ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯ ಭೂಮಿಕಾ ಮತ್ತು 'ಅಣ್ಣಯ್ಯ' ಧಾರಾವಾಹಿಯ ಪಾರ್ವತಿ ತೆರೆಯ ಮೇಲೆ ಒಂದಾಗಿದ್ದಾರೆ. ಶಿವು ಮೇಲಿನ ಪ್ರೀತಿಯ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಪಾರ್ವತಿ, ಭೂಮಿಕಾಳ ಬಳಿ ಸಲಹೆ ಕೇಳಲು ಹೋಗಿದ್ದಾಳೆ. ಈ ಜೋಡಿ ವೀಕ್ಷಕರ ಮೆಚ್ಚುಗೆ ಗಳಿಸಿದೆ.  

ಝೀ ಕನ್ನಡದಲ್ಲಿ (Zee Kannada) ಬರೋ ಪ್ರತಿಯೊಂದು ಧಾರಾವಾಹಿಗಳು ತನ್ನ ಕಥೆಯಿಂದ ಜನರನ್ನು ಹೇಗೆ ರಂಜಿಸುತ್ತಿದೆಯೋ ಅದೇ ರೀತಿ, ಸೀರಿಯಲ್ ಪಾತ್ರಗಳು ಸಹ ವಿಭಿನ್ನವಾಗಿ, ವಿಶೇಷವಾಗಿದ್ದು, ಪಾತ್ರಗಳು ಕೇವಲ ಪಾತ್ರಗಳಾಗಿ ಉಳಿಯದೆ ನಮ್ಮ ಮನೆಯಲ್ಲೂ ಒಬ್ಬ ಸದಸ್ಯರು ಎನ್ನುವಂತೆ ವೀಕ್ಷಕರು ಇಷ್ಟಪಡುತ್ತಾರೆ. ಅದರಲ್ಲೂ ಝೀ ಕನ್ನಡದ ಜನಪ್ರಿಯ ಸೀರಿಯಲ್ ಗಳ (popular serials) ನಾಯಕಿಯರಾದ ಭೂಮಿಕಾ ಹಾಗೂ ಪಾರ್ವತಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಇಬ್ಬರದ್ದೂ ವಿಭಿನ್ನ ಪಾತ್ರಗಳು, ಗುಣ, ಅಭಿವ್ಯಕ್ತಿ ಎಲ್ಲವೂ ವಿಭಿನ್ನ ಆದರೆ, ತಮ್ಮ ಪಾತ್ರಗಳ ಮೂಲಕವೇ ಮೋಡಿ ಮಾಡುತ್ತಿದ್ದಾರೆ ಈ ನಾಯಕಿಯರು. 

ಅಣ್ಣಯ್ಯದಲ್ಲಿ ಕನ್ನಡ ಭಾಷಾ ಮಹತ್ವ ಹೇಳಿದ ನಿಶಾ ರವಿಕೃಷ್ಣನ್ ಕನ್ನಡತಿಯೇ ಅಲ್ಲ, ಹಾಗಿದ್ರೆ ಎಲ್ಲಿಯವರು?

ಇದೀಗ ವೀಕ್ಷಕರ ಮೋಸ್ಟ್ ಫೇವರಿಟ್ ನಾಯಕಿಯರನ್ನು (most favorite heroines) ತೆರೆ ಮೇಲೆ ಜೊತೆಯಾಗಿ ನೋಡುವ ಸನ್ನಿವೇಶ ಸೃಷ್ಟಿಯಾಗಿದೆ. ಅಷ್ಟಕ್ಕೂ ಆಗ್ತಿರೋದೇನು? ಭೂಮಿಕಾ ಮತ್ತು ಪಾರ್ವತಿ ಜೊತೆಯಾಗಿರೋದಾದ್ರು ಯಾಕೆ ? ಅದಕ್ಕೆ ಉತ್ತರ ಪ್ರೊಮೋದಲ್ಲಿದೆ. ಪರಿಸ್ಥಿಯ ಕೈಗೊಂಬೆಯಾಗಿದ್ದ ಪಾರು, ತಾನು ಪ್ರೀತಿಸಿದ ಹುಡುಗನಿಂದ ಮೋಸ ಹೋಗಿ, ಅಪ್ಪನ ಬಲವಂತಕ್ಕೆ ಶಿವು ಕೈ ಹಿಡಿದಿದ್ದಾಳೆ. ಆದರೆ ಸಮಯ ಕಳೆದಂತೆ, ಶಿವುನ ಗುಣ, ನಡತೆ, ಹೆಣ್ಣು ಮಕ್ಕಳ ಮೇಲೆ ಇಟ್ಟಿರುವ ಗೌರವ, ಕೊನೆಗೆ ತನ್ನನ್ನು ಮಾವ ಎಷ್ಟು ಪ್ರೀತಿ ಮಾಡುತ್ತಾನೆ ಅನ್ನೋದರ ಅರಿವಾಗುತ್ತಿದ್ದಂತೆ, ಪಾರುಗೆ (Paaru of Annayya) ಶಿವುನ ಮೇಲೆ ನಿಧಾನವಾಗಿ ಪ್ರೀತಿ ಹುಟ್ಟಿಕೊಳ್ಳುತ್ತಿದೆ. ಆದರೆ ಪಾರು ಹೃದಯ ಒಪ್ಪಿಕೊಂಡ ಪ್ರೀತಿಯನ್ನು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ, ಇನ್ನೂ ಕೂಡ ಯಾಕೆ ತಾನು ಎಲ್ಲಾ ವಿಷಯದಲ್ಲೂ ಮಾವನ ಪರ ನಿಲ್ಲುತ್ತಿದ್ದೇನೆ, ಮಾವನಿಗಾಗಿ ನಾನ್ಯಾಕೆ ಹೀಗೆಲ್ಲಾ ಆಡುತ್ತಿದ್ದೇನೆ ಅನ್ನೋದೆ ಗೊಂದಕ್ಕೀಡು ಮಾಡಿದೆ. ತನ್ನ ಗೊಂದಲವನ್ನು ನಿವಾರಣೆ ಮಾಡಲು ಪಾರು ಕಂಡುಕೊಂಡ ಮಾರ್ಗವೇ ಭೂಮಿಕಾ ಮೇಡಂ. 

ಛಾಯಾ ಸಿಂಗ್ 12 ವರ್ಷಗಳ ದಾಂಪತ್ಯ; 10 ದಿನ ಒಟ್ಟಿಗೆ ಕಳೆಯೋದೂ ಕಷ್ಟ!

ಒಂದೇ ವಾಹಿನಿಯ ಸೀರಿಯಲ್ ಗಳು ಎಂದರೆ ಎಲ್ಲರಿಗೂ ಸಂಬಂಧಿಗಳಂತೆ ಇರೋದು. ಹಾಗಾಗಿ, ಇದೀಗ ಪಾರುಗೆ ತನ್ನ ಮನಸಿನ ಗೊಂದಲವನ್ನು ಹೇಳಿಕೊಳ್ಳೋಕೆ ನೆರವಾಗಿದ್ದು, ಭೂಮಿಕಾ (Bhoomika of Amruthadhare) ಮೇಡಂ. ಹೌದು ಸೀತಾಳ ಗೆಳತಿಯಾಗಿದ್ದ ಭೂಮಿಕಾ, ಪಾರುಗೆ ಮೇಡಂ. ಈಗ ಬೆಟ್ಟದಷ್ಟು ಗೊಂದಲವನ್ನು ಹೊತ್ತಿರುವ ಪಾರುಗೆ ಭೂಮಿಕಾ ಮಾತೆ ಮದ್ದಾಗುತ್ತದೆ. ನಮ್ಮ ಭೂಮಿಕಾ ಮೇಡಂ ಮಾತಾಡಿದ್ರು ಅಂದ್ರೆ, ಸದ್ಯದಲ್ಲೇ ಪಾರುಗೆ ತನ್ನ ಪ್ರೀತಿಯ ಅರ್ಥವಾಗಿ, ಅದನ್ನು ಮಾವನ ಬಳಿ ಹೇಳುತ್ತಾಳೆ. ಇವರಿಬ್ಬರನ್ನು ಜೊತೆಯಾಗಿ ನೋಡಿದ ವೀಕ್ಷಕರು ಸಂಭ್ರಮಿಸಿದ್ದು, ಭೂಮಿ ಇರೋದೇ ಎಲ್ಲ ಸೀರಿಯಲ್ ಅಲ್ಲು ಎಲ್ಲರ ಪ್ರಾಬ್ಲಮ್ ನಾ ನಿವಾರಣೆ ಮಾಡೋಕೆ, ಸೂಪರ್ ಭೂಮಿ ನೀನು ಎಂದಿದ್ದಾರೆ. ಇವರಿಬ್ಬರ ಕಾಂಬಿನೇಶನ್ ನೋಡೋದಕ್ಕೆ ಖುಷಿಯಾಗುತ್ತೆ ಎಂದಿದ್ದಾರೆ ಜನ. 

View post on Instagram