- Home
- Entertainment
- Sandalwood
- ಬಟ್ಟೆಯನ್ನು ಹೀಗೂ ಹಾಕೋಬಹುದಾ? ರಿಯಲ್ ಪತ್ನಿ ಅಂದಕ್ಕೆ ಬೆರಗಾದ ಭಾಗ್ಯಲಕ್ಷ್ಮೀ ನಟ ಸುದರ್ಶನ್ ರಂಗಪ್ರಸಾದ್!
ಬಟ್ಟೆಯನ್ನು ಹೀಗೂ ಹಾಕೋಬಹುದಾ? ರಿಯಲ್ ಪತ್ನಿ ಅಂದಕ್ಕೆ ಬೆರಗಾದ ಭಾಗ್ಯಲಕ್ಷ್ಮೀ ನಟ ಸುದರ್ಶನ್ ರಂಗಪ್ರಸಾದ್!
ಅನೇಕ ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಭಟ್ ಅವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಪತ್ನಿ ಇವರು ಎನ್ನೋದು ಇನ್ನೊಂದು ಹೆಗ್ಗಳಿಕೆ. ಈ ಸುಂದರ ಫೋಟೋಶೂಟ್ ಚಿತ್ರಣ ಇಲ್ಲಿದೆ.

ಕನ್ನಡ ನಟಿ ಸಂಗೀತಾ ಭಟ್ ಅವರು ಫ್ಯಾಷನ್ ವಿಚಾರದಲ್ಲಿ ಆಗಾಗ ಒಂದಿಷ್ಟು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈಗ ಇನ್ನೊಂದು ಪ್ರಯೋಗ ಮಾಡಿದ್ದಾರೆ.
ಕ್ರೀಮ್ ಬಣ್ಣದ ಬಟ್ಟೆಯನ್ನು ಅವರು ವಿಭಿನ್ನವಾಗಿ ಧರಿಸಿ, ಕಲಾವಿದರ ಹಾವಭಾವಗಳನ್ನು ಪ್ರದರ್ಶಿಸಿದ್ದಾರೆ. ಈ ಹಾವ-ಭಾವ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಸಂಗೀತಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಪತಿ ಸುದರ್ಶನ್ ರಂಗಪ್ರಸಾದ್ ಅವರು ಈ ಫೋಟೋಗಳನ್ನು ನೋಡಿ ʼವಾವ್ʼ ಎಂದು ಹೇಳಿದ್ದಾರೆ.
ಸಂಗೀತಾ ಭಟ್ ಅವರ ಈ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ಕೂಡ ಅವರು ವಿಭಿನ್ನವಾದ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಅಂದಹಾಗೆ ಸುದರ್ಶನ್ ರಂಗಪ್ರಸಾದ್ ಅವರ ನಿರ್ದೇಶನದ ಸಿನಿಮಾದಲ್ಲಿ ಸಂಗೀತಾ ಭಟ್, ಬಹುಭಾಷಾ ನಟ ಕಿಶೋರ್ ಅವರು ನಟಿಸುತ್ತಿದ್ದಾರೆ.
ಸಂಗೀತಾ ಭಟ್, ಕಿಶೋರ್, ಸುದರ್ಶನ್ ರಂಗಪ್ರಸಾದ್ ಅವರ ಈ ಸಿನಿಮಾಕ್ಕೆ ʼಅರವಣಿಪುರಂʼ ಎಂದು ಹೆಸರಿಡಲಾಗಿದೆ. ಈಗಾಗಲೇ ಸಿನಿಮಾ ಕೆಲಸಗಳು ಶುರುವಾಗಿವೆ.