ಲಕ್ಷ್ಮಿ ಬಾರಮ್ಮ ಸೀರಿಯಲ್ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ, ಫ್ಯಾನ್ಸ್ ಪ್ರೀತಿಯ ವಿಶ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಕರ್ನಾಟಕದ ಮನೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ಸೀರಿಯಲ್ ನಾಯಕಿ ಲಕ್ಷ್ಮಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಭೂಮಿಕಾ ರಮೇಶ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ವಯಸ್ಸಿಗೂ ಆಯಸ್ಸಿಗೂ ಹುಟ್ಟುಹಬ್ಬದ ಸೇತುವೆ ನಿನಗೆ ವಯಸ್ಸು ಹೆಚ್ಚಾದಂತೆ ಆಯಸ್ಸೂ ಹೆಚ್ಚಾಗಲಿ, ನನ್ನಿಂದ ನಿನಗೆ ಪ್ರೀತಿಯ ಹುಟ್ಟುಹಬ್ಬದ ಶುಭಾಶಯಗಳು ಸಿಸ್ಟರ್ ಎಂದು ನೇತ್ರಾ ಎಂಬ ಅಭಿಮಾನಿಯಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬರೆದು ವಿಶ್ ಮಾಡಿದ್ದಾರೆ.
ಲಕ್ಷ್ಮಿ ಪಾತ್ರದಲ್ಲಿ ನಟಿಸಿರುವ ನಟಿ ಭೂಮಿಕಾಗೆ ಸೀರಿಯಲ್‌ಗೆ ಬಂದಾಗ ಕೇವಲ 19 ವರ್ಷ ವಯಸ್ಸಾಗಿತ್ತು. ದಾರಾವಾಹಿಯಲ್ಲಿ ಮೊದಲ ಬಾರಿಗೆ ತನ್ನ ನಟನಾ ಕೌಶಲ್ಯವನ್ನು ತೋರಿಸುತ್ತಾ ಜನಕ್ಕೆ ಹತ್ತಿರವಾಗಿದ್ದಾರೆ ಲಡ್ಡು.
ಭೂಮಿಕಾಗೆ ನಟನಾ ಜಗತ್ತು ಹೊಸತು. ಆದರೆ ಭೂಮಿಕಾ ಕ್ಯಾಮೆರಾವನ್ನು ಎದುರಿಸುವುದು ಹೊಸದೇನಲ್ಲ. ಅವರು ಈ ಹಿಂದೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಅವರು ಒಂದು ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿರೋದು ವಿಶೇಷವಾಗಿದೆ.
2016ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್ (dancing star juniors) ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಆದರೆ, ಅವರು ವೈಯಕ್ತಿಕ ಕಾರಣಗಳಿಗಾಗಿ ಕಾರ್ಯಕ್ರಮದಿಂದ ಹೊರನಡೆದರು. ಅವರು ಈ ಹಿಂದೆ 2012ರಲ್ಲಿ ಜೀ ತೆಲುಗು ನೃತ್ಯ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದರು.
ಈಕೆ ಅತ್ಯುತ್ತಮ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು ಮತ್ತು ಅನೇಕ ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.
2021 ರಲ್ಲಿ, ಅವರು ತಮ್ಮ ಮೊದಲ ಆಲ್ಬಂ ಹಾಡು ಕೂಡ ಮಾಡಿದರು. ಭೂಮಿಕಾ ಇನ್ನೂ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ತನ್ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಮಾಡ್ತಿದ್ದಾರೆ.
ಇನ್ನು ಭೂಮಿಕಾ ಅವರಿಗೆ ಪಿಜ್ಜಾ ಬರ್ಗರ್ ಇಷ್ಟವಿಲ್ಲ. ಕಪ್ಪು ಬಣ್ಣವೆಂದರೆ ಇಷ್ಟವಂತೆ. ಪರ್ವತಗಳು , ಹಳ್ಳಿ ಜೀವನ ತುಂಬಾ ಇಷ್ಟವಂತೆ.
ಭೂಮಿಕಾಗೆ ನಟಿ ಸೌಂದರ್ಯ ಅಂದರೆ ತುಂಬಾ ಇಷ್ಟವಂತೆ. ಅವರು ಮಾಡಿರುವ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನ ಆಸೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.