'ಭಾರ್ಗವಿ ಎಲ್ಎಲ್ಬಿ' ನಟಿ ರಾಧಾ ಲೈಫ್ನಲ್ಲಿ ಲವ್ ಬ್ರೇಕಪ್! ಈಗಿರೋ ಆ ವ್ಯಕ್ತಿ ಯಾರು? ಏನಂದ್ರು ಕೇಳಿ...
ಅಮೃತಧಾರೆಯಲ್ಲಿ ಮಲ್ಲಿಯಾಗಿ, ಇದೀಗ ಭಾರ್ಗವಿ ಎಲ್ಎಲ್ಬಿಯಲ್ಲಿ ಲೀಡ್ ರೋಲ್ ಮಾಡ್ತಿರೋ ನಟಿ ರಾಧಾ ಭಗವತಿ ರಿಯಲ್ ಲೈಫ್ ಲವ್ ಬ್ರೇಕಪ್ ಸುದ್ದಿ ಕೇಳಿ...

ಅಕ್ಕವ್ರೇ ಅಕ್ಕವ್ರೇ ಎಂದು ಅಮೃತಧಾರೆಯ ಭೂಮಿಕಾ ಹಿಂದೆ ಮುಂದೆ ಓಡಾಡ್ತಿದ್ದ ಮಲ್ಲಿ ಈಗ ಲಾಯರ್ ಆಗಿಬಿಟ್ಟಿದ್ದಾಳೆ. ಭಾರ್ಗವಿ ಎಲ್ಎಲ್ಬಿ ಸೀರಿಯಲ್‌ನಲ್ಲಿ ನಾಯಕಿಯಾಗಿ ಅಲ್ಲಿಯ ಮಲ್ಲಿ ಮಿಂಚುತ್ತಿದ್ದಾಳೆ. ಅಮೃತಧಾರೆ ಮಲ್ಲಿಯಾಗಿ ಬೇರೆ ನಟಿಯ ಎಂಟ್ರಿಯಾಗಿದೆ. ಅಲ್ಲಿ ಮಲ್ಲಿಯಾಗಿ, ಇಲ್ಲಿ ಭಾರ್ಗವಿಯಲ್ಲಿ ಎರಡೂ ವಿಭಿನ್ನ, ತದ್ವಿರುದ್ಧ ಕ್ಯಾರೆಕ್ಟರ್ನಲ್ಲಿ ನಟಿಸಿ ಎರಡರಲ್ಲಿಯೂ ಸೈ ಎನ್ನಿಸಿಕೊಂಡಿರುವ ನಟಿ ರಾಧಾ ಭಗವತಿ. ಇದಾಗಲೇ ಭಾರ್ಗವಿ ಸೀರಿಯಲ್ ಮೂಲಕ, ಹೊಸ ಹವಾ ಸೃಷ್ಟಿಸಿದ್ದಾರೆ ನಟಿ. ಇದಾಗಲೇ ಇವರ ನಟನೆಯ ಅಪಾಯವಿದೆ ಎಚ್ಚರಿಕೆ ಸಿನಿಮಾ ಕೂಡ ರಿಲೀಸ್ ಆಗಿದೆ.
ಇದೀಗ ನಟಿ, ತಮ್ಮ ಬದುಕಿನ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮಿಸ್ಟರ್ ಡಿ.ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ನಟಿ, ತಮಗೆ ಲವ್ ಬ್ರೇಕಪ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಲವ್ ಬ್ರೇಕಪ್ ಆಗಿದ್ದು ನಿಜ, ಆದರೆ ಅದರಿಂದ ತುಂಬಾ ಪಾಠ ಕಲಿತಿದ್ದೇನೆ ಎಂದಿದ್ದಾರೆ. ಅದೇ ವೇಳೆ, ಈಗ ಸಿಂಗಲ್ಲಾ ಎನ್ನುವ ಪ್ರಶ್ನೆಗೆ, ನಟಿ ಅದರ ಬಗ್ಗೆ ನಾನು ಹೇಳಲ್ಲ ಎನ್ನುವ ಮೂಲಕ ತಮ್ಮ ಬಾಳಿನಲ್ಲಿ ಯಾರದ್ದೋ ಎಂಟ್ರಿ ಆಗಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಇನ್ನು ಭಾರ್ಗವಿ ರೋಲ್ ಬಗ್ಗೆ ಹೇಳಿರುವ ರಾಧಾ ಅವರು, ಯಾರಿಗೂ ಹಿಂಜರಿಯದ ಹೆಣ್ಣು, ಏನೇ ಆದ್ರೂ ಫೇಸ್ ಮಾಡುವವಳು ಎಂದಿದ್ದಾರೆ. ಇದೇ ವೇಳೆ ಸಂಭಾವನೆ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಆರಂಭದಲ್ಲಿ 750 ರೂಪಾಯಿ ಸಂಭಾವನೆ ಇತ್ತು, ಆದರೆ ಈಗಿಂದು ಹೇಳಲ್ಲ ಎಂದಿದ್ದಾರೆ.
ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್: ಬಿಗ್ಬಾಸ್ ಕಿಶನ್ ಜೊತೆ ಮೋಡಿ!
ಅಂದಹಾಗೆ ರಾಧಾ ಭಗವತಿ ಅವರು, ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸಿದರು. ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ. ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ. ಕಿರುತೆರೆ, ಹಿರಿತೆರೆ, ಮ್ಯೂಸಿಕ್ ಆಲ್ಬಂ ಮಾತ್ರವಲ್ಲದೇ ರಾಧಾ ಅವರು, ಹಿನ್ನೆಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ.
ಮತ್ತೆ ಬದಲಾದಳು ಸ್ನೇಹಾ; ಬಂದಳು ರಾಮಾಚಾರಿ ರುಕ್ಕು! ಕಂಠಿ ಗತಿ ನೆನೆಸಿಕೊಂಡು ಕಣ್ಣೀರಿಡ್ತೋ ಫ್ಯಾನ್ಸ್