ಹೋಗ್ತಾ ಇರು ನನ್ ಲೈಫಿಂದ ಅಂದ್ಬಿಟ್ನಲ್ಲಾ ತಾಂಡವ್! ಅಂತೂ ಶ್ರೇಷ್ಠಗೆ ಗುಡ್ಬೈ ಹೇಳ್ತಾನಾ?
ಮನೆಯಲ್ಲಿ ಪತ್ನಿ ಇರುವಾಗಲೇ ಬೇರೊಬ್ಬಳ ಬಲೆಗೆ ಬಿದ್ದ ತಾಂಡವ್ಗೆ ಕೊನೆಗೂ ಬುದ್ಧಿ ಬರುತ್ತಾ? ಶ್ರೇಷ್ಠಾ ಮತ್ತು ತಾಂಡವ್ ದೂರವಾಗೋ ಕಾಲ ಬಂದೇ ಬಿಡ್ತಾ?

ನಮ್ಮ ಅಮ್ಮನನ್ನೇ ಆಡಿಕೊಳ್ತಿಯಾ? ಸರಿಯಾಗಿ ಕೇಳಿಸಿಕೋ. ನಮ್ಮಮ್ಮ ದೇವತೆ, ಮೇಲಿಂದ ಇಳಿದಿದ್ದಾರೆ, ಏನ್ ಮಾಡುತ್ತಿಯಾ ಈಗ. ನಿನ್ನ ಸಹವಾಸ ಸಾಕು. ನಿನ್ನ ಬಗ್ಗೆ ನನಗೆ ಅರ್ಥವಾಯ್ತು. ನಿನ್ನಿಂದ ಮುಕ್ತಿ ಬೇಕು. ನನ್ನ ಜೊತೆ ಅಪ್ಪ, ಅಮ್ಮ ಮತ್ತು ಮಕ್ಳು ಇರ್ತಾರೆ. ಅವರ್ಯಾರು ನಿನಗೆ ಬೇಡ ಅಂದ್ರೆ ನೀನು ನನಗೆ ಬೇಡ. ನಿನ್ ಪ್ರೀತಿನೂ ಬೇಡ, ಮದ್ವೆನೂ ಬೇಡ ಹೋಗ್ತಾ ಇರು ನನ್ ಲೈಫ್ನಿಂದ, ನಿನಗೊಂದು ದೊಡ್ಡ ನಮಸ್ಕಾರ...
ಹೀಗೆ ಹೇಳುವ ಮೂಲಕ ಶ್ರೇಷ್ಠಳ ಲೈಫಿಂದ ತಾಂಡವ್ ದೂರ ಹೋಗಿದ್ದಾನೆ. ಅಂತೂ ಶ್ರೇಷ್ಠಗೆ ಗುಡ್ಬೈ ಹೇಳುವ ಸಮಯನೂ ಬಂದಿದೆ! ಹೌದು. ಇದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಧಾರಾವಾಹಿಯ ಕಥೆ. ಮನೆಯಲ್ಲಿ ಹೆಂಡ್ತಿ, ಮಕ್ಕಳು ಇದ್ದರೂ ಮತ್ತೊಬ್ಬಳ ಪ್ರೀತಿಗೆ ಸಿಲುಕಿದ್ದ ತಾಂಡವ್ಗೆ ಈಗ ಬುದ್ಧಿ ಬಂದಿದೆ. ಇಬ್ಬರ ನಡುವೆ ಜಗಳವಾಗಿದೆ. ಮದುವೆಯ ಕನಸು ಕಾಣುತ್ತಿದ್ದ ಜೋಡಿ ಈಗ ದೂರವಾಗುವ ಕಾಲ ಬಂದಿದೆ. ಇಬ್ಬರ ಜಗಳದ ನಡುವೆ ತಮ್ಮಿಬ್ಬರ ಮಧ್ಯೆ ಏನೂ ಸರಿಯಿಲ್ಲ ಎಂದು ತಾಂಡವ್ಗೆ ಅನ್ನಿಸಿದೆ. ಎಲ್ಲರೂ ನನ್ನನ್ನು ಕೆಟ್ಟವನಂತೆ ನೋಡುತ್ತಿದ್ದಾರೆ. ನನ್ನ ಮಗಳು ನನ್ನ ಮುಖ ನೋಡಿ ಅಸಹ್ಯ ಪಡುತ್ತಿದ್ದಾಳೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ, ನಾಟಕ ಮಾಡುತ್ತಿದ್ದರೆ ನಾನು ಸತ್ತು ಹೋಗುತ್ತೇನೆ ಎಂದು ತಾಂಡವ್ ಶ್ರೇಷ್ಠಾ ಮುಂದೆ ಕಣ್ಣೀರಿಡುತ್ತಾನೆ. ಆರಂಭದಲ್ಲಿ ತಾಂಡವ್ ಮಾತನ್ನು ಗಂಭೀರವಾಗಿ ಪರಿಗಣಿಸದ ಶ್ರೇಷ್ಠಾ, ನಂತರ ತಾಂಡವ್ ಅಳುವುದನ್ನು ನೋಡಿ, ತಾನೂ ಅಳಲು ಆರಂಭಿಸುತ್ತಾಳೆ.
ನಕ್ಷತ್ರಕ್ಕೆ ಸಾನ್ಯಾ ಅಯ್ಯರ್ ಹೆಸರು: ಪುನೀತ್, ಸುದೀಪ್ ಬಳಿಕ ನಟಿಗೆ ಫ್ಯಾನ್ಸ್ ಗೌರವ
ನನಗೂ ಇದೆಲ್ಲಾ ಕಷ್ಟವಾಗುತ್ತಿದೆ. ಆದರೆ ನಾವು ನಮ್ಮ ಪ್ರೀತಿಗಾಗಿ ತಾನೇ ಇಷ್ಟೆಲ್ಲಾ ಮಾಡುತ್ತಿರುವುದು ಎನ್ನುತ್ತಾಳೆ. ಹೌದು ನನಗೂ ನಿನ್ನನ್ನು ಬಿಡಲು ಇಷ್ಟವಿಲ್ಲ. ನನಗೆ 2 ವರ್ಷ ಸಮಯ ಕೊಡು, ಎಲ್ಲವನ್ನೂ ದೂರ ಮಾಡಿಕೊಂಡು ನಿನ್ನನ್ನು ಮದುವೆ ಆಗುತ್ತೇನೆ ನನಗೆ ಈ ನಾಟಕ ಮುಂದುವರೆಸಲು ಆಗುತ್ತಿಲ್ಲ, ಯಾರನ್ನೋ ನನ್ನ ತಂದೆ ತಾಯಿಗಳ ಸ್ಥಾನದಲ್ಲಿ ನಿಲ್ಲಿಸಲು ನನಗೆ ಆಗುವುದಿಲ್ಲ ಎಂದು ತಾಂಡವ್ ಅಳುತ್ತಾನೆ. ಆದರೆ ತಾಂಡವ್ ಕಣ್ಣೀರಿಗೆ ಶ್ರೇಷ್ಠಾ ಕರಗಲ್ಲ. ಅವಳಿಗೆ ಆತನ ಅಪ್ಪ-ಅಮ್ಮನಿಗಿಂತಲೂ ಮದ್ವೆನೇ ಮುಖ್ಯವಾಗಿರುತ್ತದೆ. ಅದಕ್ಕೆ ಸಿಟ್ಟಿನಲ್ಲಿ ಅಮ್ಮನನ್ನೇ ಬೈಯುತ್ತಾಳೆ. ನಿನ್ ತಲೆ ಮೇಲೆ ಕಲ್ಲು ಎತ್ತಿ ಹಾಕುವಷ್ಟು ಕೋಪ ಬರ್ತಿದೆ ಅನ್ನುತ್ತಾಳೆ.
ಕೋಪದ ಭರದಲ್ಲಿ ತಾಂಡವ್ ಆಕೆಯ ಮೇಲೆ ಕೈ ಮಾಡಿದ್ದಕ್ಕೆ ಕಿಡಿ ಕಾರುತ್ತಾಳೆ. ನಿನ್ನ ಅಮ್ಮ ಏನು ಅಮ್ಮ ದೊಡ್ಡ ದೇವತೆನಾ? ಮೇಲಿಂದ ಇಳಿದಿದ್ದಾರಾ ಎಂದು ಕೇಳುತ್ತಾಳೆ. ಇದನ್ನು ಕೇಳಿ ತಾಂಡವ್ಗೆ ಉರಿದು ಹೋಗುತ್ತದೆ. ಅತ್ತ ಭಾಗ್ಯ ತಂಗಿ ಪೂಜಾಗೆ ಭಾವ ತಾಂಡವ್ ಹಾಗೂ ಶ್ರೇಷ್ಠಾ ಲವ್ ಸ್ಟೋರಿ ಗೊತ್ತಾಗಿದೆ. ಇಬ್ಬರೂ ಮಾತನಾಡುವುದನ್ನು ಪೂಜಾ ಮೊಬೈಲ್‌ನಲ್ಲಿ ಎಲ್ಲವನ್ನೂ ರೆಕಾರ್ಡ್ ಮಾಡುತ್ತಿದ್ದಾಳೆ. ಈಗ ಈ ಜೋಡಿ ಬೇರೆಯಾಗುವ ಕಾಲ ಬಂದಿದ್ದು, ಈಗಲಾದ್ರೂ ಬುದ್ಧಿ ಬಂತಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್. ಇನ್ನು ಕೆಲವರು ಶ್ರೇಷ್ಠಾಳ ಗತಿಯೇನು ಅಂತಿದ್ದಾರೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆಯೇ ಕನ್ನಡತಿ, ಪುಟ್ಟಗೌರಿ ರಂಜನಿ? ನಟಿ ಹೇಳಿದ್ದೇನು?