Asianet Suvarna News Asianet Suvarna News

ಬೇರೆ ಹೆಣ್ಣಿನ ಹಿಂದೆ ಹೋಗುವವ ಇದ್ರೆಷ್ಟು, ಹೋದ್ರೆಷ್ಟು? ಎಲ್ಲರಿಗೂ ಸ್ಫೂರ್ತಿಯಾದವಳೇ ಅತ್ತರೆ ಹೇಗೆ ಎಂದ ಫ್ಯಾನ್ಸ್​!

ತಾಂಡವ್​ ಡಿವೋರ್ಸ್​ ಕೊಡುವ ಸುದ್ದಿ ಹೇಳಿ ಭಾಗ್ಯ ಎಚ್ಚರ ತಪ್ಪಿದ್ದಾಳೆ, ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಭಾಗ್ಯಲಕ್ಷ್ಮಿಗೆ ನೆಟ್ಟಿಗರು ಹೇಗೆಲ್ಲಾ ಧೈರ್ಯ ತುಂಬಿದ್ರು ನೋಡಿ...
 

Bhagya shocked and cried after hearing the news of Tandavs divorce fans reacts suc
Author
First Published Feb 5, 2024, 1:13 PM IST

ತಾಂಡವ್​ ಪತ್ನಿ ಭಾಗ್ಯಲಕ್ಷ್ಮಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಭಾಗ್ಯಳಿಗೆ ಇದು ತಿಳಿಯದ ವಿಷಯ. ಆದರೆ ಈ ಬಗ್ಗೆ ಇದಾಗಲೇ ತಾಂಡವ್​ ಅಮ್ಮ ಕುಸುಮಾಗೂ ಗೊತ್ತಾಗಿತ್ತು. ಆದರೆ ಭಾಗ್ಯ ಇದನ್ನು ಸಹಿಸುವವಳಲ್ಲ ಎಂದು ಯಾರಿಗೂ ಹೇಳದೇ ಸುಮ್ಮನಿದ್ದಳು. ಇದೀಗ ಭಾಗ್ಯಳ ಮಾವನಿಗೂ ವಿಷಯ ತಿಳಿದಿದೆ. ಬೇರೆಲ್ಲೋ ಹೋಗಿದ್ದ ಭಾಗ್ಯಳ ಮಾವ ವಾಪಸ್​ ಆಗಿದ್ದಾನೆ. ಶ್ರೇಷ್ಠಾಳ ಕುತಂತ್ರದಿಂದ ತಾಂಡವ್​ ಡಿವೋರ್ಸ್​ ಪತ್ರ ಕಳುಹಿಸಿದ್ದಾನೆ. ಅದು ಮಾವನ ಕೈಸೇರಿದೆ. ಮಗ ಸೊಸೆಗೆ ವಿಚ್ಛೇದನ ಕೊಡುತ್ತಿರುವ ಸುದ್ದಿ ಕೇಳಿ ಆತನಿಗೆ ಶಾಕ್​ ಆಗಿದೆ. ಅದೇ ಶಾಕ್​ನಲ್ಲಿಯೇ ಮೂರ್ಚೆ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದಾನೆ.

ಆತನನ್ನು ನೋಡಲು ಮನೆಯವರೆಲ್ಲರೂ ಆಸ್ಪತ್ರೆಗೆ ಬಂದಿದ್ದಾರೆ. ಭಾಗ್ಯ ಕೂಡ ಬಂದಿದ್ದಾಳೆ. ಮಾತಿನ ಭರದಲ್ಲಿ ಮಾವ ಭಾಗ್ಯಳಿಗೆ ವಿಷಯ ತಿಳಿಸಿಬಿಟ್ಟಿದ್ದಾನೆ. ಅಷ್ಟೇ. ಇದನ್ನು ಕೇಳುತ್ತಿದ್ದಂತೆಯೇ ಭಾಗ್ಯ ತಲೆತಿರುಗಿ ಬಿದ್ದಿದ್ದಾಳೆ. ಆಕೆಯನ್ನು ನೀರು ಹಾಕಿ ಎಚ್ಚರ ಮಾಡಲಾಗಿದೆ. ಅಷ್ಟರಲ್ಲಿ ವಿಷಯ ಏಕೆ ಭಾಗ್ಯಳಿಗೆ ಹೇಳಿದ್ರಿ ಎಂದು ಅತ್ತೆ ಗಂಡನಿಗೆ ಬೈದಿದ್ದಾಳೆ. ಭಾಗ್ಯ ಕೇಳಿಸಿಕೊಂಡದ್ದು ಸರಿಯಲ್ಲ ಎಂದು ಹೇಗಾದ್ರೂ ಮಾಡಿ ಹೇಳಬೇಕು ಎಂದು ಮಾವ ಅಂದುಕೊಳ್ಳುತ್ತಿದ್ದ. ಆದರೆ ಹೇಗೆ ಹೇಳುವುದು ಎಂದು ತಿಳಿಯಲಿಲ್ಲ. 

ಡ್ರೋನ್​ ಪ್ರತಾಪ್​ ರನ್ನರ್​ ಅಪ್​ ಆದ ಕುರಿತು ನಟಿ ತಾರಾ ಹೇಳಿದ್ದೇನು? ನೇರಪ್ರಸಾರದಲ್ಲಿ ಫ್ಯಾನ್ಸ್​ ಜೊತೆ ಮಾತು...

ಅದೇ ವೇಳೆ ಭಾಗ್ಯಳ ಅಮ್ಮ, ಡೈವೋರ್ಸ್​ ಕೊಟ್ಟಿಲ್ಲಮ್ಮಾ. ಹಾಗೊಂದು ವೇಳೆ ಆದ್ರೆ ಏನು ಮಾಡುವುದು ಅಂತ ಹೇಳಿದ್ದಷ್ಟೇ ಎಂದು ಮಾತನ್ನು ತಿರುಗಿಸಿದ್ದಾಳೆ. ಆದರೆ ಮಾವನ ಬಾಯಲ್ಲಿ ವಿಚ್ಛೇದನದ ಶಬ್ದ ಕೇಳುತ್ತಲೇ ಭಾಗ್ಯ ಕಂಗಾಲಾಗಿ ಹೋಗಿದ್ದಾಳೆ. ಹೀಗೆಲ್ಲಾ ಮತ್ತೊಮ್ಮೆ ಹೇಳಬೇಡಿ. ನಮ್ಮದು 16 ವರ್ಷದ ಸಂಸಾರ. ಅವರು ಬಿಟ್ಟು ಹೋದರೆ ಗತಿಯೇನು? ಮಕ್ಕಳು ಅಪ್ಪನಿಲ್ಲದೇ ಬೆಳೆಯಬೇಕಾ ಎಂದೆಲ್ಲಾ ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಮನೆಯರಿಗೆ ಆಕೆಯನ್ನು ಹೇಗೆ ಸಮಾಧಾನ ಮಾಡಬೇಕು ಎಂದು ತಿಳಿಯುತ್ತಿಲ್ಲ.

ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಹಲವಾರು ಮಂದಿ ಕಮೆಂಟ್​ ಮೂಲಕ ಭಾಗ್ಯಳಿಗೆ ಸಾಂತ್ವನ ಹೇಳುತ್ತಿದ್ದಾರೆ. ನೀನು ಗಟ್ಟಿಗಿತ್ತಿ, ಎಷ್ಟೋ ಮಹಿಳೆಯರಿಗೆ ಸ್ಫೂರ್ತಿ. ಇದು ಧಾರಾವಾಹಿಯ ಪಾರ್ಟ್​ ಎಂದುಕೊಳ್ಳದೇ ತಮ್ಮ ಮನೆಯ ವಿಷಯ ಎಂದು ನೋಡುವ ವರ್ಗವೂ ಇದೆ. ಅಂಥವರಿಗೆ ನೀನು ಸ್ಫೂರ್ತಿ. ತಾಂಡವ್​ನಂಥ ಗಂಡ ಇದ್ದರೆಷ್ಟು, ಬಿಟ್ಟರೆಷ್ಟು ಎನ್ನುತ್ತಿದ್ದಾರೆ. ಕುಟುಂಬಕ್ಕೆ, ಪತ್ನಿಗೆ ಕೊನೆಗೆ ಮಕ್ಕಳಿಗೂ ಆಗದವ, 16 ವರ್ಷದ ಸಂಸಾರ ಬಿಟ್ಟು ಬೇರೊಬ್ಬಳ ಹಿಂದೆ ಹೋಗುವವನ ನಂಬಿ ನೀನು ಸಂಸಾರ ಮಾಡಲು ಸಾಧ್ಯವೆ ಎಂದು ಪ್ರಶ್ನಿಸುತ್ತಿದ್ದಾರೆ. ಇಂದು ಶ್ರೇಷ್ಠಾ, ನಾಳೆ ಇನ್ನೊಬ್ಬಳು... ಇಂಥ ಹೆಣ್ಣುಮಕ್ಕಳಿಗೆ ಮರುಳಾಗುವವ ಪತಿಯಾಗಲು ಸಾಧ್ಯವೇ? ಇಂಥ ಗಂಡನಿಗಾಗಿ ಕಣ್ಣೀರು ಹಾಕುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಲೈವ್​ನಲ್ಲಿ ನಮ್ರತಾ ಸೌಂದರ್ಯ ಹೊಗಳಿದ ಕಾರ್ತಿಕ್​: ಸ್ನೇಹಿತ್​ನ ಕಾಲು ಹೀಗೆ ಎಳೆಯೋದಾ ಫ್ಯಾನ್ಸ್​?

Follow Us:
Download App:
  • android
  • ios