ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ತಾಂಡವ್‌, ಶ್ರೇಷ್ಠ ಮದುವೆ ಆಯ್ತು. ಇದು ಕನಸೇ? ನನಸಾ? ಎಂಬ ಪ್ರಶ್ನೆ ಕಾಡ್ತಿದೆ. ಈ ನಡುವೆ ಡಿವೋರ್ಸ್‌ ಆಗದೆ ಮತ್ತೆ ಮದುವೆ ಆಗೋದು ತಪ್ಪಲ್ಲವೇ?

ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ತಾಂಡವ್‌ ಹಾಗೂ ಶ್ರೇಷ್ಠ ಮದುವೆ ಆಗಿರುವ ಪ್ರೋಮೋ ಭಾರೀ ವೈರಲ್‌ ಆಗ್ತಿದೆ. ಮೊದಲ ಬಾರಿಗೆ ಭಾಗ್ಯ ಮಹಾ ನಿರ್ಧಾರ ತಗೊಂಡು, ತನ್ನ ತಾಳಿಯನ್ನು ಕಿತ್ತು ಎಸೆದಿದ್ದಾಳೆ. ಡಿವೋರ್ಸ್‌ ಆಗದೆ ಮದುವೆ ಆಗಿದ್ದು ನಿಜವೇ? ಕನಸೇ ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡ್ತಿದೆ. 

ತಾಂಡವ್-ಶ್ರೇಷ್ಠ ಮದುವೆ ಆಯ್ತು! 
ಭಾಗ್ಯ - ತಾಂಡವ್ ವೈವಾಹಿಕ ಜೀವನ ಆರಂಭವಾದಾಗ ಅವಳು ಅಮಾಯಕ ಗೃಹಿಣಿ. ಗಂಡನ ಹಣೆಬರಹ ಗೊತ್ತಾದಾಗ ಅವಳು ʼನಾನು ಭಾಗ್ಯʼ' ಎಂದು ಎದುರಿಸಿ ನಿಂತಳು. ಇಂತಹ ಭಾಗ್ಯಳ ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಬಂದಿದೆ! ಕೊನೆಗೂ ಅವಳ ಗಂಡ ತಾಂಡವ್, ಶ್ರೇಷ್ಠಾಳನ್ನು ಮದುವೆ ಆಗಿದ್ದಾನೆ. 

Bhagyalakshmi Serial: ಶ್ರೇಷ್ಠ-ತಾಂಡವ್‌ ಮದುವೆ ಆಯ್ತು; ತಾಳಿಯನ್ನು ಕಿತ್ತೆಸೆದ ಭಾಗ್ಯ; ಹೈ ವೋಲ್ಟೇಜ್‌ ಎಪಿಸೋಡ್‌ ಇದು

ಕುಸುಮಾ ಹೋರಾಟವೂ ವ್ಯರ್ಥ! 
ತಾಳಿಯೇ ಸರ್ವಸ್ವ, ಗಂಡನೇ ನನ್ನ ಬದುಕು ಎಂದು ಬದುಕುತ್ತಿದ್ದ ಭಾಗ್ಯಗೆ ಈಗ ಮೋಸ ಆಗಿದೆ. ಕೊನೆಗೂ ಅವಳು ಈ ಮದುವೆಯಿಂದ ಹೊರಗಡೆ ಬರುವ ನಿರ್ಧಾರ ಮಾಡಿದ್ದಾಳೆ. ಭಾಗ್ಯ ಅವಳ ತಾಳಿಯನ್ನು ಕಿತ್ತೆಸೆದಿದ್ದಾಳೆ. ನನ್ನ ಮಗ-ಸೊಸೆ ಜೀವನ ಸರಿ ಮಾಡ್ತೀನಿ, ನನ್ನ ಮಗನಿಗೆ ಹೆಂಡ್ತಿ ಭಾಗ್ಯ ಬೇಕು ಅಂತ ಅರ್ಥ ಆಗತ್ತೆ ಎಂದು ಕುಸುಮಾ ನಂಬಿಕೊಂಡು ಕೂತಿದ್ದಾಳೆ. ಇದಕ್ಕಾಗಿಯೂ ಒಂದಷ್ಟು ಹೋರಾಟ ಮಾಡಿದಳು.

ಒಂದು ತಿಂಗಳು ಟೈಮ್‌ನಲ್ಲಿ ನನ್ನ ಸೊಸೆಯನ್ನು ನಿನಗೆ ಇಷ್ಟ ಆಗುವ ಹಾಗೆ ರೆಡಿ ಮಾಡ್ತೀನಿ ಅಂತ ಕುಸುಮಾ ಹೇಳಿದಳು. ಇನ್ನು ತಾಂಡವ್‌ ಕೂಡ ಮನೆ ಬಿಟ್ಟು ಹೋದ. ಇಷ್ಟೆಲ್ಲ ಆಗುವಾಗ ಭಾಗ್ಯ-ತಾಂಡವ್‌ ಡಿವೋರ್ಸ್‌ ನಡೆಯಲೇ ಇಲ್ಲ. 

Kannada Serial TRP 2025; ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಪಟ್ಟ ಪಡೆದ ಸೀರಿಯಲ್‌ ಯಾವುದು?

ಡಿವೋರ್ಸ್‌ ಆಗದೆ ಮತ್ತೆ ಮದುವೆನಾ?
ಡಿವೋರ್ಸ್‌ ಆಗದೆ ತಾಂಡವ್‌ ಹೇಗೆ ಶ್ರೇಷ್ಠಳನ್ನು ಮದುವೆ ಆಗ್ತಾನೆ ಎನ್ನೋದು ವೀಕ್ಷಕರ ಪ್ರಶ್ನೆಯಾಗಿದೆ. ಹೈವೋಲ್ಟೇಜ್‌ ಪ್ರೋಮೋದಲ್ಲಿ ಕೂಡ ಇದೇ ವಿಷಯವನ್ನು ವೀಕ್ಷಕರು ಗಮನಿಸಿ, ಹೇಳಿದ್ದಾರೆ. ಇನ್ನು ಶ್ರೇಷ್ಠ ಪಾತ್ರಧಾರಿ ನಟಿ ಕಾವ್ಯಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ “ಕೊನೆಯ ಬಾರಿಗೆ ಶ್ರೇಷ್ಠ ಮದುಮಗಳಾಗುತ್ತಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇದರರ್ಥ ಇದು ಕನಸಲ್ಲ. ಈ ಮೂಲಕ ತಾಂಡವ್‌-ಶ್ರೇಷ್ಠ ಮದುವೆ ಆಗಿದ್ದಾರೆ. ಫೆಬ್ರವರಿ 24ರಂದು ಈ ಎಪಿಸೋಡ್‌ ಪ್ರಸಾರ ಆಗಲಿದೆ. ಇಷ್ಟರೊಳಗಡೆ ಡಿವೋರ್ಸ್‌ ಆಗತ್ತಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಇನ್ನು ಡಿವೋರ್ಸ್‌ ಆಗದೆ ಮತ್ತೆ ಮದುವೆ ಆದರೆ ಅದು ಕಾನೂನಿನ ಪ್ರಕಾರ ತಪ್ಪು. ಇದಕ್ಕೋಸ್ಕರ ಮತ್ತೆ ತಾಂಡವ್‌ ಕಾನೂನು ಸಂಕಷ್ಟ ಎದುರಿಸಬಹುದು. 

Bhagyalakshmi Serial ನಟಿ ಗೌತಮಿ ಗೌಡ ಸದ್ಯ ನಟನೆ ಬಿಟ್ಟು MNC ಕಂಪೆನಿಯಲ್ಲಿ ಕೆಲಸ ಮಾಡ್ತಿರೋದ್ಯಾಕೆ?

ಕಥೆ ಏನು?
ತಾಂಡವ್- ಭಾಗ್ಯ ಮದುವೆಯಾಗಿ ಇಬ್ಬರು ಮಕ್ಕಳಿವೆ. ತಾಂಡವ್‌ಗೆ ಪತ್ನಿ ಕಂಡರೆ ಇಷ್ಟ ಇಲ್ಲ. ಈಗ ತಾಂಡವ್‌ ಇನ್ನೊಂದು ಮದುವೆ ಆಗಿದ್ದಾನೆ. ಗಂಡನನ್ನು ಉಳಿಸಿಕೊಳ್ಳಲು ಭಾಗ್ಯ ಒಂದಷ್ಟು ಹೋರಾಟ ಮಾಡಿದ್ದಾಳೆ. ಆದರೂ ಕೂಡ ಅವಳ ಪ್ರಯತ್ನಕ್ಕೆ ಬೆಲೆ ಸಿಗಲಿಲ್ಲ. ಈಗ ಪತಿಯಿಂದಲೂ ಭಾಗ್ಯ ದೂರ ಆಗಿದ್ದು, ತಾಳಿಯನ್ನು ಕಿತ್ತು ಎಸೆದಿದ್ದಾಳೆ.

ಪಾತ್ರಧಾರಿಗಳು
ತಾಂಡವ್-‌ ಸುದರ್ಶನ್‌ ರಂಗಪ್ರಸಾದ್‌
ಭಾಗ್ಯ- ಸುಷ್ಮಾ ಕೆ ರಾವ್‌
ಕುಸುಮಾ-ಪದ್ಮಜಾ ರಾವ್‌
ಶ್ರೇಷ್ಠ-ಕಾವ್ಯಾ ಗೌಡ