ಬ್ಯಾಕ್ ಲೆಸ್ ಬ್ಲ್ಯಾಕ್ ಗೌನಲ್ಲಿ ಮಿರಮಿರನೆ ಮಿಂಚಿದ ಕೌಸ್ತುಭ ಮಣಿ
ನನ್ನರಸಿ ರಾಧೆ ಸೀರಿಯಲ್ ನಲ್ಲಿ ಪಾಪದ ಹುಡುಗಿಯಾಗಿ ನಟಿಸಿದ ಇಂಚರಾ ಆಲಿಯಾಸ್ ಕೌಸ್ತುಭ ಮಣಿ, ಇದೀಗ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದು, ಸದ್ಯ ತಮ್ಮ ಫೋಟೋ ಶೂಟ್ ಮೂಲಕವೇ ಸದ್ದು ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್ ನಾಯಕಿ ಇಂಚರಾ ಪಾತ್ರದ ಮೂಲಕ ಜನ ಮನ ಗೆದ್ದಿದ್ದ ನಟಿ ಕೌಸ್ತುಭ ಮಣಿ. ಈ ಸೀರಿಯಲ್ ನಲ್ಲಿ ಕೌಸ್ತುಭ ಮಧ್ಯಮ ಕುಟುಂಬದ ಹುಡುಗಿಯಾಗಿ ನಟಿಸಿದ್ದರು.
ನನ್ನರಸಿ ರಾಧೆ ಸೀರಿಯಲ್ (Nannarasi Radhe serial) ಬಳಿಕ ಕೌಸ್ತುಭ ತೆಲುಗು ಕಿರುತೆರೆಯಲ್ಲಿ ತುಂಬಾನೆ ಬ್ಯುಸಿಯಾಗಿದ್ದರು. ಅಲ್ಲಿ ಕೂಡ ಅವರು ಒಂದು ಜನಪ್ರಿಯ ಸೀರಿಯಲ್ ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದರು. ತಮ್ಮ ಮುದ್ದುಮುದ್ದಾದ ಮುಖ ಮತ್ತು ಮಾತುಗಳಿಂದಲೇ ಕೌಸ್ತುಭ ಜನಪ್ರಿಯತೆ ಗಳಿಸಿದ್ದರು.
ನನ್ನರಸಿ ರಾಧೆ ಸೀರಿಯಲ್ ಬಳಿಕ ನಟಿಯನ್ನೂ ಕನ್ನಡಿಗರು ನಿಜಕ್ಕೂ ಮಿಸ್ ಮಾಡುತ್ತಿದ್ದರು. ಆದರೆ ಇದೀಗ ನಟಿ (Kaustubha Mani) ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಸಹ ಜನಪ್ರಿಯ ನಾಯಕರ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ 'ರಾಮಾಚಾರಿ 2.0' ಚಿತ್ರಕ್ಕೆ ಇಂಚರ ಖ್ಯಾತಿಯ ಕೌಸ್ತುಭ ಮಣಿ ನಾಯಕಿಯಾಗಿ ನಟಿಸಿದ್ರು, ಇದೀಗ ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಜೊತೆಗೂ ಸಹ ಕೌಸ್ತುಭ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಮತ್ತು ಉಪೇಂದ್ರ ನಟಿಸಿರುವ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ 45 ಚಿತ್ರದಲ್ಲಿ ಕೌಸ್ತುಭ ಮಣಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆಗಿ ಆಕ್ಟೀವ್ ಆಗಿರುವ ಕೌಸ್ತುಭ ಮಣಿ, ಇತ್ತೀಚಿನ ದಿನಗಳಲಿ ವಿಭಿನ್ನ ರೀತಿಯ ಫೋಟೋಶೂಟ್ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ನಟಿಯ ಹೊಸ ಲುಕ್ ನೋಡಿ ಜನರು ಶಾಕ್ ಆಗಿದ್ದಾರೆ. ಹುಡುಗರು ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ಕೌಸ್ತುಭ ಮಣಿ ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹೈ ಸ್ಲಿಟ್, ಬ್ಯಾಕ್ ಲೆಸ್, ಬ್ಲ್ಯಾಕ್ ಗೌನ್ ಧರಿಸಿರುವ ಫೋಟೋಗಳನ್ನು ಶೇರ್ ಮಾಡಿದ್ದು, ಯಾವ ಬಾಲಿವುಡ್ ತಾರೆಗಳಿಗೂ ಕಮ್ಮಿ ಇಲ್ಲ ಎಂಬಂತೆ ನಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ಸುರಲೋಕದಿಂದ ಇಳಿದು ಬಂದ ಸುಂದರಿ, ಬಂಗಾರದಂತ ಸಿಂಗಾರದ ಸಿರಿ, ಈ ಕನ್ನಡದ ಮುದ್ದು ಕುವರಿ ಎಂದು ನಟಿಯ ಫೋಟೋಗೆ ಜನರು ಕಾಮೆಂಟ್ ಮಾಡಿದ್ದಾರೆ.. ಇನ್ನು ಕೆಲವರು ಅದ್ಭುತವಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿದ್ದಾರೆ.