ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಶ್ರೇಷ್ಠ-ತಾಂಡವ್‌ ಮದುವೆ ಆಗೋಯ್ತು. ಈಗ ಭಾಗ್ಯ ತನ್ನ ತಾಳಿಯನ್ನು ಕಿತ್ತು ಎಸೆದಿದ್ದಾಳೆ. ಮುಂದೆ ಏನಾಗುವುದು?

ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ತಾಂಡವ್‌, ಶ್ರೇಷ್ಠ ಮದುವೆ ನಡೆದಾಯ್ತು. ಈಗ ಭಾಗ್ಯ ಏನ್‌ ಮಾಡ್ತಾಳೆ ಅಂತ ಕೆಲವರಿಗೆ ಸಂದೇಹ ಇರಬಹುದು. ಈಗ ಭಾಗ್ಯ ತಾಳಿ ಕಿತ್ತು ಎಸೆದಿದ್ದಾಳೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.

ತಾಳಿ ಕಿತ್ತು ಎಸೆದ ಭಾಗ್ಯ
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ತಾಂಡವ್-ಶ್ರೇಷ್ಠ ಅನೇಕ ಬಾರಿ ಮದುವೆ ಆಗಬೇಕು ಅಂತ ಅಂದುಕೊಂಡ್ರೂ ಕೂಡ, ಆಗಲೇ ಇಲ್ಲ. ಇನ್ನೊಂದು ಕಡೆ ಗಂಡ ಬದಲಾಗ್ತಾನೆ ಅಂತ ಭಾಗ್ಯ ಕಾದರೂ ಕೂಡ ಏನೂ ಪ್ರಯೋಜನ ಆಗಲಿಲ್ಲ. ಈಗ ತಾಂಡವ್‌ ಮರು ಮದುವೆ ಆಗಿದ್ದಾನೆ, ಭಾಗ್ಯ ತನ್ನ ತಾಳಿಯನ್ನು ಕಿತ್ತು ಎಸೆದಿದ್ದಾಳೆ.

ಹೋಗ್ತಾ ಇರು ನನ್​ ಲೈಫಿಂದ ಅಂದ್​ಬಿಟ್ನಲ್ಲಾ ತಾಂಡವ್​! ಅಂತೂ ಶ್ರೇಷ್ಠಗೆ ಗುಡ್​ಬೈ ಹೇಳ್ತಾನಾ?

ಭಾಗ್ಯ ಮನಸ್ಸಿನಲ್ಲಿ ಏನಿದೆ? 
“ಹೆಣ್ಣು ಮುತ್ತೈದೆ ಆಗಬೇಕು ಅಂದ್ರೆ ಗಂಡ ಅವಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಇವರು ಯಾವತ್ತು ನನ್ನ ಒಪ್ಪಿಕೊಳ್ಳಲೇ ಇಲ್ಲ. ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲ್ಲ ಅಂದ್ರೆ ಈ ತಾಳಿ ನನಗೆ ಭಾರವಾಗುತ್ತಿದೆ, ನನಗೆ ಈ ತಾಳಿ ಬೇಡ. ಇದು ನನಗೆ ಬೇಡ” ಎಂದು ಭಾಗ್ಯ ಕೊರಳಲ್ಲಿದ್ದ ತಾಳಿ ತೆಗೆದು ಹಾಕಿದ್ದಾಳೆ. 

Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್‌ ಯಾವುದು?

ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಟ್ಟಿದ್ದಾಳೆ. ಈ ಎಪಿಸೋಡ್‌ ನೋಡಲು ವೀಕ್ಷಕರು ಕಾತುರದಲ್ಲಿದ್ದಾರೆ. 

ಇದು ನಿಜವಾಗಲೂ ಅದ್ರೆ ನಾವು ಮತ್ತೆ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ನೋಡ್ತಿವಿ.
ಇನ್ಮೇಲೆ ತಾಂಡವ್ ಪರದಾಟ ಶುರು
ಸೂಪರ್, ಇದೆ ತರ ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗ್ತಿದೆ ನಿಮ್ಮ ನಿರ್ಧಾರ ಸರಿ ಇದೆ
ಹೆಂಡತಿ ಬೇಡ ಅಂದ್ಮೇಲೆ ಗಂಡ ಕಟ್ಟಿರೋ ತಾಳಿಗೆ ಬೆಲೆ ಇಲ್ಲ ಒಳ್ಳೆ ನಿರ್ಧಾರ ಭಾಗ್ಯ ಭಾಗ್ಯ ಅಕ್ಕ ಒಳ್ಳೆ ನಿರ್ಧಾರ ಮಾಡಿದ್ದೀರಾ, ಇಂಥ ಗಂಡನ್ ಜ್ಯೋತೆ ಬಾಳೋದಕ್ಕಿಂತ, ನಮ್ಮ ಜೀವನ ನಾವು ನೋಡ್ಕೊಳ್ಳೋದೇ ವಾಸಿ
ಇದ್ರಿಂದ ಸಮಾಜಕ್ಕೆ ಹೇಳೋ ಪಾಠ ಆದ್ರೂ ಏನು?
ಇನ್ನು ಮುಂದೆ ತಾಂಡವ್‌ಗೆ ಶನಿದೇಶೆ ಶುರುವಾಯಿತು. ತಾಂಡವ್ ಬೀದಿಗೆ ಬರುವುದು ಗ್ಯಾರಂಟಿ.
ಆಗ ತಾಳಿ ಬಗ್ಗೆ ಅಷ್ಟು ಉದ್ದ ಉಪನ್ಯಾಸ ಕೊಟ್ಟಿದ್ದೆ..ಈಗ ಏನಾಯ್ತು?
ಗಂಡನ ಸಹಾಯ ಇಲ್ಲದೆ ಬದುಕು ಸಾಧ್ಯ ಎಂಬುದನ್ನು ತೋರಿಸಿ 

Bhagyalakshmi Serial ನಟಿ ಗೌತಮಿ ಗೌಡ ಸದ್ಯ ನಟನೆ ಬಿಟ್ಟು MNC ಕಂಪೆನಿಯಲ್ಲಿ ಕೆಲಸ ಮಾಡ್ತಿರೋದ್ಯಾಕೆ?

ಕಥೆ ಏನು?
ಭಾಗ್ಯ ಹಾಗೂ ತಾಂಡವ್‌ ಮದುವೆಯಾಗಿ ಹದಿನೇಳು ವರ್ಷಗಳಾಗಿವೆ. ಭಾಗ್ಯ ಕಂಡರೆ ತಾಂಡವ್‌ಗೆ ಇಷ್ಟವೇ ಇಲ್ಲ. ತಾಯಿ ಒತ್ತಾಯ ಮಾಡಿದಳು ಅಂತ ತಾಂಡವ್‌ ಈ ಮದುವೆ ಆಗಿದ್ದಾನೆ. ಹಾಗೆಯೇ ಇವನಿಗೆ ಮಕ್ಕಳೂ ಆಗಿವೆ. ಈಗ ಅವನಿಗೆ ಪತ್ನಿ ಬೇಕಿಲ್ಲ. ನನ್ನ ಕನಸಿನ, ನನ್ನ ಇಷ್ಟದ ಪತ್ನಿ ಇವಳಲ್ಲ ಎಂದು ಅವನು ಶ್ರೇಷ್ಠಳನ್ನು ಮದುವೆ ಆಗಿದ್ದಾನೆ. ತನ್ನ ಗಂಡನನ್ನು ಕಾಪಾಡಿಕೊಳ್ಳಬೇಕು, ಉಳಿಸಿಕೊಳ್ಳಬೇಕು ಅಂತ ಭಾಗ್ಯ ಸಿಕ್ಕಾಪಟ್ಟೆ ಹರಸಾಹಸ ಮಾಡಿದಳು. ಆದರೆ ಪ್ರಯೋಜವೇ ಇಲ್ಲದಂತಾಗಿದೆ. ಇಂಗ್ಲಿಷ್‌ ಕಲಿತು, ಫೈವ್‌ಸ್ಟಾರ್‌ ಹೋಟೆಲ್‌ನಲ್ಲಿ ಶೆಫ್‌ ಆಗಿರೋ ಭಾಗ್ಯ ಸಾಕಷ್ಟು ಬಾರಿ ತಾಂಡವ್‌ಗೆ ಇಷ್ಟವಾಗೋ ಥರ ಬದುಕಿದ್ದರೂ ಕೂಡ ಅವನಿಗೆ ಪತ್ನಿ ಮೇಲೆ ಲವ್‌ ಆಗ್ತಿಲ್ಲ.

ಪಾತ್ರಧಾರಿಗಳು
ಶ್ರೇಷ್ಠ-ಕಾವ್ಯಾ ಗೌಡ
ಭಾಗ್ಯ-ಸುಷ್ಮಾ ಕೆ ರಾವ್‌
ತಾಂಡವ್-ಸುದರ್ಶನ್‌ ರಂಗಪ್ರಸಾದ್‌
ಕುಸುಮ-ಪದ್ಮಜಾ ರಾವ್‌


View post on Instagram