರೇಷ್ಠ ತಂದೆ ತಾಯಿ ಮದುವೆ ಮಾತುಕತೆಗೆ ತಾಂಡವ್ ಅಪ್ಪ ಅಮ್ಮನನ್ನು ಕರೀತಿದ್ದಾರೆ. ಈಗಾಗಲೇ ಮದುವೆ ಆಗಿ ಎರಡು ಮಕ್ಕಳಿರೋ ತಾನು ಮತ್ತೊಂದು ಹುಡುಗಿ ಮದುವೆ ಆಗ್ತಿರೋದು ಗೊತ್ತಾದರೆ ತಾಂಡವ್ ಅಮ್ಮ ಕುಸುಮ ಮಗನಿಗೆ ಯಾವ ಶಿಕ್ಷೆ ಕೊಡಲೂ ಹೇಸೋದಿಲ್ಲ. ಅಮ್ಮನಿಗೆ ತುಂಬ ಭಯ ಪಡುವ ತಾಂಡವ್ ಅಮ್ಮನನ್ನು ಈ ಮದುವೆಗೆ ಒಪ್ಪಿಸೋದು ಆಗದ ಮಾತು.

ಅದಕ್ಕೋಸ್ಕರ ಜಾಣೆ ಶ್ರೇಷ್ಠ ತಾಂಡವ್‌ಗೆ ನಕಲಿ ಅಪ್ಪ, ಅಮ್ಮನನ್ನು ಕರೆದುಕೊಂಡು ಬಂದಿದ್ದಾಳೆ.

ತಾಂಡವ್ ತಂದೆಯ ಪಾತ್ರದಲ್ಲಿ ಮಂಜು ಪಾವಗಡ ಕಾಣಿಸಿಕೊಂಡಿದ್ದಾರೆ. 'ಅಂತರಪಟ' ಧಾರಾವಾಹಿಯಲ್ಲಿ ಮಹೇಶ್‌ ಎನ್ನುವ ಪಾತ್ರ ಮಾಡುತ್ತಿರುವ ಮಂಜು ಅವರು ಈ ಸೀರಿಯಲ್‌ನಲ್ಲಿ ಸದ್ಯ ತಾಂಡವ್ ತಂದೆಯಾಗಿ ಬಣ್ಣ ಹಚ್ಚಿದ್ದಾರೆ. ಹಾಗಂದ ಮಾತ್ರಕ್ಕೆ ಇವರು ತಾಂಡವ್ ತಂದೆ ಧರ್ಮರಾಜ್ ಪಾತ್ರದಲ್ಲಿ ಕಾಣಿಸಿಕೊಳ್ತಿಲ್ಲ. ಶ್ರೇಷ್ಠ ಅಪ್ಪ-ಅಮ್ಮನ ಮುಂದೆ ತಾಂಡವ್‌ನ ತಂದೆಯಾಗಿ ಮಹೇಶ್ ಕಾಣಿಸಿಕೊಳ್ಳಲಿದ್ದಾರೆ. ಇದು ಒಂದು ದಿನದ ನಾಟಕ ಅಷ್ಟೇ. ಮಹೇಶ್ ತನ್ನ ತಂದೆಯಾಗಿ ನಟಿಸ್ತಿರೋದು ತಾಂಡವ್‌ಗೆ ಸಿಟ್ಟು ತಂದಿದೆ. ಆದರೆ ಬೇರೆ ವಿಧಿಯಿಲ್ಲದೆ ಏನೂ ಮಾಡಲಾಗದೆ ಅವನು ಸುಮ್ಮನಿದ್ದಾನೆ. ಶ್ರೇಷ್ಠ ಪಾಲಕರ ಮುಂದೆ ಮಹೇಶ್ ಏನೇನು ನಾಟಕ ಮಾಡ್ತಾನೆ ಅನ್ನೋ ಕುತೂಹಲ ವೀಕ್ಷಕರಿಗೂ ಇದೆ.

ಬ್ಯಾಕ್ ಲೆಸ್ ಬ್ಲ್ಯಾಕ್ ಗೌನಲ್ಲಿ ಮಿರಮಿರನೆ ಮಿಂಚಿದ ಕೌಸ್ತುಭ ಮಣಿ

ದುಡ್ಡಿಗಾಗಿ ಬಾಯಿ ಬಾಯಿ ಬಿಡೋ ಮಹೇಶನಾಗಿ ತಾಂಡವ್‌ಗೆ ನಕಲಿ ತಂದೆಯಾಗಿ ಮಂಜು ಪಾವಗಡ ಎಂಟ್ರಿಯನ್ನು ವೀಕ್ಷಕರು ಸಖತ್ ಮಜವಾಗಿ ವೆಲ್ಕಂ ಮಾಡಿದ್ದಾರೆ. ಮಂಜಣ್ಣ ಎಂಟ್ರಿ ಕೊಟ್ಟಿರೋ ಸ್ಟೈಲ್ ನೋಡಿಯೇ ಇನ್ಮೇಲೆ ತಾಂಡವ್ ಶ್ರೇಷ್ಠ ಕಥೆ ಗೋ...ವಿಂದ ಅಂತಿದ್ದಾರೆ ಜಾಣ ವೀಕ್ಷಕರು.

ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್, ಶ್ರೇಷ್ಠ ಪಾತ್ರದಲ್ಲಿ ಕಾವ್ಯಾ ಗೌಡ, ತಾಂಡವ್ ತಾಯಿ ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್ ಅಭಿನಯಿಸುತ್ತಿದ್ದಾರೆ.

 

Latest Videos
Follow Us:
Download App:
  • android
  • ios