- Home
- Entertainment
- TV Talk
- Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್ ಯಾವುದು?
Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್ ಯಾವುದು?
ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್‌ಪಿ ಬದಲಾಗುತ್ತದೆ. ಅಂತೆಯೇ ಕನ್ನಡದಲ್ಲಿ ಕೂಡ ಹೊಸ ಧಾರಾವಾಹಿಗಳ ಆಗಮನವಾಗುತ್ತಿದ್ದು, ಸೀರಿಯಲ್‌ನಲ್ಲಿ ಮಾಡಿಕೊಂಡ ಕೆಲ ಬದಲಾವಣೆಗಳಿಂದ ಟಿಆರ್‌ಪಿಯಲ್ಲಿ ಏರಿಳಿತ ಕಾಣಬಹುದು. ಹಾಗಾದರೆ ನಂ 1 ಸೀರಿಯಲ್ ಯಾವುವು? ಟಾಪ್ 10 ಧಾರಾವಾಹಿಗಳು ಯಾವುವು?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ನಿರಂಜನ್, ನಿರುಷಾ ಗೌಡ ನಟನೆಯ 'ನಿನ್ನ ಕಥೆ ನನ್ನ ಜೊತೆ' ಧಾರಾವಾಹಿಗೆ 4.8 ಟಿಆರ್‌ಪಿ ಸಿಕ್ಕಿದೆ.
ಕಲರ್ಸ್ ಕನ್ನಡ ವಾಹಿನಿಯ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಗೆ 4.9 ಟಿಆರ್‌ಪಿ ಸಿಕ್ಕಿದೆ. ಶಮಂತ್ ಬ್ರೊ ಗೌಡ, ಭೂಮಿಕಾ ರಮೇಶ್ ನಟನೆಯ ಧಾರಾವಾಹಿ ಇದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಗೆ 5.4 ಟಿಆರ್‌ಪಿ ಸಿಕ್ಕಿದೆ. ಸುಷ್ಮಾ ರಾವ್ ಇದರ ನಾಯಕಿ.
ರಿತ್ವಿಕ್ ಮಠದ್, ದಿವ್ಯಾ ಉರುಡುಗ ನಟನೆಯ ʼನಿನಗಾಗಿʼ ಧಾರಾವಾಹಿಗೆ 4.3 ಟಿಆರ್‌ಪಿ ಸಿಕ್ಕಿದೆ. ಪುಟ್ಟ ಮಗು ಸಿರಿ ಸಿಂಚನಾ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಟ ಧನುಷ್ ಎಸ್ ಗೌಡ ನಟನೆಯ ʼನೂರು ಜನ್ಮಕೂʼ ಧಾರಾವಾಹಿಗೆ 4.1 ಟಿಆರ್‌ಪಿ ಸಿಕ್ಕಿದೆ. ಇದು ಹೊಸ ಸೀರಿಯಲ್. ಸೂಪರ್ ನ್ಯಾಚುಲರ್ ಕಥೆ ಇದರಲ್ಲಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಗೆ 4.6 ಟಿಆರ್‌ಪಿ ಸಿಕ್ಕಿದೆ. ರಿತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ ಈ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ದೊಡ್ಡ ತಾರಾಗಣ ಇರುವ, ವಾರಕ್ಕೆ ಐದು ದಿನ ಒಂದು ಗಂಟೆಗಳ ಕಾಲ ಪ್ರಸಾರ ಆಗುವ ಲಕ್ಷ್ಮೀ ನಿವಾಸ ಧಾರಾವಾಹಿಗೆ 7.6 ಟಿಆರ್‌ಪಿ ಸಿಕ್ಕಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಅಮೃತಧಾರೆ ಧಾರಾವಾಹಿಗೆ 6.5 ಟಿಆರ್‌ಪಿ ಸಿಕ್ಕಿದೆ. ಛಾಯಾ ಸಿಂಗ್, ರಾಜೇಶ್ ನಟರಂಗ ಈ ಧಾರಾವಾಹಿ ಕಲಾವಿದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ನಿನ್ನ ಕಥೆ ನನ್ನ ಜೊತೆ ಧಾರಾವಾಹಿಗೆ 4.8 ಟಿಆರ್‌ಪಿ ಸಿಕ್ಕಿದೆ. ಇನ್ನು ಆಸೆ ಧಾರಾವಾಹಿಗೆ 2.3 ಟಿಆರ್‌ಪಿ ಸಿಕ್ಕಿದೆ.
ಉಮಾಶ್ರೀ, ಧನುಷ್, ಅಕ್ಷರಾ, ಮಂಜುಭಾಷಿಣಿ, ಸಾರಿಕಾ ರಾಜ್ ನಟನೆಯ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ 4.6 ಟಿಆರ್‌ಪಿ ಸಿಕ್ಕಿದೆ.
ಸುಧಾರಾಣಿ, ಅಜಿತ್ ಹಂದೆ, ಲಾವಣ್ಯಾ ಭಾರದ್ವಾಜ್ ನಟನೆಯ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಗೆ 2.6 ಟಿಆರ್‌ಪಿ ಸಿಕ್ಕಿದೆ.
ನೀತಾ ಅಶೋಕ್, ಶರತ್ ಪದ್ಮನಾಭ್ ನಟನೆಯ ಹೊಸ ಧಾರಾವಾಹಿ ʼನಾ ನಿನ್ನ ಬಿಡಲಾರೆʼಗೆ 7.8 ಟಿಆರ್‌ಪಿ ಸಿಕ್ಕಿದೆ. ಇದು ಅದ್ಭುತ ಸಂಖ್ಯೆ ಎನ್ನಬಹುದು.
ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್, ನಾಗೇಂದ್ರ ಶಾ ನಟನೆಯ ʼಅಣ್ಣಯ್ಯʼ ಧಾರಾವಾಹಿಗೆ 7.8 TRP ಸಿಕ್ಕಿದೆ. ಇದು ಮಹಾಸಂಚಿಕೆ ಕೂಡ ಹೌದು.
ಆಸಿಯಾ ಫಿರ್‌ದೋಸ್, ಅಮೋಘ್, ಮೋಹನ್, ಸ್ನೇಹಾ ನಟನೆಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8 trp ಸಿಕ್ಕಿದೆ ಎನ್ನಬಹುದು.