Asianet Suvarna News Asianet Suvarna News

ಭಾಗ್ಯಾಳ ಗುಡುಗಿಗೆ ತಾಂಡವ್ ಥಂಡಾ, ಹೆಂಡತಿ ಅಂದ್ರೇನು ಸುಮ್ಮನೇನಾ?

'ರೀ, ಹಾಗೇನೂ ಇಲ್ಲ. ಗುಂಡ ಸ್ಕೂಲಲ್ಲಿ ಜಗಳ ಮಾಡ್ಕೊಂಡು ಗಾಯ ಮಾಡ್ಕೊಂಡಿದಾನೆ, ಜೊತೆನಲ್ಲಿ ಇನ್ನೊಬ್ಬ ಹುಡ್ಗಂಗೂ ಗಾಯ ಆಗಿದೆ. ಗುಂಡಣ್ಣ ಅಪ್ಪಮ ನೋಡ್ಲೇಬೇಕು ಅಂತ ಹಠ ಮಾಡ್ತಾ ಇದಾನೆ

Bhagya talks with loud voice for Thandav in colors kannada bhagyalakshmi serial srb
Author
First Published Dec 23, 2023, 1:17 PM IST

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಕಥೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಭಾಗ್ಯಾ ತಾಂಡವ್‌ಗೆ ಕಾಲ್ ಮಾಡಿ ಗುಂಡಣ್ಣನಿಗೆ ಗಾಯ ಆಗಿದೆ. ಆದರೆ ಆತ ಔಷಧಿ ಹಚ್ಚಿಸಿಕೊಳ್ಳದೇ ಅಪ್ಪನ ನೋಡ್ಬೇಕು ಅಂತ ತುಂಬಾ ಹಠ ಮಾಡ್ತಿದಾನೆ. ದಯವಿಟ್ಟು ಒಮ್ಮೆ ಬಂದು ನೋಡ್ಕೊಂಡು ಹೋಗಿ ಎಂದು ತಾಂಡವ್‌ಗೆ ಕಾಲ್ ಮಾಡುತ್ತಾಳೆ. ಭಾಗ್ಯಾ ಮಾತು ಕೇಳಿ ಸಖತ್ ಕೋಪಗೊಂಡ ತಾಂಡವ್ ' ಇದ್ಯಾವಾಗ್ಲಿಂದ ಶುರು ಮಾಡ್ಕೊಂಡೆ, ಮಗನ ಇಟ್ಕೊಂಡು ನಾಟ್ಕ ಮಾಡೋದು? ನಾಚ್ಕೆ ಆಗಲ್ವ ನಿಂಗೆ?' ಎಂದು ಕೇಳಿ ಭಾಗ್ಯಾಗೆ ಕೋಪ ಬರುವಂತೆ ಮಾಡುತ್ತಾನೆ. 

ಭಾಗ್ಯಾ ಸ್ವಲ್ಪ ಸಮಾಧಾನ ತಂದುಕೊಂಡು 'ರೀ, ಹಾಗೇನೂ ಇಲ್ಲ. ಗುಂಡ ಸ್ಕೂಲಲ್ಲಿ ಜಗಳ ಮಾಡ್ಕೊಂಡು ಗಾಯ ಮಾಡ್ಕೊಂಡಿದಾನೆ, ಜೊತೆನಲ್ಲಿ ಇನ್ನೊಬ್ಬ ಹುಡ್ಗಂಗೂ ಗಾಯ ಆಗಿದೆ. ಗುಂಡಣ್ಣ ಅಪ್ಪಮ ನೋಡ್ಲೇಬೇಕು ಅಂತ ಹಠ ಮಾಡ್ತಾ ಇದಾನೆ ರೀ, ಅದಕ್ಕೇ ಹೇಳ್ದೆ ಅಷ್ಟೇ. ಮಕ್ಕಳನ್ನೆಲ್ಲ ಇಟ್ಕೊಂಡು ನಾನು ಆಟ ಆಡ್ತಿಲ್ಲ' ಎನ್ನಲು ತಾಂಡವ್ ಮತ್ತಷ್ಟು ಕೋಪಗೊಂಡು ಕೂಗಾಡುತ್ತಾನೆ. ತಾಂಡವ್ ಹೆಂಡತಿ ಭಾಗ್ಯಾಗೆ ಬೈಯ್ಯುವುದನ್ನು ನೋಡಿ ಶ್ರೇಷ್ಠಾಗೆ ಸಖತ್ ಖುಷಿ ಆಗುತ್ತದೆ. ಅತ್ತ ಭಾಗ್ಯಾಗೆ ಕೋಪ ನೆತ್ತಿಗೇರುತ್ತಿದೆ. 

'ನೋಡಿ, ಯೋಚ್ನೆ ಮಾಡಿ ಮಾತಾಡ್ರೀ. ಮಾತಿಗೊಂದು ಅರ್ಥ ಇರ್ಬೇಕು. ಮಗ ಹಠ ಮಾಡ್ತಿದಾನೆ ಅಂತ ಇರೋ ವಿಷ್ಯ ಹೇಳ್ದೆ ಅಷ್ಟೇ. ನಿಮಗೆ ಅರ್ಥ ಆಗುತ್ತೆ ಅಂದ್ಕೊಂಡಿದೀನಿ' ಅಂತ ಏರು ಧ್ವನಿಯಲ್ಲಿ ಹೇಳಲು ತಾಂಡವ್ ಫುಲ್ ಥಂಡಾ ಹೊಡೆದುಬಿಡುತ್ತಾನೆ. ಭಾಗ್ಯಾಳ ಮಾತಿನ ಧಾಟಿಗೆ ತಾಂಡವ್ ಹೆದರಿಕೊಂಡು ಬಿಟ್ಟಿದ್ದಾನೆ. ಭಾಗ್ಯಾಗೆ ಬೇಸರದ ಜತೆ ತುಂಬಾ ಕೋಪವೂ ಬಂದಿದೆ. ಶ್ರೇಷ್ಠಾಗೆ ತಾಂಡವ್ ಇನ್ನೂ ತನ್ನ ಪರವಾಗಿ ಇದ್ದಾನೆ ಎಂಬ ಭರವಸೆ ಹೆಚ್ಚಾಗಿ ಖುಷಿಯಾಗುತ್ತದೆ. ಆದರೆ, ಮಗ ಗುಂಡಣ್ಣ ಮಾತ್ರ ಗಾಯಗೊಂಡು ನೋವು ಅನುಭವಿಸುತ್ತಿದ್ದಾನೆ. 

ಶಾರುಖ್ ಖಾನ್ 'ಡಂಕಿ' ಡಮಾರ್ ಆಯ್ತು, ಪ್ರಭಾಸ್ 'ಸಲಾರ್' ಸೂಪರ್ ಹಿಟ್; ತಪ್ಪಿದ ಲೆಕ್ಕಾಚಾರ!

ಇತ್ತ ಕುಸುಮಾ ಮನೆಯಲ್ಲಿನ ಒಡವೆ ಕಾಣೆಯಾಗಿರುವುದನ್ನು ನೋಡಿ ಫುಲ್ ಗಾಬರಿಯಾಗಿದ್ದಾಳೆ. ಕುಸುಮಾಗೆ ಒಡವೆ ಏನಾಯ್ತು ಎಂಬ ಬಗ್ಗೆ ತೀವ್ರ ಭಯ, ಆತಂಕ ಶುರುವಾಗಿದೆ. ಭಾಗ್ಯಾ ತಾಯಿ ಸುನಂದಾ ಮೇಲೆ ಕುಸುಮಾಗೆ ಸಣ್ಣ ಸಂಶಯ ಮೂಡುತ್ತಿದೆ. ಅದನ್ನು ಬಚ್ಚಿಟ್ಟುಕೊಳ್ಳದೇ ಕುಸುಮಾ ಸುನಂದಾಗೆ ನೇರವಾಗಿಯೇ ಪ್ರಶ್ನೆ ಕೇಳುತ್ತಾಳೆ. 'ಸುನಂದಾ, ದಯವಿಟ್ಟು ನಿಜ ಹೇಳ್ಬಿಡಿ.. ಭಾಗ್ಯಾ ಮದುವೆನಲ್ಲಿ ಬೆಳ್ಳಿ ಆಭರಣಕ್ಕೆ ಬಂಗಾರದ ಲೇಪನ ಹಾಕಿಸಿ ಕೊಟ್ಟಿದ್ರಿ ನೀವು. ಆಮೇಲೆ ಭಾಗ್ಯಾ ಅತ್ತೆ ಆಭರಣನ ಕದ್ದಿದ್ದ್ರಿ. ಈಗ ನೀವು ನಮ್ಮನೆ ಆಭರಣ ಏನೂ ಮಾಡಿಲ್ಲ ತಾನೇ?' ಎಂದು ಸುನಂದಾರನ್ನು ಕೇಳಿಯೇಬಿಡುತ್ತಾರೆ. 

ಕಾಟೇರ ನಿರ್ದೇಶಕ ತರುಣ್ ಸುಧೀರ್ ಭವಿಷ್ಯ ಹೇಳಿದ ಜಗಪತಿ ಬಾಬು; ದರ್ಶನ್ ಬಗ್ಗೆ ಏನು ಹೇಳಿದ್ರು ನೋಡಿ!

ಸುನಂದಾಗೆ ತುಂಬಾ ಆತಂಕವಾಗಿದೆ. ಕುಸುಮಾಗೆ ಆಭರಣ ಹುಡುಕುವ ಬಗೆ ಹೇಗೆ? ಏನು ಮಾಡಬೇಕು ಎಂಬ ಯೋಚನೆ ತಲೆತುಂಬಾ ತುಂಬಿಕೊಂಡಿದೆ. ಅತ್ತ ಭಾಗ್ಯಾಗೆ ತಾಂಡವ್ ಹಠ ನೋಡಿ ಕೋಪ, ಬೇಸರ ಉಂಟಾಗಿದೆ, ಶ್ರೇಷ್ಠಾಗೆ ಭಾರೀ ಖುಷಿ. ಮುಂದೇನಾಗಲಿದೆ ಎಂಬುದನ್ನು ಸಂಚಿಕೆ ನೋಡುವ ಮೂಲಕ ತಿಳಿಯಬೇಕಿದೆ. ಅಂದಹಾಗೆ, ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ಕಲರ್ಸ್ ಕನ್ನಡದಲ್ಲಿ ಸಂಜೆ 7.00ಕ್ಕೆ ಪ್ರಸಾರ ಕಾಣುತ್ತಿದೆ. 

Follow Us:
Download App:
  • android
  • ios