ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಕನ್ನಿಕಾಗೆ ಭಾಗ್ಯ ಈಗ ಸವಾಲಾಗಿದ್ದಾಳೆ. ಮುಂದೆ ಅವಳು ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ.   

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಹಾಸ್ಟೆಲ್‌ ಹುಡುಗರಿಗೆ ಫ್ರೀ ಊಟ ಕೊಟ್ಟು, ಅದನ್ನೇ ಉದ್ಯಮ ಮಾಡಿಕೊಳ್ಳಲು ಭಾಗ್ಯ ರೆಡಿ ಆಗಿದ್ದಾಳೆ. ಉದ್ಯಮ ಮಾಡಲು ಬಂಡವಾಳ ಬೇಕು ಅಂತಾರೆ, ನಾನು ಫ್ರೀ ಊಟ ಕೊಟ್ಟು, ಜನರಿಗೆ ಊಟದ ರುಚಿ ಹಚ್ಚಿಸುವೆ, ಅದೇ ನನಗೆ ಬಂಡವಾಳ ಅಂತ ಭಾಗ್ಯ ಹೇಳುತ್ತಿದ್ದಾಳೆ. ಇನ್ನು ಭಾಗ್ಯ ಇಂದು ಈ ಸ್ಥಿತಿಗೆ ಬರೋಕೆ ನಾನೇ ಕಾರಣ ಅಂತ ಕನ್ನಿಕಾ ಬೀಗಿದ್ದಾಳೆ. ಇದಕ್ಕೀಗ ಭಾಗ್ಯ ಸಖತ್‌ ಠಕ್ಕರ್‌ ಕೊಟ್ಟಿದ್ದಾಳೆ.

ಠಕ್ಕರ್‌ ಕೊಟ್ಟ ಭಾಗ್ಯ! 
“ನನ್ನನ್ನು ಎದುರುಹಾಕಿಕೊಂಡಿದ್ದಕ್ಕೆ ನೀನು ಈ ಸ್ಥಿತಿಗೆ ಬಂದಿದ್ದೀಯಾ” ಎಂದು ಕನ್ನಿಕಾ ಹೇಳಿದ್ದಾಳೆ. “ನನ್ನ ಕಾಲೆಳೆದು ಕೆಳಗಡೆ ಹಾಕಬಹುದು ಎಂದುಕೊಂಡೋರನ್ನೆಲ್ಲ ತುಳಿದು ಮೇಲೆ ಬರ್ತೀನಿ” ಎಂದು ಭಾಗ್ಯ ಹೇಳಿದ್ದಾಳೆ. ಭಾಗ್ಯ ಹಾಕಿದ ಸವಾಲು ಕೇಳಿ ಸುಂದರಿ ಶಿಳ್ಳೆ ಹೊಡೆದಿದ್ದಾಳೆ. 

ಬಟ್ಟೆಯನ್ನು ಹೀಗೂ ಹಾಕೋಬಹುದಾ? ರಿಯಲ್‌ ಪತ್ನಿ ಅಂದಕ್ಕೆ ಬೆರಗಾದ ಭಾಗ್ಯಲಕ್ಷ್ಮೀ ನಟ ಸುದರ್ಶನ್‌ ರಂಗಪ್ರಸಾದ್!‌

ಧಾರಾವಾಹಿ ಕಥೆ ಏನು?
ಭಾಗ್ಯಗೆ ಮದುವೆಯಾಗಿ ಇಬ್ಬರು ಮಕ್ಕಳಿವೆ. ಇನ್ನು ಗಂಡ ತಾಂಡವ್‌ ಕೂಡ ಶ್ರೇಷ್ಠ ಎನ್ನುವವಳನ್ನು ಮದುವೆಯಾಗಿದ್ದಾನೆ. ಭಾಗ್ಯಳನ್ನು ಬೆಳೆಯೋಕೆ ಬಿಡೋದಿಲ್ಲ ಅಂತ ತಾಂಡವ್‌ ಪಟ್ಟು ಹಿಡಿದು ಕೂತಿದ್ದಾನೆ. ಅಷ್ಟೇ ಅಲ್ಲದೆ ಕನ್ನಿಕಾ ಎನ್ನುವವಳಿಗೆ ಭಾಗ್ಯ ಕಂಡರೆ ಆಗೋದೇ ಇಲ್ಲ. ಶ್ರೇಷ್ಠ, ತಾಂಡವ್‌, ಕನ್ನಿಕಾ ಸೇರಿಕೊಂಡು ಭಾಗ್ಯಗೆ ಒಂದಲ್ಲ ಒಂದು ತೊಂದರೆ ಕೊಡುತ್ತಿದ್ದಾರೆ. ಅದನ್ನೆಲ್ಲ ಅವಳು ಹೇಗೆ ಎದುರಿಸುತ್ತಾಳೋ ಏನೋ! 

ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಹೇಳುತ್ತಿರೋದು ಏನು?
ಭಾಗ್ಯ ನಿಂದೇ ಒಂದು ಹೋಟೆಲ್ ಸ್ಟಾರ್ಟ್ ಮಾಡು.
ಭಾಗ್ಯ ಒಂದೊಂದು ಸಲ ಒಂದೊಂದು ತರ ಇರ್ತಾಳೆ. ಕನ್ನಿಕಾ ಗೆ ದುಡ್ಡು ಜಾಸ್ತಿ ಅದಕ್ಕೆ ಕೊಬ್ಬು ಜಾಸ್ತಿ. ಆದರೆ ಭಾಗ್ಯ ಅಹಂಕಾರದ ಮಾತು ಹಿಡಿಸಲಿಲ್ಲ. ಯಾಕಂದ್ರೆ ಎಲ್ಲ ಸೋಲೇ ಆಗ್ತಿರೋವಾಗ ಇಷ್ಟು ಮಾತಾಡೋದು ಸರಿ ಅಲ್ಲ. ಎಲೆ ಮರೆ ಕಾಯಿ ರೀತಿ ಸೈಲೆಂಟ್ ಆಗಿ ಕೆಲಸ ಮಾಡಬೇಕು‌, ಗೆಲ್ಲಬೇಕು. ತೋರಿಕೆ ಮಾತುಗಳು ಬೇಡ ಅನಿಸುತ್ತೆ. ಒಂದೇ ಕ್ಯಾರೆಕ್ಟರ್ ಇದ್ರೆ ಚೆನ್ನಾಗಿರುತ್ತೆ ಅನಿಸುತ್ತೆ. 
ನಾನು, ನನ್ನಿಂದ ಅನ್ನುವ ಅತ್ತೆ. ಮಾತಲ್ಲೇ ಬರಿ ಅತಿ ಬಿಲ್ಡಪ್ ಕೊಡೊ ಭಾಗ್ಯ.
ಅಬ್ಬಾ ಆ ಸುನಂದಾ ಮತ್ತು ಸುಂದ್ರಿ ನೋಡಿದ್ರೆ ಮೈ ಎಲ್ಲ ಉರಿಯುತ್ತೆ, ಇಷ್ಟು ವರ್ಷನುಗಟ್ಟಲೆಯಿಂದ ಬೀಗರ ಮನೇಲಿ ಇದ್ದೀಯ ನಾಚಿಕೆ ಆಗೋಲ್ವಾ? ನಿನ್ನ ಜನ್ಮಕ್ಕೆ ಅಸಹ್ಯ. ಮೊದಲು ಅವ್ರಿಬ್ರನ್ನು ಹೊರಗೆ ಹಾಕಿ. 

'ಭಾಗ್ಯಲಕ್ಷ್ಮೀ' ಧಾರಾವಾಹಿ; ಭಾಗ್ಯ ಶ್ರೀಮಂತೆಯಾಗೋದು ಕನಸು ಅನ್ಕೋಬೇಡಿ! ಇಲ್ಲೇ ಇರೋದು ಅಸಲಿ ಮ್ಯಾಟರ್!‌

ಪಾತ್ರಧಾರಿಗಳು
ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್‌, ಶ್ರೇಷ್ಠ ಪಾತ್ರದಲ್ಲಿ ಕಾವ್ಯಾ ಗೌಡ, ತಾಂಡವ್‌ ಪಾತ್ರದಲ್ಲಿ ಸುದರ್ಶನ್‌ ರಂಗಪ್ರಸಾದ್‌ ಅವರು ನಟಿಸುತ್ತಿದ್ದಾರೆ.