ಕನ್ನಡದ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರ ಮಾಡ್ತಿರುವ ನಟಿ ಗೌತಮಿ ಗೌಡ ಅವರು ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಕೆಲವರಿಗೆ ಸಂದೇಹ ಇರಬಹುದು. ಯಾಕೆ ಗೌತಮಿ ನಟನೆಯಿಂದ ಸ್ವಲ್ಪ ದೂರ ಇದ್ದಾರೆ?  

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಆರಂಭದಲ್ಲಿ ಶ್ರೇಷ್ಠ ಪಾತ್ರ ಮಾಡ್ತಿದ್ದ ನಟಿ ಗೌತಮಿ ಸದ್ಯ ತೆರೆಯಿಂದ ದೂರ ಇದ್ದಾರೆ. ಈ ಪಾತ್ರಕ್ಕೆ ಕಾವ್ಯಾ ಗೌಡ ಜೀವ ತುಂಬುತ್ತಿದ್ದಾರೆ. ಗೌತಮಿ ಗೌಡ ಏನು ಮಾಡ್ತಿದ್ದಾರೆ? ಎಲ್ಲಿ ಹೋದರು ಎಂದು ಕೆಲವರಿಗೆ ಸಂದೇಹ ಇರಬಹುದು. 

ಕಂಪೆನಿಯೊಂದರಲ್ಲಿ ಕೆಲಸ 
ಗೌತಮಿ ಗೌಡ ಅವರು ಈಗ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಟನೆ ಜೊತೆಗೆ ಅವರು ಇಂಜಿನಿಯರಿಂಗ್‌ ಕೂಡ ಮುಗಿಸಿಕೊಂಡಿದ್ದರು. ಈಗ ಅವರು ಫುಲ್‌ಟೈಮ್‌ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮದುವೆಯಾದ 11 ತಿಂಗಳಿಗೆ ಕಿರುತೆರೆ ನಟಿಯ ಕಣ್ಣಲ್ಲಿ ಕಣ್ಣೀರು: ಅಭಿಮಾನಿಗಳು ಶಾಕ್

ಸೂಪರ್‌ ಹಿಟ್‌ ಧಾರಾವಾಹಿಗಳ ನಟಿ! 
ಗೌತಮಿ ಗೌಡ ಅವರು ಕೆಲ ಮೆಗಾ ಧಾರಾವಾಹಿಗಳಲ್ಲಿ ನಟಿಸಿದವರು. ಅಷ್ಟೇ ಅಲ್ಲದೆ ʼಬಿಗ್‌ ಬಾಸ್‌ ಕನ್ನಡʼ ಶೋನಲ್ಲಿಯೂ ಭಾಗವಹಿಸಿದ್ದರು. ‘ಚಿ ಸೌ ಸಾವಿತ್ರಿ’, ‘ತಾಯವ್ವ’, ‘ಅಮ್ಮ ನಿನಗಾಗಿ’, ‘ಚಲಿಸುವ ಮೋಡಗಳು’, ‘ಚೆಲುವಿ’ ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ʼಚಿ ಸೌ ಸಾವಿತ್ರಿʼ ಧಾರಾವಾಹಿ ದೊಡ್ಡ ಹಿಟ್‌ ಆಗಿತ್ತು. ಶ್ರುತಿ ನಾಯ್ಡು ನಿರ್ದೇಶನದ ಈ ಧಾರಾವಾಹಿಯಲ್ಲಿ ಜೈಜಗದೀಶ್‌ ಅವರು ಹೀರೋ ಆಗಿದ್ರೆ, ಗೌತಮಿ ನಾಯಕಿಯಾಗಿದ್ರು. ಈಗಾಗಲೇ ಮದುವೆಯಾಗಿ ತನ್ನ ವಯಸ್ಸಿನ ಮಗಳಿರುವವನಿಗೆ ಸಾವಿತ್ರಿ ಮಡದಿ ಆಗ್ತಾಳೆ. ಸಾವಿತ್ರಿ ಪಾತ್ರದಲ್ಲಿ ಗೌತಮಿ ನಟಿಸಿದ್ದರು. ಈ ಧಾರಾವಾಹಿ ಎಷ್ಟು ಹಿಟ್‌ ಆಯ್ತು ಅಂದ್ರೆ ಇದೇ ಹೆಸರಿನಲ್ಲಿ ಇನ್ನೊಂದು ಸೀರಿಯಲ್‌ ಕೂಡ ಬಂತು.

ಭಾಗ್ಯಲಕ್ಷ್ಮಿ ಅಮ್ಮ-ಮಕ್ಕಳ ಭರ್ಜರಿ ರೀಲ್ಸ್​: ಯಾರ ಕಣ್ಣೂ ಬೀಳದಿರಲಪ್ಪ ಎಂದು ದೃಷ್ಟಿ ತೆಗೆದ ನೆಟ್ಟಿಗರು!

ನಟನೆಯಿಂದ ದುಡಿಮೆ!
ʼಚಿ ಸೌ ಸಾವಿತ್ರಿʼ ಧಾರಾವಾಹಿಯಲ್ಲಿ ನಟಿಸುವಾಗಲೇ ಗೌತಮಿ ಗೌಡ ತಂದೆ-ತಾಯಿ ದೂರ ಆದರು. ಹೀಗಾಗಿ ಇಡೀ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಗೌತಮಿ ಹೆಗಲಿಗೆ ಬಂತು. ಮೆಗಾ ಧಾರಾವಾಹಿ, ಸಿನಿಮಾಗಳಲ್ಲಿ ಗೌತಮಿ ನಟಿಸಿ, ಒಂದಷ್ಟು ಹಣ ದುಡಿದು ಮನೆ ನಡೆಸಿದರು. ಆದರೂ ಕೂಡ ನಟನೆಯಲ್ಲಿ ಮೇಕಪ್, ಡ್ರೆಸ್‌ ಎಂದು ಒಂದಿಷ್ಟು ಹಣ ಹಾಕಬೇಕಾಗುತ್ತದೆ. ಕಲಾವಿದರಿಗೆ ಒಮ್ಮೊಮ್ಮೆ ಉಳಿತಾಯ ಆಗುತ್ತದೆ ಎಂದು ಹೇಳಲಾಗುವುದಿಲ್ಲ.

ಉದ್ಯೋಗ ಮುಖ್ಯ
ಗೌತಮಿ ಗೌಡ ಅವರು ಇಂಜಿನಿಯರಿಂಗ್‌ ಮುಗಿದಿದ್ದಕ್ಕೆ ಕಂಪೆನಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಇದರಿಂದ ಒಂದಷ್ಟು ಹಣ ಬರುತ್ತಲಿದೆ. ಸೀರಿಯಲ್‌ ಇರಲೀ, ಸಿನಿಮಾವಿರಲೀ ಯಾವಾಗಲೂ ಪ್ರಾಜೆಕ್ಟ್‌ ಇರುತ್ತದೆ ಅಂತ ಹೇಳೋಕೆ ಆಗೋದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ವಿದ್ಯೆ ಮುಖ್ಯ ಎಂದು ನಂಬಿರುವ ಗೌತಮಿ ಗೌಡ ಒಳ್ಳೆಯ ಪ್ರಾಜೆಕ್ಟ್‌ ಬಂದರೆ ಖಂಡಿತ ನಟಿಸುತ್ತಾರೆ. ಸದ್ಯ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿರುವ ಅವರು ಮಗಳ ಆರೈಕೆ, ಕಂಪೆನಿ ಕೆಲಸದಲ್ಲಿ ಬ್ಯುಸಿ ಇದ್ದಾರೆ. 

ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಸುಕೃತಾ ನಾಗ್ ಎಂಟ್ರಿ... ಇಲ್ಲೂ ಮನೆ ಹಾಳು ಮಾಡೋದ ಕೇಳ್ತಿದ್ದಾರೆ ವೀಕ್ಷಕರು

ಗೌತಮಿ ಗೌಡ-ಜಾರ್ಜ್‌ ಕ್ರಿಸ್ಟಿ ಮದುವೆ! 
2018ರಲ್ಲಿ ಗೌತಮಿ ಗೌಡ ಅವರು ಜಾರ್ಜ್‌ ಕ್ರಿಸ್ಟಿ ಎನ್ನುವವರ ಜೊತೆ ಮದುವೆಯಾಗಿದ್ದಾರೆ. ಹಿಂದು ಹಾಗೂ ಕ್ರಿಶ್ಚಿಯನ್‌ ಸಂಪ್ರದಾಯದಲ್ಲಿ ಈ ಜೋಡಿ ಮದುವೆ ನಡೆದಿದೆ. ಈ ಜೋಡಿಗೆ ಮಗಳು ಹುಟ್ಟಿದ್ದಾಳೆ. ಇನ್ನು ಗ್ರ್ಯಾಂಡ್‌ ಆಗಿ ಮಗಳ ಜನ್ಮದಿನವನ್ನು ಕೂಡ ಆಚರಿಸಿದ್ದರು. ಅಷ್ಟೇ ಅಲ್ಲದೆ ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿರುವ ಅವರು ವಿಭಿನ್ನವಾಗಿ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದರು.